ETV Bharat / bharat

ಸಿಬಿಐ ಅಧಿಕಾರಿ ನಿವಾಸದ ಮೇಲೆ ಸಿಬಿಐ ಅಧಿಕಾರಿಗಳಿಂದಲೇ ದಾಳಿ!

ಭ್ರಷ್ಟಾಚಾರ ಆರೋಪದಡಿ ಸಿಬಿಐ ತನ್ನದೇ ಇಲಾಖೆಯ ಅಧಿಕಾರಿಗಳ ನಿವಾಸದ ಮೇಲೆ ದಾಳಿ ನಡೆಸಿದೆ. ಬ್ಯಾಂಕ್​​ಗಳಿಗೆ ವಂಚಿಸಿರುವ ಎರಡು ಖಾಸಗಿ ಕಂಪನಿಗಳ ವಿರುದ್ಧ ತನಿಖೆ ನಡೆಯುತ್ತಿರುವ ವೇಳೆ ಅದೇ ಕಂಪನಿಗಳಿಂದ ಅಧಿಕಾರಿ ರಿಷಿ ಲಂಚ ಸ್ವೀಕರಿಸಿರುವುದಾಗಿ ಸಿಬಿಐ ಆರೋಪಿಸಿದೆ.

UP
ದಾಳಿ
author img

By

Published : Jan 20, 2021, 5:05 PM IST

ನವದೆಹಲಿ/ ಸಹರಾನ್​ಪುರ: ಭ್ರಷ್ಟಾಚಾರ ಆರೋಪದಡಿ ಸಿಬಿಐ ತನ್ನದೇ ಇಲಾಖೆಯ ಅಧಿಕಾರಿ, ಡಿವೈಎಸ್​​ಪಿ ಆರ್​.ಕೆ.ರಿಷಿ ನಿವಾಸದ ಮೇಲೆ ದಾಳಿ ನಡೆಸಿದೆ. ಉತ್ತರ ಪ್ರದೇಶದ ರೂರ್ಕಿ ಮತ್ತು ಸಹರಾನ್​ಪುರದ ಎರಡು ಸ್ಥಳಗಳಲ್ಲಿ ಏಕ ಕಾಲಕ್ಕೆ ದಾಳಿ ನಡೆಸಿದ ಅಧಿಕಾರಿಗಳ ತಂಡ, ಶೋಧ ಕಾರ್ಯದಲ್ಲಿ ತೊಡಗಿದೆ.

ಬ್ಯಾಂಕ್​​ಗಳಿಗೆ ವಂಚಿಸಿರುವ ಎರಡು ಖಾಸಗಿ ಕಂಪನಿಗಳ ವಿರುದ್ಧ ತನಿಖೆ ನಡೆಯುತ್ತಿರುವ ವೇಳೆ ಅದೇ ಕಂಪನಿಗಳಿಂದ ಅಧಿಕಾರಿ ರಿಷಿ ಲಂಚ ಸ್ವೀಕರಿಸಿರುವುದಾಗಿ ಸಿಬಿಐ ಆರೋಪಿಸಿದೆ.

ಡಿವೈಎಸ್​​ಪಿ ಆರ್​.ಕೆ.ರಿಷಿ ಮಾತ್ರವಲ್ಲದೆ ಭ್ರಷ್ಟಾಚಾರ ಆರೋಪದಡಿ ಸಿಬಿಐನ ಆರ್.ಕೆ.ಸಾಂಗ್ವಾನ್, ಇನ್ಸ್‌ಪೆಕ್ಟರ್ ಕಪಿಲ್ ಧಂಕಡ್ ಮತ್ತು ಸ್ಟೆನೊಗ್ರಾಫರ್ ಸಮೀರ್ ಕುಮಾರ್ ಸಿಂಗ್ ವಿರುದ್ಧವೂ ಎಫ್​​ಐಆರ್​ ದಾಖಲಿಸಿದೆ.

ಭ್ರಷ್ಟಾಚಾರದಲ್ಲಿ ಭಾಗಿಯಾಗಿರುವ ಆರೋಪ ಹೊತ್ತಿರುವ ವಕೀಲರಾದ ಅರವಿಂದ್ ಕುಮಾರ್ ಗುಪ್ತಾ, ಮನೋಹರ್ ಮಲ್ಲಿಕ್, ಶ್ರೀ ಶ್ಯಾಮ್ ಪಲ್ಪ್ ಮತ್ತು ಬೋರ್ಡ್ ಮಿಲ್ಸ್ ಪ್ರೈವೇಟ್ ಲಿಮಿಟೆಡ್​​ನ ಹೆಚ್ಚುವರಿ ನಿರ್ದೇಶಕ ಮಂದೀಪ್ ಕೌರ್ ಧಿಲ್ಲೋನ್ ಮತ್ತು ಫ್ರಾಸ್ಟ್ ಇಂಟರ್ನ್ಯಾಷನಲ್ ಪ್ರೈವೇಟ್ ಲಿಮಿಟೆಡ್‌ನ ನಿರ್ದೇಶಕ ಸುಜಯ್ ಮತ್ತು ಉದಯ್ ದೇಸಾಯಿ ಹೆಸರನ್ನೂ ಎಫ್​​​ಐಆರ್​ನಲ್ಲಿ ಉಲ್ಲೇಖಿಸಲಾಗಿದೆ.

ಜನವರಿ 14ರಂದು ದೆಹಲಿ, ಗುರುಗ್ರಾಮ್, ಗಾಜಿಯಾಬಾದ್, ನೋಯ್ಡಾ, ಮೀರತ್ ಮತ್ತು ಕಾನ್ಪುರದಲ್ಲಿರುವ ಆರೋಪಿಗಳ ನಿವಾಸ ಹಾಗೂ ಕಚೇರಿಗಳ ಮೇಲೆ ಸಿಬಿಐ ದಾಳಿ ಮಾಡಿ ಶೋಧ ನಡೆಸಿತ್ತು.

ಸಿಬಿಐ ಪ್ರಕಾರ ಶ್ರೀ ಶ್ಯಾಮ್ ಪಲ್ಪ್ ಮತ್ತು ಬೋರ್ಡ್ ಮಿಲ್ಸ್ ಕಂಪನಿಯಿಂದ ಹಿರಿಯ ತನಿಖಾಧಿಕಾರಿ ಸಾಂಗ್ವಾನ್​​​​​ 10 ಲಕ್ಷ ರೂಪಾಯಿ ಪಡೆದು, ತನಿಖೆಗೆ ಸಂಬಂಧಿಸಿದ ಗೌಪ್ಯ ಮಾಹಿತಿಯನ್ನು ಕಂಪನಿಗೆ ನೀಡಿದ್ದಾರೆ. ಸಾಂಗ್ವಾನ್​ಗೆ ಸಹಕರಿಸಿದ್ದಕ್ಕಾಗಿ ರಿಷಿಗೂ 10 ಲಕ್ಷ ರೂಪಾಯಿ ನೀಡಿದ್ದಾರೆ ಎಂದು ಆರೋಪಿಸಿದೆ.

ಕಂಪನಿಗಳು ಹಾಗೂ ಅಧಿಕಾರಿಗಳ ಮಧ್ಯೆ ವ್ಯವಹಾರ ನಡೆಯುವಾಗ ಮಧ್ಯಸ್ಥಿಕೆ ವಹಿಸಿದ್ದ ವಕೀಲರೂ 15 ಲಕ್ಷ ರೂಪಾಯಿ ಪಡೆದಿದ್ದಾರೆ ಎನ್ನಲಾಗಿದೆ. ಇನ್ಸ್‌ಪೆಕ್ಟರ್ ಕಪಿಲ್ ಧಂಕಡ್ ಕೂಡ ಎರಡೂವರೆ ಲಕ್ಷ ರೂಪಾಯಿ ಪಡೆದಿದ್ದಾರೆ ಎನ್ನಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.