ETV Bharat / bharat

ಸಿಗದ ಆಂಬ್ಯುಲೆನ್ಸ್​​ ಸೇವೆ... ಎತ್ತಿನ ಬಂಡಿಯಲ್ಲಿ ಅನಾರೋಗ್ಯ ಪೀಡಿತ ಸಹೋದರನ ಕರೆತಂದ ಅಣ್ಣ! - ಅನಾರೋಗ್ಯ ಪೀಡಿತ ಸಹೋದರ

ಅನಾರೋಗ್ಯ ಪೀಡಿತ ಸಹೋದರನೋರ್ವನಿಗೆ ಎತ್ತಿನ ಬಂಡಿಯಲ್ಲಿ ಆಸ್ಪತ್ರೆಗೆ ಕರೆದುಕೊಂಡು ಬಂದಿರುವ ಘಟನೆ ಉತ್ತರಪ್ರದೇಶದಲ್ಲಿ ನಡೆದಿದ್ದು, ಇದರ ವಿಡಿಯೋ ಎಲ್ಲೆಡೆ ವೈರಲ್​ ಆಗಿದೆ.

bullock cart
bullock cart
author img

By

Published : Aug 31, 2020, 5:00 PM IST

ಫಾರೂಖಾಬಾದ್​: ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್​ ನೇತೃತ್ವದ ಬಿಜೆಪಿ ಸರ್ಕಾರ, ಜನಸಾಮಾನ್ಯರ ಆರೋಗ್ಯಕ್ಕಾಗಿ ಹೆಚ್ಚು ಪ್ರಾಮುಖ್ಯತೆ ನೀಡ್ತಿದೆ ಎಂಬ ಮಾತು ಈ ಹಿಂದಿನಿಂದಲೂ ಕೇಳಿ ಬರುತ್ತಿದೆ. ಆದರೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಈ ವಿಡಿಯೋ ನೋಡಿದ್ರೆ ಕೇವಲ ಬಾಯಿ ಮಾತಿಗೆ ಮಾತ್ರ ಈ ರೀತಿಯ ಹೇಳಿಕೆ ನೀಡ್ತಿದೆ ಎಂಬ ಮಾತು ನಿಜ ಅನಿಸುತ್ತದೆ.

ಅನಾರೋಗ್ಯ ಪೀಡಿತ ಸಹೋದರನನ್ನ ಆಸ್ಪತ್ರೆಗೆ ಸೇರಿಸಲು ಸರಿಯಾದ ಸಮಯಕ್ಕೆ ಆಂಬ್ಯುಲೆನ್ಸ್​​ ಸಿಗದ ಕಾರಣ ಆತನ ಅಣ್ಣ ಎತ್ತಿನ ಬಂಡಿಯಲ್ಲೇ ಕರೆದುಕೊಂಡು ಬಂದಿದ್ದಾನೆ. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಎತ್ತಿನ ಬಂಡಿಯಲ್ಲಿ ಅನಾರೋಗ್ಯ ಪೀಡಿತ ಸಹೋದರ

ಬೋಜಪುರ್​​ ಗ್ರಾಮದ ನಿವಾಸಿ ವಿನೋದ್​ ಕುಮಾರ್​​​ ಕಳೆದ ಕೆಲ ದಿನಗಳಿಂದ ಅನಾರೋಗ್ಯ ಪೀಡಿತರಾಗಿದ್ದರು. ಅವರನ್ನ ಆಸ್ಪತ್ರೆಗೆ ದಾಖಲು ಮಾಡುವ ಉದ್ದೇಶದಿಂದ ಸರ್ವೇಶ್​​ ಆಂಬ್ಯುಲೆನ್ಸ್​ಗೆ ಕರೆ ಮಾಡಿದ್ದಾನೆ. ಹಲವಾರು ಗಂಟೆ ಕಳೆದರೂ ಅದು ಸ್ಥಳಕ್ಕೆ ಬಂದಿಲ್ಲ. ಹೀಗಾಗಿ ಬೇರೆ ದಾರಿ ಕಾಣದೇ ಎತ್ತಿನ ಬಂಡಿಯ ಮೂಲಕ ಆತನನ್ನ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ.

ಇದೇ ವಿಷಯವಾಗಿ ಮಾತನಾಡಿರುವ ಸರ್ಕಾರಿ ಆಸ್ಪತ್ರೆ ಆರೋಗ್ಯಧಿಕಾರಿ ಸೋಮೇಶ್​​ ಅಗ್ನಿಹೋತ್ರಿ, ಆಂಬ್ಯುಲೆನ್ಸ್​​ ಸೇವೆ ಲಕ್ನೋದಿಂದ ಕಾರ್ಯನಿರ್ವಹಿಸುತ್ತದೆ. ಅದಕ್ಕೂ ಆಸ್ಪತ್ರೆಗೂ ಯಾವುದೇ ರೀತಿಯ ಸಂಬಂಧವಿಲ್ಲ ಎಂದಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.