ಜಮ್ಶೇಡ್ಪುರ (ಜಾರ್ಖಂಡ್): ಮಾರಣಾಂತಿಕ ಕೊರೊನಾಗೆ ಇಡೀ ದೇಶವೇ ಬೆಚ್ಚಿಬಿದ್ದಿದೆ. ಈ ಹಿನ್ನೆಲೆ ಅಗತ್ಯವಾದ ಎಲ್ಲಾ ವೈದ್ಯಕೀಯ ಪರಿಕರಗಳನ್ನು ಸಂಪೂರ್ಣವಾಗಿ ಪೂರೈಸಲು ಸರ್ಕಾರಕ್ಕೆ ಆಗುತ್ತಿಲ್ಲ. ಈ ಕಾರಣಕ್ಕಾಗಿಯೇ ಬಿ ಟೆಕ್ ವಿದ್ಯಾರ್ಥಿಯೊಬ್ಬ ಪಿಪಿಇ ಮಾಸ್ಕ್ಗಳನ್ನು ತಯಾರಿಸಿದ್ದಾರೆ.
ಪಂಚಾಯತ್ ಪ್ರದೇಶದ ಬಿ.ಟೆಕ್ ವಿದ್ಯಾರ್ಥಿ ವಿವೇಕ್ ರಾಜ್ ಅವರು ಸೆಲ್ಲೋಫೇನ್ ಪೇಪರ್ ಮತ್ತು ರಟ್ಟನ್ನು ಬಳಸಿ ಈ ಮುಖಗವಸಗಳನ್ನು ತಯಾರು ಮಾಡಿದ್ದಾರೆ. ಈ ಮಾಸ್ಕ್ಗಳನ್ನು ತಯಾರಿಸಲು ಒಂದಕ್ಕೆ 10 ರೂ. ಖರ್ಚಾಗುತ್ತದೆ. ನಾನು ಹಣಕ್ಕಾಗಿ ಈ ಕೆಲಸ ಮಾಡುತ್ತಿಲ್ಲ. ಎಲ್ಲರೂ ಸುರಕ್ಷಿತವಾಗಿರಿಸಿಕೊಳ್ಳಬೇಕು, ವಿಶೇಷವಾಗಿ ಅನೇಕ ಜನರೊಂದಿಗೆ ನಿಕಟ ಸಂಪರ್ಕದಲ್ಲಿರುವ ಅಂಗಡಿಯವರಿಗೆ ಇದು ಉಪಯೋಗವಾಗಬೇಕು ಎಂಬುದು ವಿವೇಕ್ ಮಾತು.
ವಿವೇಕ್ ಅವರ ತಂದೆ ರಾಜೇಶ್ ಕುಮಾರ್, ತಮ್ಮ ಮಗನ ಬಗ್ಗೆ ಹೆಮ್ಮೆಪಡುತ್ತಾರೆ. ಈ ಬಿಕ್ಕಟ್ಟಿನ ಸಮಯದಲ್ಲಿ ಎಲ್ಲರೂ ಒಟ್ಟಾಗಿ ಕೆಲಸ ಮಾಡಬೇಕು. ಅಗ್ಗದ ಪಿಪಿಇ ಮಾಸ್ಕ್ ಸೋಂಕಿನಿಂದ ರಕ್ಷಿಸಿಕೊಳ್ಳಲು ಸಹಾಯ ಮಾಡುತ್ತದೆ ಎಂದರು. ಇನ್ನು ಈ ಮಾಸ್ಕ್ ಖಂಡಿತವಾಗಿಯೂ ದೇಶವನ್ನು ಕೊರೊನಾದಿಂದ ರಕ್ಷಿಸಲು ಸಹಾಯ ಮಾಡುತ್ತದೆ ಎಂದು ವಿವೇಕ್ ರಾಜ್ ಅಭಿಪ್ರಾಯಪಡುತ್ತಾರೆ.