ಅಮರಾವತಿ(ಆಂಧ್ರಪ್ರದೇಶ): ವಿಶಾಖಪಟ್ಟಣದ ವೈದ್ಯ ಸುಧಾಕರ್ ಪ್ರಕರಣದ ವಿಚಾರಣೆಯನ್ನು ಮುಂದುವರೆಸಿರುವ ಸಿಬಿಐ ಕೋರ್ಟ್, ಸುಧಾಕರ್ ವಿರುದ್ಧ ಎಫ್‌ಐಆರ್ ದಾಖಲಿಸಿದೆ. ಸಿಬಿಐ ವೆಬ್‌ಸೈಟ್‌ನಲ್ಲಿ ಎಫ್‌ಐಆರ್ ಪ್ರತಿ ಸಹ ಲಭ್ಯವಿದೆ.
ಕಾನ್ಸ್ಟೇಬಲ್ ಬೆಲಗಲ ವೆಂಕಟರಮಣ ದೂರಿನ ಆಧಾರದ ಮೇಲೆ ಡಾ ಸುಧಾಕರ್ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಬೀದಿ ಬದಿಯ ಜನರು ಆತಂಕಗೊಳ್ಳುವ ರೀತಿಯಲ್ಲಿ ಸುಧಾಕರ್ ವರ್ತಿಸಿದ್ದಾರೆ ಎಂಬ ಅಂಶದ ಆಧಾರ ಮೇಲೆ ಕೇಸ್ ದಾಖಲಿಸಿಕೊಂಡಿದ್ದಾರೆ.
ಮೇ 16 ರಂದು ಸುಧಾಕರ್ ವಿರುದ್ಧ ಪಟ್ಟಣ ಪೊಲೀಸರು 353, 427, 506 ಸೆಕ್ಷನ್‌ಗಳಡಿ ಕೇಸ್ ದಾಖಲಿಸಿಕೊಂಡಿದ್ದರು. ಅಂದಿನ ಎಫ್ಐಆರ್ ಆಧಾರವಾಗಿಟ್ಟುಕೊಂಡು ಪ್ರಸ್ತುತ ಪ್ರಕರಣ ದಾಖಲಿಸಿದ್ದು, ಹೈಕೋರ್ಟ್ ಆದೇಶಾನುಸಾರ ತನಿಖೆ ನಡೆಸುತ್ತಿರುವುದಾಗಿ ಸಿಬಿಐ ಅಧಿಕಾರಿಗಳು ತಿಳಿಸಿದ್ದಾರೆ.