ETV Bharat / bharat

ಭಾರತ-ಚೀನಾ ಗಡಿ ಪ್ರದೇಶದ ಬಳಿ ಕುಸಿದಿದ್ದ ಸೇತುವೆ: 5 ದಿನದಲ್ಲೇ ಮರು ನಿರ್ಮಾಣ ಮಾಡಿದ ಬಿಆರ್​ಒ!

author img

By

Published : Jun 27, 2020, 7:29 PM IST

ಭಾರತ ಚೀನಾ ಗಡಿಯಲ್ಲಿ ಕುಸಿದು ಬಿದ್ದಿದ್ದ ಸೇತುವೆಯನ್ನು ಗಡಿ ರಸ್ತೆಗಳ ಸಂಸ್ಥೆ ಕೇವಲ 5 ದಿನಗಳ ಅವಧಿಯಲ್ಲೇ ಮರು ನಿರ್ಮಾಣ ಮಾಡಿದೆ.

BRO restores bridge near India-China border
ಭಾರತ-ಚೀನಾ ಗಡಿ ಪ್ರದೇಶದ ಬಳಿ ಸೇತುವೆ ಕುಸಿತ

ಪಿಥೋರಗರ್: ಉತ್ತರಾಖಂಡ್​​ ರಾಜ್ಯದ ಇಂಡೋ-ಚೀನಾ ಗಡಿ ಸಮೀಪವಿರುವ ಲಿಲಾಮ್ ಜೋಹರ್ ಕಣಿವೆಯ ಮುನ್ಸಾರಿ ತಹಸಿಲ್​ನ ಧಾಪಾ-ಮಿಲಾಮ್ ರಸ್ತೆಯಲ್ಲಿ ಕುಸಿದು ಬಿದ್ದಿದ್ದ ಸೇತುವೆಯನ್ನು ಮತ್ತೆ ನಿರ್ಮಾಣ ಮಾಡಲಾಗಿದೆ.

ಭಾರತ-ಚೀನಾ ಗಡಿ ಸಮೀಪವಿರುವ ಸೇತುವೆ ಭಾರೀ ನಿರ್ಮಾಣ ಉಪಕರಣಗಳನ್ನು ಹೊತ್ತ ಟ್ರಕ್ ಸಾಗುತ್ತಿದ್ದ ವೇಳೆ ಕುಸಿದು ಬಿದ್ದಿತ್ತು. ಇದೀಗ ಈ ಸೇತುವೆಯನ್ನು ಗಡಿ ರಸ್ತೆಗಳ ಸಂಸ್ಥೆ (ಬಿಆರ್‌ಒ) ಕೇವಲ 5 ದಿನಗಳಲ್ಲೇ ಮರು ನಿರ್ಮಾಣ ಮಾಡಿದೆ.

BRO restores bridge near India-China border
ಮರು ನಿರ್ಮಾಣವಾದ ಸೇತುವೆ

ಉತ್ತರಾಖಂಡ್​​​: ಭಾರತ-ಚೀನಾ ಗಡಿ ಪ್ರದೇಶದ ಬಳಿ ಸೇತುವೆ ಕುಸಿತ... ವಿಡಿಯೋ

ಭಾರತ-ಚೀನಾ ಸಂಘರ್ಷದ ಹಿನ್ನೆಲೆಯಲ್ಲಿ ಸೇತುವೆಯ ಕಾರ್ಯತಂತ್ರದ ಪ್ರಾಮುಖ್ಯತೆಯನ್ನು ಗಮನದಲ್ಲಿಟ್ಟುಕೊಂಡು ಬಿಆರ್‌ಒ ಜೂನ್ 23ರಂದು ಹೊಸ ಸೇತುವೆ ನಿರ್ಮಾಣವನ್ನು ಪ್ರಾರಂಭಿಸಿತು. ಇದೀಗ ಸೇತುವೆ ನಿರ್ಮಾಣ ಕಾರ್ಯ ಪೂರ್ಣವಾಗಿದ್ದು, ವಾಹನಗಳ ಸಂಚಾರಕ್ಕೆ ಶೀಘ್ರದಲ್ಲೇ ಅವಕಾಶ ನೀಡಲಾಗುವುದು ಎಂದು ಬಿಆರ್‌ಒ ಅಧಿಕಾರಿಗಳು ತಿಳಿಸಿದ್ದಾರೆ.

ಸೇತುವೆ ಕುಸಿದಿದ್ದರಿಂದ ಗಡಿ ಪ್ರದೇಶದ ಸುತ್ತಮುತ್ತಲಿನ 12 ಹಳ್ಳಿಗಳ 7 ಸಾವಿರಕ್ಕೂ ಹೆಚ್ಚು ಜನರಿಗೆ ತೊಂದರೆಯಾಗಿತ್ತು. ಸೈನಿಕರು ಮತ್ತು ಐಟಿಬಿಪಿ ಸಿಬ್ಬಂದಿ ಸಂಚಾರಕ್ಕೂ ಅಡಚಣೆ ಉಂಟಾಗಿತ್ತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.