ETV Bharat / bharat

ನಾವು ಚೀನಾ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಬಹುದೇ? - ವೋಕಲ್ ಫಾರ್ ಲೋಕಲ್

ಚೀನಾ ಸಾಮಗ್ರಿಗಳನ್ನು ನಿಷೇಧಿಸಬೇಕು ಎಂಬ ಆಗ್ರಹ ವ್ಯಾಪಕವಾಗಿ ಕೇಳಿಬರುತ್ತಿದೆ. ಚೀನಾದ ಉತ್ಪನ್ನಗಳನ್ನು ನಿಷೇಧಿಸುವ ಮೂಲಕ ಚೀನಾದ ಲಾಭಕ್ಕೆ ನಷ್ಟ ಉಂಟು ಮಾಡಬೇಕಾದರೆ, ಹಲವು ಅಗತ್ಯ ಸಾಮಗ್ರಿಗಳನ್ನೇ ನಾವು ಮರೆತು ಬಿಡಬೇಕಾಗುತ್ತದೆ. ಇದು ನಮ್ಮ ಜಿಡಿಪಿ ಮೇಲೆ ಪರಿಣಾಮ ಬೀರುತ್ತದೆ.

Urge to ban China products
ಚೀನಾ ಉತ್ಪನ್ನಗಳ ನಿಷೇಧಕ್ಕೆ ಕರೆ
author img

By

Published : Jun 13, 2020, 3:26 PM IST

ಚೀನಾ ಉತ್ಪನ್ನಗಳ ನಿಷೇಧಕ್ಕೆ ಕರೆ

ಚೀನಾ ಉತ್ಪನ್ನಗಳನ್ನು ನಿಷೇಧಿಸುವ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ಚರ್ಚೆಯಾಗುತ್ತಿದೆ. ಚೀನಾದ ಸಾಮಗ್ರಿಗಳನ್ನು ನಿಷೇಧಿಸುವ ಬಗ್ಗೆ ಹಲವು ಕಾಲದಿಂದಲೂ ಚರ್ಚೆ ನಡೆಯುತ್ತಲೇ ಇದೆ. ಆದರೆ, ಕೋವಿಡ್ 19 ಸಮಯದಲ್ಲಿ ಇದು ತಾರಕಕ್ಕೇರಿದೆ. ಇನ್ನೊಂದೆಡೆ ಪ್ರಧಾನಿ ನರೇಂದ್ರ ಮೋದಿ ಹೇಳಿದ 'ವೋಕಲ್ ಫಾರ್ ಲೋಕಲ್' ಎಂಬ ಅಭಿಯಾನ ಕೂಡ ದೇಶೀ ಉತ್ಪನ್ನಗಳನ್ನು ಬಳಸಲು ಜನರನ್ನು ಪ್ರೋತ್ಸಾಹಿಸುತ್ತಿದೆ. ಈ ಸನ್ನಿವೇಶಗಳ ಮಧ್ಯೆಯೇ, ಯಾರೂ ಚೀನಾ ಉತ್ಪನ್ನಗಳನ್ನು ಖರೀದಿ ಮಾಡಲು ಬಯಸುತ್ತಿಲ್ಲ. ಭಾರತೀಯ ಉದ್ಯಮಗಳು ಈ ಅವಕಾಶಗಳನ್ನು ಚೆನ್ನಾಗಿ ಬಳಸಿಕೊಳ್ಳಬೇಕಿದೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.

ಚೀನಾದಲ್ಲಿ ಉತ್ಪಾದನೆಯಾದ ಉತ್ಪನ್ನಗಳ ಆಮದು ಮಾಡಿಕೊಳ್ಳದಿರುವಂತೆ ವ್ಯಾಪಾರಿ ಸಂಘಟನೆಗಳೂ ಒತ್ತಡ ಹೇರುತ್ತಿವೆ. ಚೀನಾದ ಸಾಮಗ್ರಿಗಳು ಭಾರತೀಯ ಮಾರುಕಟ್ಟೆಗೆ ಪ್ರವೇಶಿಸುವ ವಿದ್ಯಮಾನ ಹೊಸದೇನೂ ಅಲ್ಲ. ಹಲವು ವರ್ಷಗಳಿಂದಲೂ ಚೀನಾ ವಸ್ತುಗಳು ಭಾರತ ಮಾರುಕಟ್ಟೆಗೆ ಲಗ್ಗೆ ಇಡುತ್ತಿವೆಯಾದರೂ, ಕಳೆದ ಐದು ವರ್ಷಗಳಲ್ಲಿ ಇದು ತಾರಕಕ್ಕೇರಿತ್ತು. ಭಾರತದಲ್ಲಿನ ಪ್ರಮುಖ ಐದು ಸ್ಮಾರ್ಟ್‌ಫೋನ್‌ ಬ್ರಾಂಡ್‌ಗಳ ಪೈಕಿ ನಾಲ್ಕು ಚೀನಾದ್ದು. 2020 ರ ಮೊದಲ ತ್ರೈಮಾಸಿಕದಲ್ಲಿ ಮಾರಾಟವಾದ ಸ್ಮಾರ್ಟ್‌ಫೋನ್‌ಗಳ ಪೈಕಿ ಶೇ. 73 ರಷ್ಟು ಈ ನಾಲ್ಕು ಕಂಪನಿಗಳೇ ಆಕ್ರಮಿಸಿಕೊಂಡಿವೆ. ಭಾರತದಲ್ಲಿ ಉತ್ಪಾದನೆಯಾದ ಸಾಮಗ್ರಿಗಳನ್ನು ಪ್ರೋತ್ಸಾಹಿಸಿ ಚೀನಾದಲ್ಲಿ ಉತ್ಪಾದನೆಯಾದ ಸಾಮಗ್ರಿಗಳ ಬಳಕೆ ಕಡಿಮೆ ಮಾಡುವ ಕ್ಯಾಂಪೇನ್ ಅನ್ನು ಅಖಿಲ ಭಾರತ ವ್ಯಾಪಾರಿಗಳ ಸಂಘಟನೆ (ಸಿಎಐಟಿ) ಆರಂಭಿಸಿದೆ. ಚೀನಾದ ಸಾಮಗ್ರಿಗಳ ಆಮದು ನಿಲ್ಲಿಸುವಂತೆ 10 ಸಾವಿರ ಉದ್ಯಮ ಸಂಸ್ಥೆಗಳಿಗೆ ಸಂಘಟನೆಯು ಆಗ್ರಹಿಸಲಿದೆ ಎಂದು ಸಿಎಐಟಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪ್ರವೀಣ್‌ ಖಂಡೇಲ್ವಾಲ್‌ ಹೇಳಿದ್ದಾರೆ.

ಇ-ಕಾಮರ್ಸ್‌ಗಳಿಗೆ ಯಾವ ಅಡ್ಡಿಯೂ ಇಲ್ಲ!

ಚೀನಾ ಸಾಮಗ್ರಿಗಳನ್ನು ನಿಷೇಧಿಸಬೇಕು ಎಂಬ ಆಗ್ರಹ ವ್ಯಾಪಕವಾಗಿ ಕೇಳಿಬರುತ್ತಿದ್ದರೂ ಇ ಕಾಮರ್ಸ್‌ನಲ್ಲಿ ಚೀನಾದ ಉತ್ಪನ್ನಗಳೇ ಮುಂಚೂಣಿಯಲ್ಲಿವೆ. ಚೀನಾದ ಸ್ಮಾರ್ಟ್‌ಫೋನ್‌ ಬ್ರಾಂಡ್‌ಗಳಾದ ಶಿಯೋಮಿ, ರಿಯಲ್‌ಮಿ, ಒಪ್ಪೊ ಮತ್ತು ವಿವೊಗೆ ಬೇಡಿಕೆ ಕಡಿಮೆಯಾಗಿಲ್ಲ ಎಂದು ಅಮೇಜಾನ್ ಮತ್ತು ಫ್ಲಿಪ್‌ಕಾರ್ಟ್‌ ಖಚಿತಪಡಿಸಿವೆ. ಚೀನಾ ಉತ್ಪನ್ನಗಳ ನಿಷೇಧದ ಕ್ಯಾಂಪೇನ್‌ನಲ್ಲಿ ಚೀನಾದಲ್ಲಿ ತಯಾರಾದ ಸ್ಮಾರ್ಟ್‌ಫೋನ್ ಅಥವಾ ಟೂತ್‌ಬ್ರಶ್‌ಗಳು ಸೇರಿಕೊಳ್ಳಲೇ ಇಲ್ಲ. ಪ್ರಾಥಮಿಕ ವ್ಯಾಪಾರ ವಹಿವಾಟಿನಿಂದಾಚೆಗೂ ಮಾರುಕಟ್ಟೆ ಬೆಳೆದಿದೆ. ಶಿಯೋಮಿ (ಎಂಐ ಕ್ರೆಡಿಟ್) ಮತ್ತು ಒಪ್ಪೊ (ಒಪ್ಪೊ ಕ್ಯಾಶ್) ತಮ್ಮ ಆನ್‌ಲೈನ್ ಸಾಲ ಸೇವೆಗಳನ್ನೂ ಆರಂಭಿಸಿವೆ. ವೈಯಕ್ತಿಕ ಸಾಲ ಪ್ರೋಗ್ರಾಮ್‌ಗಳ ಮೂಲಕ ಭಾರತದಲ್ಲಿ 50 ಸಾವಿರ ಕೋಟಿ ಮೌಲ್ಯದ ಸಾಲವನ್ನು ಬಟವಾಡೆ ಮಾಡುವುದು ಈ ಕಂಪನಿಗಳ ಗುರಿಯಾಗಿದೆ. 7500 ಕೋಟಿ ನಿವ್ವಳ ಮೌಲ್ಯದ 30 ಪ್ರಮುಖ ಸ್ಟಾರ್ಟಪ್‌ಗಳ ಪೈಕಿ 18 ರಲ್ಲಿ ಚೀನಾದ ಹೂಡಿಕೆದಾರರು ಹೂಡಿಕೆ ಮಾಡಿದ್ದಾರೆ.

ತಂತ್ರಜ್ಞಾನ ಆಧರಿತ ಭಾರತೀಯ ಸ್ಟಾರ್ಟಪ್‌ಗಳಲ್ಲಿ 3.02 ಲಕ್ಷ ಕೋಟಿ ರೂ. ಹೂಡಿಕೆಯನ್ನು ಚೀನಾದ ಕಂಪನಿಗಳು ಮಾಡಿವೆ. ಚೀನಾದ ದೈತ್ಯ ಕಂಪನಿ ಅಲಿಬಾಬಾ ಗ್ರೂಪ್‌ ಸ್ನ್ಯಾಪ್‌ಡೀಲ್‌ನಲ್ಲಿ 5284 ಕೋಟಿ ರೂ. ಹೂಡಿಕೆ ಮಾಡಿದೆ ಮತ್ತು ಪೇಟಿಎಂನಲ್ಲಿ 3019 ಕೋಟಿ ರೂ. ಹಾಗೂ ಬಿಗ್‌ಬಾಸ್ಕೆಟ್‌ನಲ್ಲಿ 1887 ಕೋಟಿ ರೂ. ಹೂಡಿಕೆ ಮಾಡಿದೆ. ಇನ್ನೊಂದು ಚೀನಾ ಬಹುರಾಷ್ಟ್ರೀಯ ಕಂಪನಿ ಟೆನ್ಸೆಂಟ್ ಹೋಲ್ಡಿಂಗ್ಸ್ ಲಿ. ಓಲಾ ಮತ್ತು ಜೊಮಾಟೋದಲ್ಲಿ 1509 ಕೋಟಿ ರೂ. ಹೂಡಿಕೆ ಮಾಡಿದೆ. ಈ ಎಲ್ಲ ಕಂಪನಿಗಳು ಭಾರತದಲ್ಲಿ ಕೋಟ್ಯಂತರ ಉದ್ಯೋಗ ಸೃಷ್ಟಿಸಿವೆ. ಭಾರತದ ಮಾರುಕಟ್ಟೆಯಲ್ಲಿ ಚೀನಾದ ಮಧ್ಯಪ್ರವೇಶವನ್ನು ತಡೆಯಲು ಚೀನಾದ ಹೂಡಿಕೆಯನ್ನು ತಡೆಯಬೇಕು ಎಂದು ಹಣಕಾಸು ತಜ್ಷರು ಅಭಿಪ್ರಾಯಪಟ್ಟಿದ್ದಾರೆ.

ಪರ್ಯಾಯ ಕ್ರಮ

ಸಂಶೋಧಕ ಹಾಗೂ ಶಿಕ್ಷಣ ತಜ್ಞ ಲಡಾಖ್‌ನ ಸೋನಮ್ ವಾಂಗ್‌ಚುಕ್‌ ಮೇಡ್ ಇನ್ ಚೀನಾ ಉತ್ಪನ್ನಗಳ ನಿಷೇಧಕ್ಕೆ ಕರೆ ನೀಡಿದ್ದಾರೆ. ಒಂದು ವಾರದಲ್ಲಿ ಚೀನಾದ ಸಾಫ್ಟ್‌ವೇರ್ ಅಥವಾ ಆಪ್‌ಗಳನ್ನು ತೆಗೆದುಹಾಕುವಂತೆ ಮತ್ತು ಒಂದು ವರ್ಷದೊಳಗೆ ಹಾರ್ಡ್‌ವೇರ್, ಅಗತ್ಯವಿಲ್ಲದ ಸ್ಮಾರ್ಟ್‌ಫೋನ್‌ಗಳು ಅಥವಾ ಲ್ಯಾಪ್‌ಟಾಪ್‌ಗಳನ್ನು, ಇನ್ನೊಂದೆಡೆ ಅಗತ್ಯ ಸಾಮಗ್ರಿಗಳನ್ನು ಕೆಲವು ವರ್ಷಗಳೊಳಗೆ ದೂರ ಮಾಡುವಂತೆ ಸಲಹೆ ಮಾಡಿದ್ದಾರೆ. ಚೀನಾದ ಸಾಮಗ್ರಿಗಳ ಬೆಲೆ ಕಡಿಮೆ ಇರುವುದರಿಂದ ಗ್ರಾಹಕರು ಅದರತ್ತ ಆಕರ್ಷಿತರಾಗುತ್ತಾರೆ. ಬೆಲೆ ವಿಚಾರದಲ್ಲಿ ಸ್ಫರ್ಧೆ ನೀಡಲು, ದೇಶೀಯ ಕಂಪನಿಗಳಿಗೆ ಭಾರತ ಸರ್ಕಾರವು ತೆರಿಗೆ ರಿಯಾಯಿತಿ ಮತ್ತು ಸಬ್ಸಿಡಿ ನೀಡಬೇಕು. ಭಾರತವನ್ನು ಸ್ವಾವಲಂಬಿಯಾಗಿಸಲು ಆತ್ಮನಿರ್ಭರ ಭಾರತ ಯೋಜನೆಯನ್ನು ಸರಿಯಾಗಿ ಜಾರಿಗೊಳಿಸಬೇಕು. ಇಲ್ಲವಾದಲ್ಲಿ, ಚೀನಾದ ಉತ್ಪನ್ನಗಳನ್ನು ನಿಷೇಧಿಸುವ ನಮ್ಮ ಬೇಡಿಕೆ ಜಾರಿಯಾಗದ ಯೋಜನೆಯಾಗಿಯೇ ಉಳಿದುಹೋಗುತ್ತದೆ. ಜಾಗತೀಕರಣ ಮತ್ತು ಆರ್ಥಿಕ ಉದಾರೀಕರಣದ ಈ ಸನ್ನಿವೇಶದಲ್ಲಿ, ಒಂದು ದೇಶದಲ್ಲಿ ಉತ್ಪಾದನೆಯಾದ ಸಾಮಗ್ರಿಯನ್ನು ವಿಶ್ವದ ಯಾವುದೇ ಭಾಗದಲ್ಲಿ ಮಾರಾಟ ಮಾಡಬಹುದು. ಭಾರತದ ಆಮದು ಪೈಕಿ ಚೀನಾದ ಸಾಮಗ್ರಿಗಳು ಶೇ. 3 ರಷ್ಟು ಇದೆ. ಆದರೆ ಭಾರತ ರಫ್ತಿನ ಪೈಕಿ ಚೀನಾಗೆ ಶೇ. 5.7 ರಷ್ಟು ಹೋಗುತ್ತದೆ.

2019 ರಲ್ಲಿ 1.28 ಲಕ್ಷ ಕೋಟಿ ರೂ. ಮೌಲ್ಯದ ಸಾಮಗ್ರಿಗಳನ್ನು ಚೀನಾಗೆ ರಫ್ತು ಮಾಡಲಾಗಿದೆ. ಆಭರಣಗಳು, ಕಬ್ಬಿಣದ ಅದಿರು ಮತ್ತು ಹತ್ತಿ ಈ ಪೈಕಿ ಪ್ರಮುಖವಾಗಿವೆ. ನಾವು ಚೀನಾದ ಉತ್ಪನ್ನಗಳನ್ನು ನಿಷೇಧಿಸಿದರೆ, ಚೀನಾ ಕೂಡ ನಮ್ಮ ಉತ್ಪನ್ನಗಳನ್ನು ನಿಷೇಧಿಸುತ್ತದೆ. ಇದು ಭಾರತದ ಆರ್ಥಿಕತೆ ಮೇಲೆ ಮಹತ್ವದ ಪರಿಣಾಮವನ್ನು ಉಂಟು ಮಾಡಬಹುದು. ಔಷಧಕ್ಕೆ ಬಳಸಲಾಗುವ ಆಕ್ಟಿವ್ ಫಾರ್ಮಾಸುಟಿಕಲ್ ಸಾಮಗ್ರಿಗಳು (ಎಪಿಐ) ಪೈಕಿ ಮೂರನೇ ಎರಡರಷ್ಟನ್ನು ಚೀನಾದಿಂದ ಆಮದು ಮಾಡಿಕೊಳ್ಳಲಾಗುತ್ತದೆ. ಚೀನಾದ ಉತ್ಪನ್ನಗಳನ್ನು ನಾವು ನಿಷೇಧಿಸಲು ನಿರ್ಧರಿಸಿದರೆ, ಭಾರತದ ಫಾರ್ಮಾಸುಟಿಕಲ್ ಉದ್ಯಮಕ್ಕೆ ಭಾರಿ ಹೊಡೆತ ಬೀಳಿತ್ತದೆ. 2018 ರಲ್ಲಿ, ವ್ಯಾಪಾರ ಸಮತೋಲನದ ಬಗ್ಗೆ ಚರ್ಚೆ ನಡೆಸಲು ಭಾರತ-ಚೀನಾ ಜಂಟಿ ಆರ್ಥಿಕ ಸಮೂಹವು ದೆಹಲಿಯಲ್ಲಿ ಸಭೆ ಸೇರಿತ್ತು. ಉಭಯ ದೇಶಗಳ ವ್ಯಾಪಾರವನ್ನು ವರ್ಧಿಸಲು ಎರಡೂ ದೇಶಗಳು ಸಮ್ಮತಿಸಿವೆ ಎಂದು ಭಾರತ ಸರ್ಕಾರ ಹೇಳಿತ್ತು. ಇಂತಹ ಸಂಕೀರ್ಣ ಸನ್ನಿವೇಶದಲ್ಲಿ, ಸಾಮಾಜಿಕ ಮಾಧ್ಯಮದಲ್ಲಿ ಹೇಳುವಂತೆ ಚೀನಾದ ಉತ್ಪನ್ನಗಳನ್ನು ನಿಷೇಧಿಸುವುದು ಅಷ್ಟು ಸುಲಭವಲ್ಲ.

ಹಿಂದೆ ನಡೆದ ಪ್ರಯತ್ನಗಳು ವಿಫಲವಾಗಿದ್ದವು

ಈ ಹಿಂದೆ ಹಲವು ದೇಶಗಳು ವಿದೇಶಿ ಉತ್ಪನ್ನಗಳನ್ನು ನಿಷೇಧಿಸುವ ಪ್ರಯತ್ನ ಮಾಡಿ ಸೋತಿವೆ. 1930 ರಲ್ಲಿ ಜಪಾನ್ ಉತ್ಪನ್ನಗಳನ್ನು ಚೀನಾ ನಿಷೇಧಿಸಿತ್ತು. 2003 ರಲ್ಲಿ ಫ್ರೆಂಚ್ ಉತ್ಪನ್ನಗಳನ್ನು ನಿಷೇಧಿಸಲು ಯುಎಸ್‌ ಪ್ರಯತ್ನಿಸಿತ್ತು. ಎರಡೂ ಸನ್ನಿವೇಶಗಳಲ್ಲಿ ಪ್ರಯತ್ನಗಳು ವಿಫಲವಾಗಿದ್ದವು. ಕೇವಲ ಸ್ಮಾರ್ಟ್‌ಫೋನ್‌ಗಳು ಅಥವಾ ಲ್ಯಾಪ್‌ಟಾಪ್‌ಗಳಲ್ಲ, ಎಲೆಕ್ಟ್ರಾನಿಕ್ ಸಾಮಗ್ರಿಗಳಲ್ಲಿ ಬಳಸಲಾಗುವ ಹಲವು ಅಗತ್ಯ ಸಾಮಗ್ರಿಗಳನ್ನು ಚೀನಾ ಉತ್ಪಾದನೆ ಮಾಡುತ್ತದೆ. ಕಡಿಮೆ ವೆಚ್ಚದಲ್ಲಿ ಲಭ್ಯವಾಗುವ ಕೂಲಿ ಮತ್ತು ಉತ್ತಮ ವ್ಯಾಪಾರ ಇನ್ಸೆಂಟಿವ್‌ಗಳಿಂದಾಗಿ ಚೀನಾ ಸಾಮಗ್ರಿಗಳು ಕಡಿಮೆ ದರದಲ್ಲಿ ಸಿಗುತ್ತವೆ. ಇದೇ ಕಾರಣಕ್ಕೆ, ವಿಶ್ವದ ಹಲವು ದೇಶಗಳು ಚೀನಾದಿಂದ ಕಚ್ಚಾ ಸಾಮಗ್ರಿಗಳು ಮತ್ತು ಕಾಂಪೊನೆಂಟ್‌ಗಳನ್ನು ಆಮದು ಮಾಡಿಕೊಳ್ಳುತ್ತವೆ. ಇಂತಹ ಸನ್ನಿವೇಶದಲ್ಲಿ, ಚೀನಾದ ಉತ್ಪನ್ನಗಳು ಯಾವುದು ಮತ್ತು ಚೀನಾದ್ದಲ್ಲದ ಉತ್ಪನ್ನಗಳು ಯಾವುವು ಎಂದು ಕಂಡುಹಿಡಿಯುವುದು ಸುಲಭವಲ್ಲ.

ಚೀನಾದ ಉತ್ಪನ್ನಗಳನ್ನು ನಿಷೇಧಿಸುವ ಮೂಲಕ ಚೀನಾದ ಲಾಭಕ್ಕೆ ನಷ್ಟ ಉಂಟು ಮಾಡಬೇಕಾದರೆ, ಹಲವು ಅಗತ್ಯ ಸಾಮಗ್ರಿಗಳನ್ನೇ ನಾವು ಮರೆತು ಬಿಡಬೇಕಾಗುತ್ತದೆ. ಇಲ್ಲವಾದರೆ, ಇಂಥದ್ದೇ ಸಾಮಗ್ರಿಗಳನ್ನು ಇತರ ದೇಶದಿಂದ ಹೆಚ್ಚಿನ ಬೆಲೆಯಲ್ಲಿ ಖರೀದಿ ಮಾಡಬೇಕಾಗುತ್ತದೆ. ಇದರಿಂದ ನಮ್ಮ ಜಿಡಿಪಿ ಮೇಲೆ ಪರಿಣಾಮ ಬೀರುತ್ತದೆ. ಉತ್ತಮ ಸ್ಫರ್ಧಾತ್ಮಕ ಬೆಲೆಯಲ್ಲಿ ಉತ್ಪನ್ನಗಳನ್ನು ನಾವು ಉತ್ಪಾದಿಸಿ ದೇಶ ಎಷ್ಟು ಬೇಗ ಆರ್ಥಿಕ ಸ್ವಾವಲಂಬಿಯಾಗುತ್ತದೆಯೋ ಅಷ್ಟು ಬೇಗ ನಮ್ಮ “ವೋಕಲ್ ಫಾರ್ ಲೋಕಲ್‌” ಕ್ಯಾಂಪೇನ್ ಯಶಸ್ವಿಯಾಗುತ್ತದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.