ನವದೆಹಲಿ: ರಾಜ್ಯ ಬಿಜೆಪಿಯಿಂದ ಅಸಮಾಧಾನಗೊಂಡು, ಮುಂದಿನ ನಿರ್ಧಾರ ಕೈಗೊಳ್ಳುವ ಬಗ್ಗೆ ಅಮಿತ್ ಶಾ ಭೇಟಿಗೆ ತುದಿಗಾಗಲ್ಲಿ ನಿಂತಿರುವ ಅನರ್ಹ ಶಾಸಕರನ್ನು ಸಿಎಂ ಯಡಿಯೂರಪ್ಪ ಸಮಾಧಾನ ಪಡಿಸುವ ಪ್ರಯತ್ನ ನಡೆಸುತ್ತಿದ್ದಾರೆ.
ಖಾಸಗಿ ಹೊಟೇಲ್‌ನಲ್ಲಿ ಅತೃಪ್ತರ ಜೊತೆ ಬಿಎಸ್ವೈ ಚರ್ಚೆ:
ಈ ಕಾರಣ ದೆಹಲಿಗೆ ತೆರಳಿರುವ ಬಿಎಸ್ವೈ, ದೆಹಲಿಯ ಕರ್ನಾಟಕ ಭವನದಿಂದ ಖಾಸಗಿ ಹೋಟೆಲ್ಗೆ ಅನರ್ಹ ಶಾಸಕರನ್ನು ಕರೆಸಿಕೊಂಡಿದ್ದಾರೆ. ಬಳಿಕ ಸುಮಾರು 2 ಗಂಟೆಗಳಿಂದ ಸಭೆ ನಡೆಸಿ ಅವರ ಮನವೊಲಿಸಲು ಹರಸಾಹಸ ಪಡ್ತಿದ್ದಾರೆ. ಈ ವೇಳೆ ಸಿಎಂ ಪುತ್ರ ಬಿ.ವೈ ರಾಘವೇಂದ್ರ ಕೂಡ ಸಾಥ್ ನೀಡಿದ್ದಾರೆ.
ಇನ್ನೂ ಸಭೆಯ ವೇಳೆ ಅನರ್ಹ ಶಾಸಕರ ಆತಂಕಕ್ಕೆ ಕಾರಣವೇನು? ಸರ್ಕಾರ ರಚನೆಗೂ ಮುನ್ನ ಅವರಿಗೆ ನೀಡಿದ್ದಂತಹ ಭರವಸೆಗಳೇನು? ಅವರನ್ನು ಸಮಾಧಾನ ಪಡಿಸಲು ಏನು ಮಾಡಬಹುದು ಎನ್ನುವುದರ ಬಗ್ಗೆ ಚರ್ಚೆ ನಡೆದಿದೆ. ಇದೇ ವೇಳೆ ಸೋಮವಾರ ಸುಪ್ರೀಂಕೋರ್ಟ್ನಲ್ಲಿ ಅನರ್ಹ ಶಾಸಕರ ಅರ್ಜಿ ಪ್ರಸ್ತಾಪಿಸುವ ಭರವಸೆಯನ್ನೂ ಬಿಎಸ್ವೈ ನೀಡಿದ್ದಾರೆ ಎನ್ನಲಾಗಿದೆ.
ಪಟ್ಟು ಸಡಿಲಿಸದ ಅತೃಪ್ತ ಶಾಸಕರು?
ಈ ನಡುವೆ ಬ್ಯುಸಿಯಾಗಿರುವ ಅಮಿತ್ ಶಾ ಇನ್ನೂ ಕೂಡ ಯಾರನ್ನೂ ಭೇಟಿಯಾಗಿಲ್ಲ. ಹಾಗಾಗಿ ಇಂದು ಸಂಜೆಯಾದರೂ ಸರಿ ನಾಳೆಯಾದರೂ ಸರಿ ದೆಹಲಿಯಲ್ಲಿಯೇ ತಂಗಿದ್ದು, ಅವರಿಗಾಗಿ ಕಾದು ಭೇಟಿಯಾಗಿಯೇ ಹಿಂತಿರುಗುವುದಾಗಿ ತಿಳಿಸಿದ್ದಾರೆ.