ಹೈದರಾಬಾದ್: ವಿಶ್ವಾದ್ಯಂತ ಭಾರಿ ಹವಾ ಎಬ್ಬಿಸಿದ್ದ ಪಬ್ಜಿ ಗೇಮ್ ದಾಖಲೆಯನ್ನು ಕೆಲ ದಿನಗಳ ಹಿಂದೆ ಬಿಡುಗಡೆಯಾದ ಗೇಮ್ ಬ್ರೇಕ್ ಮಾಡಿದೆ.
ಡೌನ್ಲೋಡ್ ವಿಚಾರದಲ್ಲಿ ಪಬ್ಜಿ ಗೇಮ್ ನಿರ್ಮಿಸಿದ್ದ ದಾಖಲೆಯನ್ನು ಕಾಲ್ ಆಫ್ ಡ್ಯೂಟಿ ಮುರಿದಿದೆ. ಒಂದು ವಾರದಲ್ಲಿ ಕಾಲ್ ಆಫ್ ಡ್ಯೂಟಿ ನೂರು ಮಿಲಿಯನ್(ಹತ್ತು ಕೋಟಿ) ಡೌನ್ಲೋಡ್ ಆಗಿ ದಾಖಲೆ ನಿರ್ಮಿಸಿದೆ. ಪಬ್ಜಿ ಒಂದು ವಾರದಲ್ಲಿ 26.3 ಮಿಲಿಯನ್( 2 ಕೋಟಿ 63 ಲಕ್ಷ) ಡೌನ್ಲೋಡ್ ಆಗಿತ್ತು.

ಬಿಡುಗಡೆಯಾದ ಮೂರೇ ದಿನಕ್ಕೆ ಕಾಲ್ ಆಫ್ ಡ್ಯೂಟಿ ಮೂರೂವರೆ ಕೋಟಿ ಡೌನ್ಲೋಡ್ ಆಗಿತ್ತು. ವಿಶೇಷವೆಂದರೆ ಐಫೋನ್ನಲ್ಲಿ ಈ ಗೇಮ್ ಅತಿಹೆಚ್ಚು ಡೌನ್ಲೋಡ್ ಆಗಿದೆ. 56.9 ಮಿಲಿಯನ್(5 ಕೋಟಿ 69 ಲಕ್ಷ) ಐಫೋನ್ ಡೌನ್ಲೋಡ್ ಕಂಡಿದ್ದರೆ 45.3 ಮಿಲಿಯನ್(4 ಕೋಟಿ 53 ಲಕ್ಷ) ಆ್ಯಂಡ್ರಾಯ್ಡ್ ಡೌನ್ಲೋಡ್ ಆಗಿದೆ.
ಅಮೆರಿಕದಲ್ಲಿ ಕಾಲ್ ಆಫ್ ಡ್ಯೂಟಿ ಅತಿಹೆಚ್ಚು ಡೌನ್ಲೋಡ್(1 ಕೋಟಿ 73 ಲಕ್ಷ) ಆಗಿದೆ. ನಂತರದ ಸ್ಥಾನದಲ್ಲಿ ಭಾರತ(1 ಕೋಟಿ 37 ಲಕ್ಷ) ಇದೆ. ಮೂರನೇ ಸ್ಥಾನ ಬ್ರೆಜಿಲ್(70 ಲಕ್ಷ) ಪಡೆದಿದೆ.