ನವದೆಹಲಿ: ಸಶಸ್ತ್ರ ಪಡೆಗಳಲ್ಲಿನ ಮಾನವ ಸಂಪನ್ಮೂಲಕ್ಕೆ ಸಂಬಂಧಿಸಿದಂತೆ ಹೊಸ ಸುಧಾರಣೆಗಳನ್ನು ತರಲು ರಕ್ಷಣಾ ಸಿಬ್ಬಂದಿ ಮುಖ್ಯಸ್ಥ ಬಿಪಿನ್ ರಾವತ್ ಮುಂದಾಗಿದ್ದು, ಅಧಿಕಾರಿಗಳ ನಿವೃತ್ತಿ ವಯಸ್ಸು ಹಾಗೂ ತಾಂತ್ರಿಕ ಇಲಾಖೆಗಳಲ್ಲಿ ಸೈನಿಕರ ಹೆಚ್ಚಳಕ್ಕೆ ಚಿಂತನೆ ಮಂಡಿಸಿದ್ದಾರೆ
ಈ ಹೊಸ ಚಿಂತನೆಗಳ ಭಾಗವಾಗಿ ಮಿಲಿಟರಿ ವ್ಯವಹಾರಗಳ ಇಲಾಖೆಯು ರಕ್ಷಣಾ ಪಡೆಗಳಲ್ಲಿ ಹೆಚ್ಚು ನುರಿತ ಸಿಬ್ಬಂದಿಯನ್ನು ಉಳಿಸಿಕೊಳ್ಳಲು ಹಾಗೂ ಅಕಾಲಿಕ ನಿವೃತ್ತಿಯನ್ನು ತೆಗೆದುಕೊಳ್ಳುವ ಅಧಿಕಾರಿಗಳ ಪಿಂಚಣಿಯನ್ನು ಪರಿಷ್ಕರಣೆ ಮಾಡಲಾಗುತ್ತದೆ ಎಂದು ಪ್ರಸ್ತಾಪಿಸಲಾಗಿದೆ.
ಸಶಸ್ತ್ರ ಪಡೆಗಳಲ್ಲಿ ಮಾನವಶಕ್ತಿಯನ್ನು ಗರಿಷ್ಠವಾಗಿ ಬಳಸಿಕೊಳ್ಳಲು ಈ ಎಲ್ಲಾ ಪ್ರಸ್ತಾಪಗಳನ್ನು ಮಂಡಿಸಲಾಗುತ್ತದೆ ಎಂದು ಸರ್ಕಾರದ ಮೂಲಗಳು ಮಾಧ್ಯಮಗಳಿಗೆ ತಿಳಿಸಿವೆ. ಇದರಂತೆ ಕರ್ನಲ್ಗಳ ನಿವೃತ್ತಿ ವಯಸ್ಸನ್ನು ಮತ್ತು ಕರ್ನಲ್ ಶ್ರೇಣಿಯ ವಾಯುಪಡೆ ಹಾಗೂ ನೌಕಾಪಡೆಯ ಅಧಿಕಾರಿಗಳ ನಿವೃತ್ತಿ ವಯಸ್ಸನ್ನು 54ರಿಂದ 57ಕ್ಕೆ ಏರಿಸಲು, ಬ್ರಿಗೇಡಿಯರ್ಗಳು ಹಾಗೂ ಬ್ರಿಗೇಡಿಯರ್ ಶ್ರೇಣಿಯ ಅಧಿಕಾರಿಗಳ ನಿವೃತ್ತಿ ವಯಸ್ಸನ್ನು 56ರಿಂದ 58ಕ್ಕೆ,ಮೇಜರ್ ಜನರಲ್ಗಳ ನಿವೃತ್ತಿ ವಯಸ್ಸು 58ರಿಂದ 59ಕ್ಕೆ ಏರಿಸಲು ಪ್ರಸ್ತಾಪ ಮಾಡಲಾಗಿದೆ.
ಇನ್ನು ಪಿಂಚಣಿ ವಿಚಾರಕ್ಕೆ ಬರುವುದಾದರೆ 20-25 ವರ್ಷ ಸೇವೆ ಸಲ್ಲಿಸಿದ ಸಿಬ್ಬಂದಿಗೆ ಶೇಕಡಾ 50ರಷ್ಟು ಪಿಂಚಣಿ ಹಾಗೂ 25ರಿಂದ 30 ವರ್ಷ ಸೇವೆ ಸಲ್ಲಿಸಿರುವ ಸಿಬ್ಬಂದಿಗೆ ಶೇಕಡಾ 60ರಷ್ಟು ಪಿಂಚಣಿ ನೀಡಲು ಪ್ರಸ್ತಾಪಿಸಲಾಗಿದೆ. 35 ವರ್ಷ ಸೇವೆ ಸಲ್ಲಿಸಿದರಿಗೆ ಪೂರ್ಣ ಪ್ರಮಾಣದ ಪಿಂಚಣಿ ನೀಡಲು ನಿರ್ಧಾರ ಮಾಡಲಾಗಿದೆ.
ಯುದ್ಧಭೂಮಿಯಲ್ಲಿ ಗಾಯಗೊಂಡು ನಿವೃತ್ತಿ ಹೊಂದಿದವರಿಗೆ ಯಾವುದೇ ರೀತಿಯಲ್ಲಿ ಪಿಂಚಣಿ ಪರಿಷ್ಕರಣೆ ಇಲ್ಲ ಎಂದು ಸರ್ಕಾರದ ಉನ್ನತ ಮೂಲಗಳು ತಿಳಿಸಿ