ನವದೆಹಲಿ: ಪೂರ್ವ ಲಡಾಖ್‌ನಲ್ಲಿ ವಾಸ್ತವಿಕ (ನೈಜ) ನಿಯಂತ್ರಣ ರೇಖೆ (ಎಲ್ಎಸಿ) ದಾಟಿ ಚೀನಾದ ಸೈನಿಕರು ಭಾರತಕ್ಕೆ ಪ್ರವೇಶಿಸಿಲ್ಲ ಎಂಬುದನ್ನು ಖಚಿತಪಡಿಸಲು ಸಾಧ್ಯವೇ ಎಂದು ಸಂಸದ ರಾಹುಲ್ ಗಾಂಧಿ ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರವನ್ನು ಮತ್ತೊಮ್ಮೆ ಪ್ರಶ್ನಿಸಿದ್ದಾರೆ.
ಚೀನಿ ಸೈನಿಕರು ಭಾರತ ಪ್ರವೇಶಿಸಿಲ್ಲ ಎಂಬುದನ್ನು ಕೇಂದ್ರ ಸರ್ಕಾರ ದಯವಿಟ್ಟು ಖಚಿತಪಡಿಸಿ? ಎಂದು ರಾಹುಲ್ ಗಾಂಧಿ ಟ್ವೀಟ್ನಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸಿಂಗ್ ನೀಡಿರುವ ಹೇಳಿಕೆ ಉಲ್ಲೇಖಿಸಿದ್ದಾರೆ.
ಪೂರ್ವ ಲಡಾಖ್‌ನಲ್ಲಿ ಎರಡೂ ದೇಶಗಳ ಸೈನ್ಯದ ಮುಖಾಮುಖಿಯನ್ನು ಬಗೆಹರಿಸುವ ನಿಟ್ಟಿನಲ್ಲಿ ಜೂನ್ 6 ರಂದು ಭಾರತ-ಚೀನಾ ಉನ್ನತ ಮಟ್ಟದ ಮಿಲಿಟರಿ ಸಭೆ ನಡೆಸಲಿದೆ ಎಂದು ರಾಜನಾಥ್ ಹೇಳಿದ್ದಾರೆ.
-
Can GOI please confirm that no Chinese soldiers have entered India?https://t.co/faR5fxEqQO
— Rahul Gandhi (@RahulGandhi) June 3, 2020 " class="align-text-top noRightClick twitterSection" data="
">Can GOI please confirm that no Chinese soldiers have entered India?https://t.co/faR5fxEqQO
— Rahul Gandhi (@RahulGandhi) June 3, 2020Can GOI please confirm that no Chinese soldiers have entered India?https://t.co/faR5fxEqQO
— Rahul Gandhi (@RahulGandhi) June 3, 2020
ಭಾರತ ಮತ್ತು ಚೀನಾ ಗಡಿಯಲ್ಲಿ ಉಂಟಾದ ಬಿಕ್ಕಟಿನ ಕುರಿತು ಕೇಂದ್ರ ಮೌನ ತಾಳಿದೆ. ಮೇ 29ರಂದು ಕೂಡ ಪತ್ರಿಕಾಗೋಷ್ಠಿ ನಡೆಸಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆದಿದ್ದರು. ಗಡಿ ಪರಿಸ್ಥಿತಿಯ ಬಗ್ಗೆ ಸರ್ಕಾರದ ಮೌನ ಊಹಾಪೋಹಗಳಿಗೆ ಮತ್ತು ಅನಿಶ್ಚಿತತೆಗೆ ಉತ್ತೇಜನ ನೀಡುತ್ತದೆ. ಗಡಿಯಲ್ಲಿ ಏನಾಗುತ್ತಿದೆ ಎಂಬುದನ್ನು ದೇಶದ ಜನಕ್ಕೆ ಸರ್ಕಾರ ತಿಳಿಸಬೇಕು. ಅಲ್ಲಿ ಆಗುವ ಬೆಳವಣಿಗೆಗಳನ್ನು ಕಾಲಕಾಲಕ್ಕೆ ವಿವರ ನೀಡಬೇಕು ಎಂದು ಅಂದೇ ಟ್ವೀಟ್ ಮಾಡಿದ್ದರು.