ನವದೆಹಲಿ: ಭದ್ರತೆಯನ್ನು ಲೆಕ್ಕಿಸದೆ ಏಳು ಮಂದಿಯಿದ್ದ ಕಾರು ನೇರವಾಗಿ ಕಾಂಗ್ರೆಸ್ ನಾಯಕಿ ಪ್ರಿಯಾಂಕ ವಾಧ್ರಾ ಮನೆಗೆ ನುಗಿದ್ದು, ನೇರವಾಗಿ ಅವರ ಬಳಿ ತೆರಳಿ ಫೋಟೋಗ್ರಾಫ್ ಕೇಳಿದ್ದಾರೆ.
ದೆಹಲಿಯ ಲೋಧಿ ಎಸ್ಟೇಟ್ನ ಪ್ರಿಯಾಂಕ ವಾಧ್ರಾ ನಿವಾಸಕ್ಕೆ ಅಪರಿಚಿತ ಏಳು ಮಂದಿ ಕಾರಿನಲ್ಲಿ ನುಗ್ಗಿದ್ದರು. ಕಾರಿನಲ್ಲಿ ಮೂವರು ಪುರುಷರು, ಮೂವರು ಮಹಿಳೆಯರು ಹಾಗೂ ಒಬ್ಬಾಕೆ ಯುವತಿ ಇದ್ದಳು ಎಂದು ಮೂಲಗಳು ತಿಳಿಸಿವೆ.
ಪ್ರಿಯಾಂಕ ವಾಧ್ರಾ ಬಳಿ ಈ ಗುಂಪು ಫೋಟೋಗ್ರಾಫ್ ಕೇಳಿದ್ದಾರೆ. ಇವರೊಂದಿಗೆ ಉತ್ತಮವಾಗಿ ಮಾತನಾಡಿ,ಫೋಟೋ ತೆಗೆಸಿಕೊಂಡಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಗಾಂಧಿ ಕುಟುಂಬಕ್ಕಿದ್ದ ವಿಶೇಷ ಭದ್ರತೆಯನ್ನು(SPG) ಕೇಂದ್ರ ಸರ್ಕಾರ ಕಳೆದ ತಿಂಗಳು ಹಿಂಪಡೆದಿತ್ತು. ಸದ್ಯ ಝಡ್-ಪ್ಲಸ್ ಭದ್ರತೆಯನ್ನು ನೀಡಲಾಗಿದೆ. ಸಿಆರ್ಪಿಎಫ್ ಯೋಧರು ಝಡ್-ಪ್ಲಸ್ ಭದ್ರತೆ ನೀಡುತ್ತಿದ್ದಾರೆ. ನಿವಾಸ ಅಥವಾ ದೇಶದ ಯಾವುದೇ ಭಾಗಕ್ಕೂ ತೆರಳಿದರೂ ಈ ಝಡ್-ಪ್ಲಸ್ ಭದ್ರತೆ ಇರುತ್ತದೆ.