ಲಖನೌ ( ಉತ್ತರ ಪ್ರದೇಶ) : ಹಣದ ವಿಚಾರಕ್ಕೆ ಸಂಬಂದಪಟ್ಟಂತೆ ಫೈನಾನ್ಸ್ ಕಂಪನಿಯವರು 34 ಪ್ರಯಾಣಿಕರ ಸಹಿತ ಬಸ್ ಅಕ್ರಮವಾಗಿ ವಶಪಡಿಸಿಕೊಂಡ ಘಟನೆ ಆಗ್ರಾದಲ್ಲಿ ನಡೆದಿದೆ.
ಗುರುಗಾಂವ್ನಿಂದ ಪನ್ನಾಗೆ ತೆರಳುತ್ತಿದ್ದ ಬಸ್ ಅನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿದು ಬಂದಿದೆ. ಆರಂಭದಲ್ಲಿ ಬಸ್ ಅಪಹರಿಸಲಾಗಿದೆ ಎಂದು ಸುದ್ದಿಯಾಗಿತ್ತು.
ಈ ಕುರಿತು ಸ್ಪಷ್ಟನೆ ನೀಡಿರುವ ಆಗ್ರಾ ಎಸ್ಪಿ ಬಬ್ಲು ಸಿಂಗ್, ಗುರುಗಾಂವ್ನಿಂದ ಪನ್ನಾಗೆ ತೆರಳುತ್ತಿದ್ದ ಬಸ್ ಅನ್ನು ಫೈನಾನ್ಸ್ ಕಂಪನಿಯವರು ಚೇಸ್ ಮಾಡಿ ಅಕ್ರಮವಾಗಿ ವಶಪಡಿಸಿಕೊಂಡಿರುವುದಾಗಿ ಗ್ವಾಲಿಯರ್ನ ಮೂವರು ಬಂದು ದೂರು ನೀಡಿದ್ದಾರೆ. ಈ ಕುರಿತು ತನಿಖೆ ನಡೆಸುತ್ತಿದ್ದೇವೆ ಎಂದು ಅವರು ಹೇಳಿದ್ದಾರೆ.
ಹಣಕಾಸು ಕಂಪನಿ ಅಕ್ರಮವಾಗಿ ಬಸ್ ವಶಪಡಿಸಿಕೊಂಡಿದೆ. ಚಾಲಕ ಮತ್ತು ಪ್ರಯಾಣಿಕರು ಸುರಕ್ಷಿತರಾಗಿದ್ದಾರೆ. ಬಸ್‌ನ ಮಾಲೀಕರು ನಿನ್ನೆ ಮೃತಪಟ್ಟಿದ್ದರು ಎಂದು ಗೃಹ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅವನಿಶ್ ಅವಸ್ಥಿ ತಿಳಿಸಿದ್ದಾರೆ.