ETV Bharat / bharat

ಭಾರತದ ಬ್ರ್ಯಾಂಡ್ - ದೇಶದ ಶಾಂತಿ ಭಂಗ ಮಾಡಿದ ಸಿಎಎ - ದೇಶದ ಶಾಂತಿ ಭಂಗ ಮಾಡಿದ ಸಿಎಎ

ವಿಶ್ವದ ದೃಷ್ಟಿಕೋನದಲ್ಲಿ ಭಾರತದ ಚಿತ್ರಣವು ಸಿಎಎ ಇಂದಾಗಿ ಘಾಸಿಯಾಗುತ್ತಿದೆ. ಕಳೆದ ಐದು ವರ್ಷಗಳಲ್ಲಿ ಪ್ರಧಾನಿಯು ವಿದೇಶಿ ನೀತಿಯಲ್ಲಿ ಗಳಿಸಿದ್ದೆಲ್ಲವೂ ಈ ಹಿಂಸಾಚಾರದಿಂದಾಗಿ ಮಾಯವಾಗಿದೆ. ಯಾಕೆ ಇದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸುತ್ತಿಲ್ಲ ಎಂಬುದೇ ಈಗಿನ ಪ್ರಶ್ನೆಯಾಗಿದೆ. ದೇಶದೊಳಗೆ ಶಾಂತಿ ಮತ್ತು ಜಾಗತಿಕ ಮಟ್ಟದಲ್ಲಿ ಇಮೇಜ್‌ಗೆ ಹಾನಿ ಮಾಡಿಕೊಂಡು ವಿದೇಶೀಯರಿಗೆ ಯಾಕೆ ನಮ್ಮ ಸರ್ಕಾರವು ಪೌರತ್ವ ನೀಡಲು ಬಯಸುತ್ತಿದೆ.

CAA that disturbed the country's peace
ಭಾರತದ ಬ್ರ್ಯಾಂಡ್ ಮತ್ತು ದೇಶದ ಶಾಂತಿ ಭಂಗ ಮಾಡಿದ ಸಿಎಎ
author img

By

Published : Mar 14, 2020, 12:23 PM IST

ಸಂಸತ್ತಿನಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಅನುಮೋದಿಸಿದ ನಂತರದಲ್ಲಿ ಇಡೀ ದೇಶ ಅಶಾಂತಿಯ ಕೂಪವಾಗಿದೆ. ಸಂವಿಧಾನವನ್ನು ರಕ್ಷಿಸಲು ಪ್ರತಿಭಟನೆ ನಡೆಸುತ್ತಿರುವ ವಿದ್ಯಾರ್ಥಿಗಳು ಮಹತ್ವದ ಪ್ರಭಾವವನ್ನು ಬೀರುತ್ತಿದ್ದಾರೆ. ಮುಸ್ಲಿಂ ಮಹಿಳೆಯರು ಸಂವಿಧಾನದ ಮುನ್ನುಡಿಯನ್ನು ಓದುತ್ತಿದ್ದಾರೆ, ಗಾಂಧಿ, ಅಂಬೇಡ್ಕರ್ ಅಥವಾ ಪ್ರಜಾಪ್ರಭುತ್ವದ ಫಲಕಗಳನ್ನು ಹಿಡಿದುಕೊಂಡು ಪ್ರತಿಭಟಿಸುತ್ತಿದ್ದಾರೆ. ದೇಶಾದ್ಯಂತ ಪ್ರತಿಭಟನೆ ಮತ್ತು ದೆಹಲಿ ಗಲಭೆಯು ಜಾಗತಿಕ ಮಾಧ್ಯಮದಲ್ಲಿ ಪ್ರಮುಖವಾಗಿ ಕಾಣಿಸಿಕೊಂಡವು. ಭಾರತ ಪುರಾತನ ನಾಗರಿಕತೆ ಎಂಬ ಘನತೆ ಹಾಗೂ ಧನಾತ್ಮಕ ಚಿತ್ರಣವು ಈ ಪ್ರತಿಭಟನೆಗಳಿಂದಾಗಿ ಘಾಸಿಯಾಗಿದೆ.

ಒಂದೆಡೆ ರಾಷ್ಟ್ರಪತಿ ಭವನವು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಆತಿಥ್ಯ ನೀಡಲು ಸಂಭ್ರಮಿಸುತ್ತಿದ್ದರೆ, ಅಂತಾರಾಷ್ಟ್ರೀಯ ಮಾಧ್ಯಮಗಳು ಈಶಾನ್ಯ ದೆಹಲಿಯನ್ನು ಕೇಂದ್ರೀಕರಿಸಿದ್ದವು. ವಿಶ್ವಸಂಸ್ಥೆ ಮತ್ತು ವಿವಿಧ ದೇಶಗಳ ಸರ್ಕಾರದ ಮಟ್ಟದಲ್ಲಿ ಚರ್ಚೆಗಳು ನಡೆದಿವೆ. ಮಲೇಷ್ಯಾ, ಟರ್ಕಿ, ಇರಾನ್‌ ಮತ್ತು ಕೆನಡಾ ಸನ್ನಿವೇಶದ ಬಗ್ಗೆ ಟೀಕೆ ಮಾಡಿವೆ. ಸಿಎಎ ಭಾರತದ ಆಂತರಿಕ ಸಂಗತಿ ಎಂದು ಹಲವು ದೇಶಗಳು ಹೇಳಿದರೂ, ಭಾರತವು ಈ ನಿಟ್ಟಿನಲ್ಲಿ ಸಹಿಷ್ಣುವಾಗಿರಬೇಕು ಎಂದು ಕರೆ ನೀಡಿವೆ.

ಕೆಲವು ಜಾಗತಿಕ ನಾಗರಿಕ ಸಮಾಜಗಳು ಈ ಕುರಿತು ಹೇಳಿಕೆ ನೀಡಿದ್ದು, ಹಿಂಸಾಚಾರವನ್ನು ಖಂಡಿಸಿವೆ ಮತ್ತು ಸಿಎಎ ಹಿಂಪಡೆಯುವಂತೆ ಕರೆ ನೀಡಿವೆ. ಪ್ರಭಾವಿ ಮಾಧ್ಯಮಗಳಲ್ಲಿ ಸಂಪಾದಕೀಯಗಳನ್ನು ಬರೆಯಲಾಗಿದ್ದು, ಈ ಕಾಯ್ದೆ ತಾರತಮ್ಯ ಮಾಡುವಂತಿದೆ ಮತ್ತು ಮುಸ್ಲಿಮರನ್ನು ಟಾರ್ಗೆಟ್‌ ಮಾಡುತ್ತಿದೆ ಎಂದಿವೆ. ವಿಶ್ವದ ಅತ್ಯಂತ ಪ್ರತಿಷ್ಠಿತ ನಿಯತಕಾಲಿಕೆ ದಿ ಎಕಾನಮಿಸ್ಟ್‌ ಕಟುವಾಗಿ ಸರ್ಕಾರವನ್ನು ಟೀಕಿಸಿದೆ. ಆರ್ಥಿಕ ಹಿಂಜರಿಕೆಯನ್ನು ತಡೆಯಲು ವಿಫಲವಾಗಿರುವ ಸರ್ಕಾರ ಜನರು ಬೀದಿಯಲ್ಲಿ ಹಿಂಸಾಚಾರಕ್ಕೆ ಇಳಿದಿರುವುದನ್ನು ತಡೆಯಲು ವಿಫಲವಾಗಿದೆ ಎಂದಿದೆ. ಇಂತಹ ಸನ್ನಿವೇಶದಲ್ಲಿ ನಾವು ಹೂಡಿಕೆ ಮಾಡಬೇಕೆ ಎಂದು ವರದಿಯಲ್ಲಿ ಕೇಳಲಾಗಿದೆ.

ವಿಶ್ವದ ದೃಷ್ಟಿಕೋನದಲ್ಲಿ ಭಾರತದ ಚಿತ್ರಣವು ಸಿಎಎ ಇಂದಾಗಿ ಘಾಸಿಯಾಗುತ್ತಿದೆ. ಕಳೆದ ಐದು ವರ್ಷಗಳಲ್ಲಿ ಪ್ರಧಾನಿಯು ವಿದೇಶಿ ನೀತಿಯಲ್ಲಿ ಗಳಿಸಿದ್ದೆಲ್ಲವೂ ಈ ಹಿಂಸಾಚಾರದಿಂದಾಗಿ ಮಾಯವಾಗಿದೆ. ಯಾಕೆ ಇದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸುತ್ತಿಲ್ಲ ಎಂಬುದೇ ಈಗಿನ ಪ್ರಶ್ನೆಯಾಗಿದೆ. ದೇಶದೊಳಗೆ ಶಾಂತಿ ಮತ್ತು ಜಾಗತಿಕ ಮಟ್ಟದಲ್ಲಿ ಇಮೇಜ್‌ಗೆ ಹಾನಿ ಮಾಡಿಕೊಂಡು ವಿದೇಶೀಯರಿಗೆ ಯಾಕೆ ನಮ್ಮ ಸರ್ಕಾರವು ಪೌರತ್ವ ನೀಡಲು ಬಯಸುತ್ತಿದೆ.

ಈ ಕಾಯ್ದೆಯು ಪಾಕಿಸ್ತಾನ, ಬಾಂಗ್ಲಾದೇಶ, ಅಫ್ಘಾನಿಸ್ತಾನದ ಮುಸ್ಲಿಮರನ್ನು ಹೊರತುಪಡಿಸಿ ಇತರ ಧರ್ಮಗಳ ದಮನಕ್ಕೊಳಗಾದ ವ್ಯಕ್ತಿಗಳಿಗೆ ಭಾರತದ ಪೌರತ್ವವನ್ನು ನೀಡುತ್ತದೆ. ಅಸ್ಸೋಂನಲ್ಲಿ ನಡೆದ ರಾಷ್ಟ್ರೀಯ ಪೌರತ್ವ ನೋಂದಣಿ ವಿಚಾರವನ್ನು ಗಮನಿಸಿದರೆ, ಸುಮಾರು 19 ಲಕ್ಷ ಜನರನ್ನು ನಿರಾಶ್ರಿತರ ಶಿಬಿರಕ್ಕೆ ಕಳುಹಿಸಬೇಕಾಗಿದೆ. ಇದು ನಿಜಕ್ಕೂ ತುಂಬಾ ಸಮಸ್ಯಾತ್ಮಕ ಸಂಗತಿಯಾಗಿದೆ. ಇದು ಜನಸಾಮಾನ್ಯರಲ್ಲಿ ಭಾರಿ ದೊಡ್ಡ ಮಟ್ಟದ ಭೀತಿಗೆ ಕಾರಣವಾಗಿದೆ. ಸಿಎಎ, ಎನ್‌ಪಿಆರ್‌ ಮತ್ತು ಎನ್‌ಆರ್‌ಸಿಯನ್ನು ಒಟ್ಟಾಗಿ ಜಾರಿ ಮಾಡಿದಾಗ ವಿದೇಶದಿಂದ ಒಳನುಸುಳಿ ಬಂದವರನ್ನು ಪರಿಣಾಮಕಾರಿಯಾಗಿ ತಡೆಯಬಹುದು ಎಂಬ ಭಾರತ ಸರ್ಕಾರದ, ಅದರಲ್ಲೂ ವಿಶೇಷವಾಗಿ ಗೃಹ ಸಚಿವಾಲಯದ ನಿರ್ಧಾರವು ಜನರಲ್ಲಿ ಭೀತಿ ಹುಟ್ಟಿಸಿದೆ.

ಪ್ರಧಾನಿ ಈಗಾಗಲೇ ಆಶ್ವಾಸನೆ ನೀಡಿರುವಂತೆ 'ಎನ್‌ಆರ್‌ಸಿಯನ್ನು ಇನ್ನೂ ಯೋಜಿಸಿಲ್ಲ' ಎಂಬುದು ಜನರಿಗೆ ಮನವರಿಕೆಯಾಗುತ್ತಿಲ್ಲ. ಸರ್ಕಾರ ಮತ್ತು ನಾಗರಿಕರ ಮಧ್ಯೆ ವಿಶ್ವಾಸದ ಕೊರತೆ ಎದ್ದು ಕಾಣುತ್ತಿದೆ. ಗೋ ರಕ್ಷಕರ ಹಿಂಸೆ, ಸಾಮೂಹಿಕ ಥಳಿತ, ಹಿರಿಯ ನಾಯಕರ ದ್ವೇಷ ಭಾಷಣಗಳು, ಉ.ಪ್ರ ದಂತಹ ರಾಜ್ಯಗಳಲ್ಲಿ ಪೊಲೀಸರು ತಾರತಮ್ಯ ಎಸಗುವುದೆಲ್ಲವೂ ಜನರಲ್ಲಿ ಇನ್ನಷ್ಟು ಅನುಮಾನಗಳನ್ನು ಹುಟ್ಟುಹಾಕಿದೆ. ಸಿಎಎ ಇಂದ ಮುಸ್ಲಿಮರನ್ನು ಹೊರಗಿಟ್ಟಿರುವುದು ಜನರಲ್ಲಿ ಮತ್ತಷ್ಟು ಭೀತಿ ಮೂಡಿಸಿದೆ. ಇವರು ಸಾಂವಿಧಾನಿಕ ಹಕ್ಕುಗಳಿಗಾಗಿ ಶಾಂತಿಯುತ ಪ್ರತಿಭಟನೆಯನ್ನು ಮಾಡಲು ಆರಂಭಿಸಿದರು.

ಸಿಎಎಯಲ್ಲಿ ಹಲವು ಸಮಸ್ಯೆಗಳಿವೆ. ಇದು ಶಿಕ್ಷೆಯ ಅಂಶವನ್ನೂ ಒಳಗೊಂಡಿದೆ. ದಮನಿತರಿಗೆ ಆಸರೆ ಮತ್ತು ಪೌರತ್ವವನ್ನು ನೀಡುವ ಪ್ರಕ್ರಿಯೆಗೆ ಯಾರೂ ವಿರೋಧ ಮಾಡುವುದಿಲ್ಲ. ಆದರೆ, ಈ ದಮನಿತರಿಗೆ ವಿಶೇಷ ಅವಕಾಶ ಅಥವಾ ಧರ್ಮದ ಆಧಾರದಲ್ಲಿ ಅವರನ್ನು ಪ್ರತ್ಯೇಕಿಸಿದಾಗ ಅದು ತಾರತಮ್ಯದ ಕಾನೂನು ಆಗುತ್ತದೆ. ಧರ್ಮದ ಆಧಾರದಲ್ಲಿ ಜನರನ್ನು ಹೊರಗಿಡುವುದಕ್ಕೆ ಸಂವಿಧಾನ ಅವಕಾಶ ನೀಡುವುದಿಲ್ಲ.

ದುರಾದೃಷ್ಟವಶಾತ್‌, ನಮ್ಮ ಹಲವು ನೆರೆ ದೇಶಗಳು ವಾಸ್ತವವಾಗಿ ಧರ್ಮದ ಆಧಾರದಲ್ಲಿ ಆಡಳಿತ ನಡೆಸುತ್ತಿವೆ. ಈ ದೇಶಗಳಲ್ಲಿ ರಾಜಕೀಯ ಉದ್ದೇಶಗಳು ಮತ್ತು ಪ್ರತಿಭಟಿಸುವವರನ್ನು ಹತ್ತಿಕ್ಕಲು ಇಲ್ಲಿ ಧರ್ಮವನ್ನೇ ಬಳಸಿಕೊಳ್ಳಲಾಗುತ್ತಿದೆ. ಈ ಕ್ಷಣಕ್ಕೆ ನಾವು ರಾಜಕೀಯ ವಿರೋಧಿಗಳನ್ನು ಪಕ್ಕಕ್ಕಿಟ್ಟರೆ, ಮುಸ್ಲಿಮರಲ್ಲೇ ಶಿಯಾ ಅಥವಾ ಅಹಮದಿಯಾ ಅಥವಾ ಹಜಾರಾಗಳಂತಹ ಅಲ್ಪಸಂಖ್ಯಾತರ ಜೊತೆಗೆ ಅತಿ ಹೆಚ್ಚು ದಮನಕ್ಕೆ ಒಳಪಟ್ಟವರು ಸುನ್ನಿ ಮುಸ್ಲಿಮರು. ಕೊಲೆ ಮತ್ತು ಸಾಮೂಹಿಕ ಹತ್ಯೆಯಂತಹ ಕ್ರೂರ ವಿಧಾನಗಳ ಮೂಲಕ ಧಾರ್ಮಿಕ ಟೀಕಾಕಾರರನ್ನು ಪಾಕಿಸ್ತಾನವು ಹತ್ತಿಕ್ಕಿದ ದೇಶದ್ರೋಹದ ಕಾನೂನಿನ ಉದಾಹರಣೆಯನ್ನೇ ತೆಗೆದುಕೊಳ್ಳೋಣ.

ಇಲ್ಲಿ ಶಿಕ್ಷೆ ಎಂದರೆ ಮರಣದಂಡನೆಯೇ ಆಗಿದೆ. ಹಲವರನ್ನು ದೇಶದಿಂದ ಗಡೀಪಾರು ಮಾಡಲಾಗಿದೆ ಮತ್ತು ವಿಶ್ವದ ವಿವಿಧ ದೇಶಗಳಲ್ಲಿ ಇವರು ಈಗಲೂ ಆಶ್ರಯದಲ್ಲಿದ್ದಾರೆ. ಬಾಂಗ್ಲಾದೇಶದಲ್ಲಿ ರಾಜಕೀಯ ಇಸ್ಲಾಂ ಮತ್ತು ಸಮಾಜದ ಮೇಲೆ ಇದು ಬೀರುತ್ತಿರುವ ಪರಿಣಾಮವನ್ನು ಪ್ರಶ್ನಿಸಿದ ಜಾತ್ಯತೀತ ಹೋರಾಟಗಾರರು ಮತ್ತು ಬ್ಲಾಗರುಗಳನ್ನು ಹತ್ಯೆಗೈದ ಉದಾಹರಣೆಗಳನ್ನೂ ನಾವು ನೋಡಬಹುದು. ಆದರೆ, ಇವರಿಗೆ ಭಾರತದಲ್ಲಿ ಆಶ್ರಯವಿಲ್ಲ. ಯಾಕೆಂದರೆ ಇವರು ಮುಸ್ಲಿಮರಾಗಿರುತ್ತಾರೆ.

ಇನ್ನೊಂದು ಸಮಸ್ಯೆಯೆಂದರೆ ಕೇವಲ ಈ ಮೂರು ದೇಶಗಳ ಜನರಿಗೆ ಮಾತ್ರ ಅನ್ವಯಿಸುತ್ತದೆ. ಆದರೆ ಶ್ರೀಲಂಕಾದ ಇತಿಹಾಸದಲ್ಲೇ ತಮಿಳರ ಮೇಲೆ ವ್ಯಾಪಕ ಪ್ರಮಾಣದಲ್ಲಿ ಹಿಂಸಾಚಾರ ನಡೆದಿದೆ. ಇದು ಅವರಿಗೆ ಅನ್ವಯವಾಗುವುದಿಲ್ಲ. ಸಾವಿರಾರು ಭಾರತೀಯ ಮೂಲದ ತಮಿಳರು ಎಲ್‌ಟಿಟಿಇ ಮತ್ತು ಸೇನೆಯ ಮಧ್ಯೆ ನಡೆದ ಯುದ್ಧದಲ್ಲಿ ಸಾವನ್ನಪ್ಪಿದ್ದಾರೆ. ಹಿಂದು ದೇಶದ ಕಾನೂನಿಗೆ ಅನುಗುಣವಾಗಿ ರೂಪಿಸಿದ ಕಾನೂನು ಈ ಸಿಎಎ ಎಂಬುದಾಗಿ ಟೀಕಿಸುವವರಿಗೆ ಇದು ಅವಕಾಶ ಮಾಡಿಕೊಟ್ಟಂತಾಗಿದೆ. ಇದನ್ನು ತಿದ್ದುಪಡಿ ಮಾಡುವ ಮೂಲಕ ಪ್ರಧಾನಿಯವರ ಸಬ್‌ಕಾ ವಿಶ್ವಾಸ್‌ ಎಂಬ ಮಂತ್ರಕ್ಕೆ ಬದ್ಧವಾಗಿರಬೇಕು. ಎಲ್ಲ ನೆರೆ ದೇಶಗಳ ಎಲ್ಲ ದಮನಿತರಿಗೂ ಇದು ಸಮಾನವಾಗಿ ಅನ್ವಯವಾಗುವಂತಿರಬೇಕು.

ಕೊನೆಯದಾಗಿ, ಆದರೆ ಅತ್ಯಂತ ಪ್ರಮುಖವಾಗಿ ನಮ್ಮ ದೇಶದ ನಾಗರಿಕರ ಅಸಮಾಧಾನವನ್ನೇ ನಿವಾರಿಸಲಾಗದ ನಮ್ಮ ಸರ್ಕಾರವು ವಿದೇಶಿಯರಿಗೆ ಪೌರತ್ವ ನೀಡಲು ಇಷ್ಟೊಂದು ಆಸಕ್ತಿ ಯಾಕಿದೆ? ಈ ನಿರ್ಧಾರವು, ಪಶ್ಚಿಮ ಬಂಗಾಳ ಮತ್ತು ಇತರ ರಾಜ್ಯಗಳಲ್ಲಿ ನಡೆಯಲಿರುವ ಚುನಾವಣೆಯಲ್ಲಿ ಅನುಕೂಲ ಮಾಡಿಕೊಳ್ಳುವ ದೃಷ್ಟಿಯಿಂದ ಮಾಡಿದ ಕಾನೂನು ಇದು ಎಂಬ ಟೀಕೆಗೆ ಇದು ಇಂಬು ನೀಡಿದೆ.

ಸರ್ಕಾರ ಸದ್ಯದ ಮಟ್ಟಿಗೆ ಆರ್ಥಿಕ ಹಿಂಜರಿತವನ್ನು ತಡೆಯಲು ಪ್ರಯತ್ನ ನಡೆಸಬೇಕಿದೆ. ಸಿಎಎ ಅಂತಹ ನಿಷ್ಪ್ರಯೋಜಕ ಕಾನೂನು ಬದಲಿಗೆ ಉದ್ಯೋಗ ಸೃಷ್ಟಿಯ ಮೇಲೆ ಗಮನಹರಿಸಬೇಕಿದೆ. ಇತ್ತೀಚಿನ ದಿನಗಳಲ್ಲಿ ಆರ್ಥಿಕತೆ ಅತ್ಯಂತ ಕುಸಿತ ಕಾಣುತ್ತಿದೆ. ಉತ್ಪಾದನೆ ವಲಯ ಕುಸಿತ ಕಂಡಿದೆ ಮತ್ತು ನಿರುದ್ಯೋಗ ನಾಲ್ಕು ದಶಕಗಳಲ್ಲೇ ಅತ್ಯಧಿಕವಾಗಿದೆ. ರೈತರಂತೂ ದೇಶಾದ್ಯಂತ ಕೃಷಿ ವೆಚ್ಚ ಮತ್ತು ಹವಾಮಾನ ವೈಪರೀತ್ಯದಿಂದ ಚಿಂತಾಕ್ರಾಂತರಾಗಿದ್ದಾರೆ. ಯುವಕರಿಗೆ ಇನ್ನಷ್ಟು ಶೈಕ್ಷಣಿಕ ಮತ್ತು ಔದ್ಯೋಗಿಕ ಅವಕಾಶಗಳು ಬೇಕಿದೆ. ಮಹಿಳೆಯರ ಸುರಕ್ಷತೆ ಮತ್ತು ಭದ್ರತೆ ವಿಚಾರದಲ್ಲಿ ಹಲವು ಕ್ರಮಗಳನ್ನು ಕೈಗೊಳ್ಳುವ ಅಗತ್ಯವಿದೆ. ಸರ್ಕಾರವು ಪ್ರಗತಿ ಮತ್ತು ಅಭಿವೃದ್ಧಿಯ ಆಧಾರದಲ್ಲಿ ಅಧಿಕಾರಕ್ಕೆ ಬಂದು, ಅನಗತ್ಯ ಕಾನೂನಿನ ಸುಳಿಯಲ್ಲಿ ಸಿಲುಕಬಾರದು. ದಂಗೆ ಮತ್ತು ಸಾಮಾಜಿಕ ಸಹಿಷ್ಣುತೆ ಇಲ್ಲದೇ ವಿದೇಶಿ ಬಂಡವಾಳವನ್ನು ಮೇಕ್ ಇನ್ ಇಂಡಿಯಾ ಆಕರ್ಷಿಸಲು ಸಾಧ್ಯವಿಲ್ಲ. ನ್ಯಾಯ, ಸಮಾನತೆ ಮತ್ತು ತಾರತಮ್ಯ ರಹಿತ ನೀತಿಯನ್ನು ಸರ್ಕಾರ ಹೊಂದಿರಬೇಕು ಎಂದು ಸಂವಿಧಾನ ಹೇಳುತ್ತದೆ. ಸಿಎಎ ವಿಚಾರದಲ್ಲಿ ಸರ್ಕಾರ ತನ್ನ ನಿರ್ಧಾರವನ್ನು ಪುನಃ ಪರಿಶೀಲನೆ ಮಾಡಿಕೊಳ್ಳಬೇಕು. ಹಾಗೆ ಮಾಡದಿದ್ದರೆ, ಬಹು ನಂಬಿಕೆಯ, ಬಹು ಸಾಂಸ್ಕೃತಿಕ ಪ್ರಜಾಪ್ರಭುತ್ವ ಎಂಬ ಭಾರತದ ಹೆಗ್ಗಳಿಕೆಗೆ ಸರಿಪಡಿಸಲಾಗದ ಹಾನಿ ಆಗುತ್ತದೆ.

-ಝಾಕಿಯಾ ಸೋಮನ್‌

ETV Bharat Logo

Copyright © 2025 Ushodaya Enterprises Pvt. Ltd., All Rights Reserved.