ETV Bharat / bharat

ಏರ್​ಪೋರ್ಟ್​ನಲ್ಲಿ ಅದ್ಧೂರಿ ಸ್ವಾಗತ ಸಮಾರಂಭ ಏರ್ಪಡಿಸಿದವರ ವಿರುದ್ಧ ಎಫ್​ಐಆರ್

ಕೊಚ್ಚಿಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ರಿಯಾಲಿಟಿ ಶೋದ ನಟರೊಬ್ಬರ ಸ್ವಾಗತಕ್ಕೆ ಅದ್ಧೂರಿ ಸಮಾರಂಭ ಏರ್ಪಡಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ 79 ಜನರ ವಿರುದ್ಧ ಎಫ್​ಐಆರ್ ದಾಖಲಿಸಲಾಗಿದೆ.

Case registered against Television show contestant fans for gathering in Cochin International Airport
ಏರ್​ಪೋರ್ಟ್​ನಲ್ಲಿ ಅದ್ದೂರಿ ಸ್ವಾಗತ ಸಮಾರಂಭ ಏರ್ಪಡಿಸಿದವರ ಮೇಲೆ ಬಿತ್ತು ಎಫ್​ಐಆರ್!
author img

By

Published : Mar 16, 2020, 1:14 PM IST

ಕೇರಳ/ಕೊಚ್ಚಿ: ಇಲ್ಲಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ ರಿಯಾಲಿಟಿ ಶೋದ ನಟರೊಬ್ಬರ ಸ್ವಾಗತಕ್ಕೆ ಅದ್ಧೂರಿ ಸಮಾರಂಭ ಏರ್ಪಡಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ 79 ಜನರ ವಿರುದ್ಧ ಎಫ್​ಐಆರ್ ದಾಖಲಾಗಿದೆ.

Case registered against Television show contestant fans for gathering in Cochin International Airport
ಏರ್​ಪೋರ್ಟ್​ನಲ್ಲಿ ಅದ್ಧೂರಿ ಸ್ವಾಗತ ಸಮಾರಂಭ ಏರ್ಪಡಿಸಿದವರ ವಿರುದ್ಧ ಎಫ್​ಐಆರ್

ಕೊರೊನಾ ವೈರಸ್ ಹರಡುವ ಭೀತಿಯಲ್ಲಿ ಎಲ್ಲ ರೀತಿಯ ಸಾಮೂಹಿಕ ಸಮಾರಂಭಗಳನ್ನು ಕೇರಳ ಸರ್ಕಾರ ನಿಷೇಧಿಸಿದೆ. ಆದರೂ ಇಂಥದೊಂದು ಅದ್ಧೂರಿ ಸಾಮೂಹಿಕ ಸಮಾರಂಭವನ್ನು ಭಾನುವಾರ ವಿಮಾನ ನಿಲ್ದಾಣದಲ್ಲಿ ಏರ್ಪಡಿಸಲಾಗಿತ್ತು ಎನ್ನಲಾಗ್ತಿದೆ.

ಕೊರೊನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ಸರ್ಕಾರ ವಿಧಿಸಿದ ಮಾರ್ಗಸೂಚಿಗಳನ್ನು ಉಲ್ಲಂಘಿಸಿದ ಆರೋಪದಲ್ಲಿ ಪೊಲೀಸರು ಐಪಿಸಿ ಸೆಕ್ಷನ್​ 143, 147, 149, 188 ಮತ್ತು 283 ಗಳಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ವಿಮಾನ ನಿಲ್ದಾಣದ 500 ಮೀಟರ್ ವ್ಯಾಪ್ತಿಯಲ್ಲಿ ಯಾವುದೇ ರೀತಿಯ ಮೆರವಣಿಗೆ ಮಾಡುವಂತಿಲ್ಲ ಎಂಬ ಹೈಕೋರ್ಟ್ ಆದೇಶವನ್ನು ಸಹ ಉಲ್ಲಂಘಿಸಲಾಗಿದೆ ಎಂದು ಪೊಲೀಸರು ಆರೋಪಿಸಿದ್ದಾರೆ.

ಯುನೈಟೆಡ್ ಕಿಂಗಡಂ ನಾಗರಿಕ ಸೇರಿದಂತೆ ಇಬ್ಬರು ಕೊರೊನಾ ವೈರಸ್​ನಿಂದ ಹೊಸದಾಗಿ ಭಾನುವಾರ ಬಾಧಿತರಾಗಿದ್ದು, ರಾಜ್ಯದಲ್ಲಿ ಒಟ್ಟಾರೆ ಕೊರೊನಾ ವೈರಸ್ ಪೀಡಿತರ ಸಂಖ್ಯೆ 21 ಕ್ಕೆ ಏರಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.