ಮುಂಬೈ: ಇಲ್ಲಿನ ಡೊಂಗ್ರಿಸ್ಪಾಟ್ನಲ್ಲಿ ನಿನ್ನೆ ಸಂಭವಿಸಿದ್ದ ನೂರು ವರ್ಷದಷ್ಟು ಹಳೆಯ 4 ಅಂತಸ್ತಿನ ಕಟ್ಟಡ ಕುಸಿತದ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 14ಕ್ಕೆ ಏರಿಕೆಯಾಗಿದೆ. ರಕ್ಷಣಾ ತಂಡಗಳು 8 ಜನರನ್ನು ಬಚಾವ್ ಮಾಡಿದ್ದು, ಕಾರ್ಯಾಚರಣೆ ಮುಂದುವರೆದಿದೆ.
-
National Disaster Response Force (NDRF): Death toll rises to 14 in the Kesarbhai building collapse incident. https://t.co/weo5grCJWs
— ANI (@ANI) July 17, 2019 " class="align-text-top noRightClick twitterSection" data="
">National Disaster Response Force (NDRF): Death toll rises to 14 in the Kesarbhai building collapse incident. https://t.co/weo5grCJWs
— ANI (@ANI) July 17, 2019National Disaster Response Force (NDRF): Death toll rises to 14 in the Kesarbhai building collapse incident. https://t.co/weo5grCJWs
— ANI (@ANI) July 17, 2019
ನಿನ್ನೆ ಬೆಳಗ್ಗೆ 11 ಗಂಟೆ 40 ನಿಮಿಷದ ಸುಮಾರಿಗೆ ಈ ದುರ್ಘಟನೆ ನಡೆದಿತ್ತು. ಅವಶೇಷಗಳಡಿಯಲ್ಲಿ ಹಲವರು ಸಿಲುಕಿರುವ ಶಂಕೆ ವ್ಯಕ್ತವಾಗಿದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ.
ಅಗ್ನಿಶಾಮಕ ದಳ, ಎನ್‌ಡಿಆರ್‌ಎಫ್ ತಂಡಗಳು ಸ್ಥಳದಲ್ಲೇ ಬೀಡುಬಿಟ್ಟಿದ್ದು, ಕಾರ್ಯಾಚರಣೆಯಲ್ಲಿ ತೊಡಗಿವೆ. ಈ ಕಟ್ಟಡದಲ್ಲಿ 14ರಿಂದ 15 ಕುಟುಂಬಗಳು ವಾಸವಾಗಿದ್ದವು ಎಂದು ತಿಳಿದು ಬಂದಿದೆ.
ಘಟನೆಗೆ ಸಂಬಂಧಿಸಿದಂತೆ ಈಗಾಗಲೇ ಸೂಕ್ತ ತನಿಖೆಗೆ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವಿಸ್ ಆದೇಶ ನೀಡಿದ್ದಾರೆ.