ETV Bharat / bharat

ಎಚ್ಚರ.. ಎಚ್ಚರ.. ಆಲ್ಕೋಹಾಲ್ ಮಿಶ್ರಿತ ಸ್ಯಾನಿಟೈಸರ್​​​​ಗಳು ದಹನಶೀಲ ಗುಣ ಹೊಂದಿವೆ ! - Alcohol mixed sanitizers have a non-combustible properties!

ಕೊರೊನಾ, ಈ ಹೆಸರು ಸ್ಯಾನಿಟೈಸರ್‌ಗಳು ಮತ್ತು ಮುಖಗವಸುಗಳ ಜೊತೆಗೆ ತಳುಕು ಹಾಕಿಕೊಂಡಿದ್ದು ಮಾರಣಾಂತಿಕ ದಾಳಿಗೆ ಧನ್ಯವಾದ ಹೇಳಬೇಕು. ಆಗಿಂದಾಗ್ಗೆ ಸ್ಯಾನಿಟೈಸರ್‌ಗಳನ್ನು ಬಳಕೆ ಮಾಡುವುದರಿಂದ ವೈರಾಣುಗಳ ಸಂಖ್ಯೆ ಕಡಿಮೆ ಆಗಲಿವೆ ಎಂದು ರೋಗಶಾಸ್ತ್ರಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಆಲ್ಕೋಹಾಲ್ ಮಿಶ್ರಿತ ಸ್ಯಾನಿಟೈಸರ್ ಗಳು ದಹನಶೀಲ ಗುಣ ಹೊಂದಿವೆ
caution-alcohol-mixed-sanitizers-have-a-non-combustible-properties
author img

By

Published : Mar 26, 2020, 5:05 PM IST

ಆದರೆ ಅಂಗೈಗಳನ್ನು ಶುಚಿ ಮಾಡುವ ಈ ಶೀತಲ ಸ್ಯಾನಿಟೈಜರ್ ಮಿಶ್ರಣ ಕೆಲವೊಮ್ಮೆ ಅಗ್ನಿ ಅವಘಡಗಳಿಗೂ ಕಾರಣ ಆಗಬಹುದು. ಹೇಗೆ ಎಂದು ಆಶ್ಚರ್ಯವೇ? ಈ ಸ್ಯಾನಿಟೈಸರ್‌ಗಳಲ್ಲಿ ಆಲ್ಕೋಹಾಲ್ ಇರುವುದು ಇದಕ್ಕೆ ಕಾರಣ ಎಂದು ತಜ್ಞರು ಹೇಳುತ್ತಾರೆ. ಕೊರೊನಾ ವ್ಯಾಪಿಸುತ್ತಿರುವ ಈ ದಿನಗಳಲ್ಲಿ, ಬಹುತೇಕ ಜನ ಆಲ್ಕೋಹಾಲ್ ಆಧಾರಿತ ಹ್ಯಾಂಡ್ ಸ್ಯಾನಿಟೈಸರ್​​​ಗಳ ಕಡೆಗೆ ಮುಖ ಮಾಡಿದ್ದಾರೆ. ಈ ಸ್ಯಾನಿಟೈಸರ್‌ಗಳು ರೋಗ ಹರಡುವುದನ್ನು ತಡೆಯಲು ಸಹಾಯ ಮಾಡಿದರೂ ಕೂಡ ಗೃಹಿಣಿಯರು ಮತ್ತು ಮಕ್ಕಳನ್ನು ಅಪಾಯಕ್ಕೆ ಸಿಲುಕಿಸುವ ಸಾಧ್ಯತೆ ಇದೆ ಎಂದು ಉದ್ಯಮದ ತಜ್ಞರು ಎಚ್ಚರಿಕೆ ನೀಡಿದ್ದಾರೆ. ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ (ಸಿಡಿಸಿ) ಪ್ರಕಟಿಸಿದ ವರದಿಯಲ್ಲಿ ಈ ಅಪಾಯಗಳನ್ನು ಪ್ರಮುಖವಾಗಿ ಉಲ್ಲೇಖ ಮಾಡಲಾಗಿದೆ.

ಜನರು ಮನೆಯ ಒಳಗೆ ವಾಸ ಮಾಡುತ್ತಿದ್ದರೂ ಸಹ ಆಗಾಗ್ಗೆ ಕೈ ತೊಳೆಯಬೇಕು ಎಂದು ಆರೋಗ್ಯ ಸಿಬ್ಬಂದಿ ಶಿಫಾರಸು ಮಾಡಿದ್ದಾರೆ. ಸಾಬೂನುಗಳಿಗೆ ನೀರು ಅಗತ್ಯ ಇದ್ದು ನೊರೆ ಬರುವ ಕಾರಣದಿಂದಾಗಿ ಜನರು ಅವುಗಳ ಬದಲು ಸ್ಯಾನಿಟೈಸರ್‌ಗಳ ಬಳಕೆಗೆ ಆದ್ಯತೆ ನೀಡಿದರು, ಹ್ಯಾಂಡ್ ಸ್ಯಾನಿಟೈಸರ್‌ಗಳಲ್ಲಿನ ಆಲ್ಕೋಹಾಲ್ ಶೇಕಡಾ 60 ರಿಂದ 90 ರ ನಡುವೆ ಇರುತ್ತದೆ. ಈ ಆಲ್ಕೊಹಾಲ್ ಮಿಶ್ರಣವು 100 ಡಿಗ್ರಿ ಸೆಲ್ಸಿಯಸ್​​​ ಗಿಂತಲೂ ಕಡಿಮೆ ಉಷ್ಣಾಂಶದಲ್ಲಿಯೇ ಸುಡುವಂತಹದ್ದಾಗಿದೆ. ಆಗಷ್ಟೇ ಸ್ಯಾನಿಟೈಸರಿನಿಂದ ಕೈ ಸ್ವಚ್ಛ ಗೊಳಿಸಿ ಗ್ಯಾಸ್ ಸ್ಟೌವ್ ಅಥವಾ ಬೆಂಕಿಕಡ್ಡಿ ಉರಿಸುವುದರಿಂದ ಕೈಗಳು ಸುಟ್ಟು ಹೋಗಬಹುದು. ಆಲ್ಕೋಹಾಲ್ ಎಷ್ಟು ಪ್ರಮಾಣದಲ್ಲಿ ಆವರಿಸಿರುತ್ತದೆಯೋ ಅಷ್ಟೂ ಪ್ರಮಾಣದಲ್ಲಿ ಸುಟ್ಟಗಾಯಗಳು ಆಗಬಹುದು. ಈ ನೈರ್ಮಲ್ಯಕಾರಕ ಮಕ್ಕಳನ್ನು ಸಹ ಅಪಾಯಕ್ಕೆ ಸಿಲುಕಿಸಬಹುದು ಎಂದು ಸಿಡಿಸಿ ವರದಿ ಬಹಿರಂಗಪಡಿಸಿದೆ. ವರದಿಯು ಮಕ್ಕಳನ್ನು ಎರಡು ವಯೋಮಾನದಡಿ ವರ್ಗೀಕರಣ ಮಾಡಿದೆ; 0 ರಿಂದ 5 ಮತ್ತು 6 ರಿಂದ 10 ವರ್ಷಗಳು.

ಇಲ್ಲಿಯವರೆಗೆ ಸಂಭವಿಸಿದ ಶೇ 91 ಅವಘಡಗಳಲ್ಲಿ 0 - 5 ವರ್ಷದ ಮಕ್ಕಳು ತೊಂದರೆ ಅನುಭವಿಸಿದ್ದು ಈ ವಯಸ್ಸಿನವರಲ್ಲಿ ಇದರ ಪರಿಣಾಮ ಹೆಚ್ಚಾಗಿದೆ. 5 ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳಲ್ಲಿ ಚರ್ಮ ಮತ್ತು ಗಂಟಲು ಸಮಸ್ಯೆಗಳು ಕಂಡುಬರುವ ಅಪಾಯ ಇದೆ. ಕೆಲವೊಮ್ಮೆ, ಮಕ್ಕಳು ಸ್ಯಾನಿಟೈಸರ್‌ ಬಳಸಿದ ನಂತರ ಆಕಸ್ಮಿಕವಾಗಿ ಬಾಯಿಗೆ ಕೈ ಹಾಕುತ್ತಾರೆ. ಪರಿಣಾಮ, ಅವರು ವಾಂತಿ, ಗಂಟಲು ಬೇನೆ, ಹೊಟ್ಟೆ ಕೆಳಭಾಗದಲ್ಲಿ ನೋವು ಮತ್ತು ಅತಿಸಾರದಂತಹ ಸಮಸ್ಯೆಗಳಿಂದ ಬಳಲಬಹುದು. ಅಪರೂಪದ ಸಂದರ್ಭಗಳಲ್ಲಿ, ಉಸಿರಾಟದ ತೊಂದರೆ, ಕೋಮಾ, ಹೈಪೊಗ್ಲಿಸಿಮಿಯಾ ಮುಂತಾದ ತೊಂದರೆಗಳು ಮತ್ತು ಚಯಾಪಚಯ ಚಟುವಟಿಕೆ ಕಡಿಮೆಯಾಗುವಂತಹ ಶ್ವಾಸಕೋಶದ ಕಾಯಿಲೆಗಳಿಗೆ ತುತ್ತಾಗುವ ಅಪಾಯ ಇದೆ. ಕೋವಿಡ್ - 19 ಹರಡುವುದನ್ನು ತಡೆಗಟ್ಟಲು ಆಗಾಗ್ಗೆ ಕೈ ತೊಳೆಯುವುದಕ್ಕೆ ತಜ್ಞರು ಹೆಚ್ಚು ಶಿಫಾರಸು ಮಾಡಿದ್ದಾರೆ. ವಾಸ್ತವವಾಗಿ, ಅವರು ಸ್ಯಾನಿಟೈಸರ್‌ಗಳ ಬದಲು ಸೋಪ್ ಮತ್ತು ನೀರನ್ನು ಬಳಸಬೇಕು ಎಂದು ಜನರಿಗೆ ಸಲಹೆ ನೀಡಿದ್ದಾರೆ. ಜನರು ತಮ್ಮ ಮನೆಯೊಳಗೆ ಇದ್ದರೂ ಕೂಡ ಪ್ರತಿ 15 ನಿಮಿಷಕ್ಕೆ ಒಮ್ಮೆ ಕೈ ತೊಳೆಯಬೇಕು ಎಂದು ಆಗ್ರಹಿಸಿದ್ದಾರೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.