ETV Bharat / bharat

ನಾಳೆ ಸಿಬಿಎಸ್‌ಇ 10ನೇ ತರಗತಿ ಫಲಿತಾಂಶ ಪ್ರಕಟ - ಕೇಂದ್ರ ಪ್ರೌಢ ಶಿಕ್ಷಣ ಮಂಡಳಿ

ನಾಳೆ ಸಿಬಿಎಸ್‌ಇ 10ನೇ ತರಗತಿ ಬೊರ್ಡ್​ ಎಕ್ಸಾಂನ ಫಲಿತಾಂಶ ಪ್ರಕಟವಾಗಲಿದೆ ಎಂದು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ರಮೇಶ್ ಪೊಕ್ರಿಯಾಲ್ ಟ್ವೀಟ್​ ಮಾಡಿ ತಿಳಿಸಿದ್ದಾರೆ.

CBSE to announce class 10 results on July 15
ಸಿಬಿಎಸ್‌ಇ 10ನೇ ತರಗತಿ ಫಲಿತಾಂಶ
author img

By

Published : Jul 14, 2020, 4:15 PM IST

ನವದೆಹಲಿ: ಕೇಂದ್ರ ಪ್ರೌಢ ಶಿಕ್ಷಣ ಮಂಡಳಿಯು (ಸಿಬಿಎಸ್‌ಇ) 10ನೇ ತರಗತಿ ಪರೀಕ್ಷೆಯ ಫಲಿತಾಂಶವನ್ನು ಜುಲೈ 15 ರಂದು ಪ್ರಕಟಿಸಲಿದೆ.

ಈ ಕುರಿತು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ರಮೇಶ್ ಪೊಕ್ರಿಯಾಲ್ ಟ್ವೀಟ್​ ಮಾಡಿ ಸ್ಪಷ್ಟನೆ ನೀಡಿದ್ದಾರೆ. "ನನ್ನ ಆತ್ಮೀಯ ಮಕ್ಕಳೇ, ಪೋಷಕರೇ ಹಾಗೂ ಶಿಕ್ಷಕರೇ, ನಾಳೆ ಸಿಬಿಎಸ್‌ಇ 10ನೇ ತರಗತಿ ಬೊರ್ಡ್​ ಎಕ್ಸಾಂನ ಫಲಿತಾಂಶ ಪ್ರಕಟವಾಗಲಿದ್ದು, ಎಲ್ಲಾ ವಿದ್ಯಾರ್ಥಿಗಳಿಗೂ ಬೆಸ್ಟ್ ಆಫ್​ ಲಕ್​" ಎಂದು ಪೊಕ್ರಿಯಾಲ್ ಶುಭ ಕೋರಿದ್ದಾರೆ.

  • My dear Children, Parents, and Teachers, the results of class X CBSE board examinations will be announced tomorrow. I wish all the students best of luck.👍#StayCalm #StaySafe@cbseindia29

    — Dr. Ramesh Pokhriyal Nishank (@DrRPNishank) July 14, 2020 " class="align-text-top noRightClick twitterSection" data=" ">

ಲಾಕ್​ಡೌನ್​ಗೂ ಮೊದಲೇ 10 ಮತ್ತು 12ನೇ ತರಗತಿಯ ಕೆಲ ವಿಷಯಗಳಿಗೆ ಪರೀಕ್ಷೆಗಳು ನಡೆದಿದ್ದವು. ಸುಪ್ರೀಂಕೋರ್ಟ್​ ಅಧಿಸೂಚನೆ ಮೇರೆಗೆ ಕೋವಿಡ್​ ಭೀತಿಯಿಂದಾಗಿ ಉಳಿದ ಪರೀಕ್ಷೆಗಳನ್ನು ಕೇಂದ್ರೀಯ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ರದ್ದುಗೊಳಿಸಿತ್ತು. ಹೀಗಾಗಿ ಪರ್ಯಾಯ ಮೌಲ್ಯಮಾಪನ ಆಧಾರದ ಮೇಲೆ 10ನೇ ಕ್ಲಾಸ್​ ವಿದ್ಯಾರ್ಥಿಗಳಿಗೆ ಅಂಕ ನೀಡಿ ಮಂಡಳಿಯು ಫಲಿತಾಂಶ ಪ್ರಕಟಿಸುತ್ತಿದೆ.

ನಿನ್ನೆ ಸಿಬಿಎಸ್​​ಇ 12ನೇ ತರಗತಿ ಫಲಿತಾಂಶ ಪ್ರಕಟವಾಗಿತ್ತು. ಆದರೆ ಈ ಬಾರಿ ಯಾವುದೇ ಮೆರಿಟ್​ ಲಿಸ್ಟ್​ ಬಿಡುಗಡೆ ಮಾಡಿರಲಿಲ್ಲ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.