ETV Bharat / bharat

ಮೋದಿ ನೇತೃತ್ವದಲ್ಲಿ ಇಂದು ಬಜೆಟ್ ಪೂರ್ವಭಾವಿ ಸಂಪುಟ ಸಭೆ.. ಕೃಷಿ, ಎನ್‌ಐಎ ಬಲಗೊಳಿಸಲು ನಮೋ ಚಿಂತನೆ

ಶನಿವಾರದಂದು ಹಲವಾರು ಆರ್ಥಿಕ ಹಾಗೂ ಉದ್ಯಮ ತಜ್ಞರು ಪ್ರಧಾನಿ ಮೋದಿಯನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದರು. ಈ ವೇಳೆ ಕೃಷಿ ವಲಯದ ಉತ್ತೇಜನದ ಕುರಿತಂತೆ ತಮ್ಮ ಅಭಿಪ್ರಾಯವನ್ನು ಪ್ರಧಾನಿಗೆ ತಿಳಿಸಿದ್ದಾರೆ.

ಸಂಪುಟ ಸಭೆ
author img

By

Published : Jun 24, 2019, 12:23 PM IST

ನವದೆಹಲಿ: ಬಜೆಟ್ ಮಂಡನೆಗೆ ಇನ್ನೊಂದು ವಾರ ಇರುವಂತೆಯೇ ಇಂದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಸಂಸತ್ತಿನ ನೂತನ ಕಟ್ಟಡದಲ್ಲಿ ಕೇಂದ್ರ ಸಚಿವ ಸಂಪುಟ ಸಭೆ ನಡೆಯಲಿದೆ.

ಶನಿವಾರದಂದು ಹಲವಾರು ಆರ್ಥಿಕ ಹಾಗೂ ಉದ್ಯಮ ತಜ್ಞರು ಪ್ರಧಾನಿ ಮೋದಿಯನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದರು. ಈ ವೇಳೆ ಕೃಷಿ ವಲಯದ ಉತ್ತೇಜನದ ಕುರಿತಂತೆ ತಮ್ಮ ಅಭಿಪ್ರಾಯವನ್ನು ಪ್ರಧಾನಿಗೆ ತಿಳಿಸಿದ್ದಾರೆ. ಹೀಗಾಗಿ ಇಂದಿನ ಸಚಿವ ಸಂಪುಟ ಸಭೆ ಗಂಭೀರ ವಿಷಯದ ಮೇಲೆ ಬೆಳಕು ಚೆಲ್ಲುವ ಸಾಧ್ಯತೆ ಇದೆ.

ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್​ಐಎ)ಯನ್ನು ಮತ್ತಷ್ಟು ಬಲಪಡಿಸುವ ವಿಚಾರವೂ ಇಂದಿನ ಸಂಪುಟ ಸಭೆಯಲ್ಲಿ ಮಾತುಕತೆಗೆ ಬರಲಿದೆ. ಎನ್​ಐಎ ಬಲವರ್ಧಿಸಲು ಎರಡು ನೂತನ ಕಾನೂನನ್ನು ಸೇರ್ಪಡೆಗೊಳಿಸಲು ತಿದ್ದುಪಡಿಯನ್ನು ಸಂಸತ್ತಿನಲ್ಲಿ ತರುವ ಸಾಧ್ಯತೆ ಇದೆ. ಈ ನಿಟ್ಟಿನಲ್ಲಿ ಇಂದಿನ ಸಂಪುಟ ಸಭೆಯಲ್ಲಿ ಮಾತುಕತೆ ನಡೆಸುವ ಸಾಧ್ಯತೆ ಇದೆ. ಮುಂಬೈ ಮೇಲಿನ ಉಗ್ರರ ದಾಳಿಯ ಬಳಿಕ 2009ರಲ್ಲಿ ಎನ್​ಐಎ ಅಸ್ತಿತ್ವಕ್ಕೆ ಬಂದಿತ್ತು.

Intro:Body:

ಇಂದು ಬಜೆಟ್ ಪೂರ್ವಭಾವಿ ಸಂಪುಟ ಸಭೆ... ಗಂಭೀರ ವಿಚಾರಗಳು ಪ್ರಸ್ತಾಪ ಸಾಧ್ಯತೆ

ನವದೆಹಲಿ: ಬಜೆಟ್ ಮಂಡನೆಗೆ ಇನ್ನೊಂದು ವಾರ ಇರುವಂತೆ ಇಂದು ಪ್ರಧಾನಿ ಮೋದಿ ನೇತೃತ್ವದಲ್ಲಿ ಸಂಸತ್ತಿನ ನೂತನ ಕಟ್ಟಡಲ್ಲಿ ಸಚಿವ ಸಂಪುಟ ಸಭೆ ನಡೆಯಲಿದೆ.

ಶನಿವಾರದಂದು ಹಲವಾರು ಆರ್ಥಿಕ ಹಾಗೂ ಉದ್ಯಮ ತಜ್ಞರು ಪ್ರಧಾನಿ ಮೋದಿಯನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದರು. ಈ ವೇಳೆ ಕೃಷಿ ವಲಯದ ಉತ್ತೇಜನದ ಕುರಿತಂತೆ ತಮ್ಮ ಅಭಿಪ್ರಾಯವನ್ನು ಪ್ರಧಾನಿಗೆ ತಿಳಿಸಿದ್ದಾರೆ. ಹೀಗಾಗಿ ಇಂದಿನ ಸಚಿವ ಸಂಪುಟ ಸಭೆ ಗಂಭೀರ ವಿಷಯದ ಮೇಲೆ ಬೆಳಕು ಚೆಲ್ಲುವ ಸಾಧ್ಯತೆ ಇದೆ.

ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್​ಐಎ)ಯನ್ನು ಮತ್ತಷ್ಟು ಬಲಪಡಿಸುವ ವಿಚಾರವೂ ಇಂದಿನ ಸಂಪುಟ ಸಭೆಯಲ್ಲಿ ಮಾತುಕತೆಗೆ ಬರಲಿದೆ. ಎನ್​ಐಎ ಬಲವರ್ಧಿಸಲು ಎರಡು ನೂತನ ಕಾನೂನನ್ನು ಸೇರ್ಪಡೆಗೆ ತಿದ್ದುಪಡಿಯನ್ನು ಸಂಸತ್ತಿನಲ್ಲಿ ತರುವ ಸಾಧ್ಯತೆ ಇದೆ. ಈ ನಿಟ್ಟಿನಲ್ಲಿ ಇಂದಿನ ಸಂಪುಟ ಸಭೆಯಲ್ಲಿ ಮಾತುಕತೆ ನಡೆಸುವ ಸಾಧ್ಯತೆ ಇದೆ. ಮುಂಬೈ ಮೇಲಿನ ಉಗ್ರರ ದಾಳಿಯ ಬಳಿಕ 2009ರಲ್ಲಿ ಎನ್​ಐಎ ಅಸ್ತಿತ್ವಕ್ಕೆ ಬಂದಿತ್ತು.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.