ETV Bharat / bharat

ರೈತ ಪ್ರತಿಭಟನೆಗೆ ಕೆನಡಾ ಪ್ರಧಾನಿಯಿಂದ ಬೆಂಬಲ: ಶಿವಸೇನೆ ಸಂಸದೆ ಗರಂ..! - ರೈತ ಪ್ರತಿಭಟನೆಗೆ ವಿವಿಧ ನಾಯಕರ ಬೆಂಬಲ

ಭಾರತದಲ್ಲಿ ಕೃಷಿ ಕಾಯ್ದೆಗಳ ವಿರುದ್ಧ ರೈತರು ನಡೆಸುತ್ತಿರುವ ಬೃಹತ್ ಪ್ರತಿಭಟನೆಗೆ ಕೆನಡಾ ಪ್ರಧಾನಿ ಜಸ್ಟಿನ್ ಟ್ರೂಡೋ ಪ್ರತಿಕ್ರಿಯೆ ನೀಡಿದ್ದಾರೆ.

Canadian PM
ಜಸ್ಟಿನ್ ಟ್ರೂಡೋ
author img

By

Published : Dec 1, 2020, 3:49 PM IST

Updated : Dec 1, 2020, 3:57 PM IST

ಒಟ್ಟಾವಾ ( ಕೆನಡಾ): ಭಾರತದಲ್ಲಿ ನಡೆಯುತ್ತಿರುವ ರೈತ ಪ್ರತಿಭಟನೆಗಳು ವಿವಿಧ ರಾಷ್ಟ್ರಗಳಲ್ಲಿ ಮಾರ್ದನಿಸುತ್ತಿದ್ದು, ಈ ಪ್ರತಿಭಟನೆಗಳ ಬಗ್ಗೆ ಕೆನಡಾ ಪ್ರಧಾನ ಮಂತ್ರಿ ಜಸ್ಟಿನ್ ಟ್ರೂಡೋ ಕಾಳಜಿ ವ್ಯಕ್ತಪಡಿಸಿದ್ದಾರೆ.

ಸಿಖ್​ ಉತ್ಸವವಾದ ಗುರುಪುರಬ್​ಗೆ ಶುಭಾಶಯ ಕೋರುವ ವೇಳೆ ಮಾತನಾಡಿದ ಸ್ಟಿನ್ ಟ್ರೂಡೋ ಭಾರತದಲ್ಲಿ ಮೋದಿ ನೇತೃತ್ವದ ಬಿಜೆಪಿ ಸರ್ಕಾರದ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಯ ಕುರಿತಾಗಿ ಕಳವಳವಾಗುತ್ತಿದೆ. ಕೆನಡಾ ಶಾಂತಿಯುತ ಪ್ರತಿಭಟನಾಕಾರರ ಹಕ್ಕುಗಳನ್ನು ರಕ್ಷಿಸುತ್ತದೆ ಎಂದಿದ್ದಾರೆ.

ಭಾರತೀಯ ಪ್ರಾಧಿಕಾರಗಳಿಗೆ ತಮ್ಮ ಕಾಳಜಿ ತಿಳಿಸಿದ್ದೇವೆ ಎಂದ ಅವರು ಎಲ್ಲರೂ ತಮ್ಮ ಕುಟುಂಬ ಹಾಗೂ ಸ್ನೇಹಿತರ ಕುರಿತು ಚಿಂತೆ ಮಾಡುತ್ತೇವೆ ಎಂದು ಪ್ರತಿಭಟನಾಕಾರರಿಗೆ ಬೆಂಬಲ ಸೂಚಿಸಿದ್ದಾರೆ.

ಬೇರೆ ರಾಷ್ಟ್ರದ ರಾಜಕೀಯಕ್ಕೆ ಮೇವು ಅಲ್ಲ..!

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಶಿವಸೇನಾ ನಾಯಕಿ, ರಾಜ್ಯಸಭಾ ಸದಸ್ಯೆ ಪ್ರಿಯಾಂಕ ಚತುರ್ವೇದಿ ಟ್ವೀಟ್ ಮಾಡಿದ್ದು, ಇದು ಭಾರತದ ಆಂತರಿಕ ವಿಚಾರ, ಬೇರೆ ರಾಷ್ಟ್ರದ ರಾಜಕೀಯಲ್ಲ ಮೇವು ಅಲ್ಲ. ಬೇರೆ ರಾಷ್ಟ್ರಗಳನ್ನು ಗೌರವಿಸಿ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

  • Dear @JustinTrudeau ,touched by your concern but India’s internal issue is not fodder for another nation’s politics.Pls respect the courtesies that we always extend to other nations.
    Request PM @narendramodi ji to resolve this impasse before other countries find it okay to opine.

    — Priyanka Chaturvedi (@priyankac19) December 1, 2020 " class="align-text-top noRightClick twitterSection" data=" ">

ಇದರ ಜೊತೆಗೆ ಪ್ರಧಾನಿ ನರೇಂದ್ರ ಮೋದಿಗೆ ರೈತರ ಸಮಸ್ಯೆಗಳನ್ನು ಬಗೆಹರಿಸುವಂತೆ ಮನವಿ ಮಾಡಿದ್ದಾರೆ.

Last Updated : Dec 1, 2020, 3:57 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.