ETV Bharat / bharat

ಪ್ಲಾಸ್ಟಿಕ್ ತ್ಯಾಜ್ಯಕ್ಕೆ ಹೊಟ್ಟೆ ತುಂಬ ಊಟ ಫ್ರೀ.. ಇದು 'ಗಾರ್ಬೇಜ್‌' ಕೆಫೆ! - municipal corporation

ಪ್ಲಾಸ್ಟಿಕ್‌ ತ್ಯಾಜ್ಯ ವಿಲೇವಾರಿಗೆ ಮಹಾನಗರ ಪಾಲಿಕೆ ಹೊಸ ಕ್ರಮ ಕೈಗೊಂಡಿದೆ. ಗಾರ್ಬೇಜ್‌ ಕೆಫೆ ಮೂಲಕ ತ್ಯಾಜ್ಯ ಸಂಗ್ರಹಿಸಿ ನೀಡುವವರಿಗೆ ಹೊಟ್ಟೆ ತುಂಬ ಊಟ ನೀಡುವ ಯೋಜನೆ ಕೈಗೊಂಡಿದೆ.

plastic waste
author img

By

Published : Jul 20, 2019, 11:00 AM IST

ಛತ್ತೀಸ್​ಗಢ: ಪರಿಸರಕ್ಕೆ ಹಾನಿ ಆಗಬಾರದು ಮತ್ತು ನಗರ ಕ್ಲೀನ್ ಆಗಿರ್ಬೇಕು ಅಂದ್ರೇ ಮೊದಲು ಪ್ಲಾಸ್ಟಿಕ್‌ ತ್ಯಾಜ್ಯ ವಿಲೇವಾರಿ ಆಗಬೇಕು. ಆದರೆ, ಟನ್‌ಗಟ್ಟಲೇ ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹವಾಗ್ತಿರೋದ್ರಿಂದ ಸಿಟಿಗಳಲ್ಲಿ ಅದರ ವಿಲೇವಾರಿ ಆಗ್ತಿಲ್ಲ. ಚಿಂದಿ ಆಯುವವರು ತ್ಯಾಜ್ಯ ಸಂಗ್ರಹಿಸಿ ಅದರ ಮಾರಾಟದಿಂದ ಒಂದು ಹೊತ್ತಿನ ಊಟಕ್ಕೂ ಆಗೋದಿಲ್ಲ. ಅದಕ್ಕಾಗಿ ಈಗ ದೇಶದಲ್ಲಿಯೇ ಮೊದಲ ಬಾರಿಗೆ ಗಾರ್ಬೇಜ್‌ ಕೆಫೆಯೊಂದು ಓಪನ್‌ ಆಗ್ತಿದೆ.

plastic waste
ಪ್ಲಾಸ್ಟಿಕ್ ತ್ಯಾಜ್ಯ ವಿಲೇವಾರಿ

1 ಕೆಜಿಗೆ ಊಟ, 500 ಗ್ರಾಂಗೆ ಉಪಹಾರ ನೀಡಲು ನಿರ್ಧಾರ!

ಚಿಂದಿ ಆಯುವವರ ಹೊಟ್ಟೆ ತುಂಬಿಸಲೆಂದೇ ದೇಶದ ಮೊದಲ ಗಾರ್ಬೇಜ್‌ ಕೆಫೆ ಛತ್ತೀಸಢದ ಅಂಬಿಕಾಪುರ ನಗರದಲ್ಲಿ ಓಪನಾಗಲಿದೆ. ಚಿಂದಿ ಆಯುವವರು ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹಿಸಿ ಕೊಟ್ರೇ ಅವರಿಗೆ ಮಹಾನಗರ ಪಾಲಿಕೆ ವತಿಯಿಂದ ಫ್ರೀ ಊಟ ಕೊಡಲಾಗುತ್ತೆ. 1ಕೆಜಿ ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹಿಸಿ ನೀಡಿದ್ರೇ ಊಟ ಹಾಗೂ 500 ಗ್ರಾಂ ತ್ಯಾಜ್ಯಕ್ಕೆ ಉಪಹಾರ ನೀಡಲಾಗುತ್ತದೆ. ಕೆಫೆಯಲ್ಲಿ ಸಂಗ್ರಹಿಸಿದ ಪ್ಲಾಸ್ಟಿಕ್​ ತ್ಯಾಜ್ಯವನ್ನು ರಸ್ತೆ ನಿರ್ಮಾಣದಲ್ಲಿ ಬಳಸುವ ಯೋಜನೆ ಪಾಲಿಕೆ ಹಾಕಿಕೊಂಡಿದೆ. ಪಾಲಿಕೆ ಬಜೆಟ್ ಮಂಡಿಸಿದ ಮೇಯರ್ ಅಜಯ್ ಟಿರ್ಕೆ, ಗಾರ್ಬೇಜ್ ಕೆಫೆ ನಗರದ ಮುಖ್ಯ ಬಸ್​ ನಿಲ್ದಾಣದಿಂದಲೇ ಕಾರ್ಯ ನಿರ್ವಹಸಲಿದೆ ಎಂದು ಹೇಳಿದ್ದಾರೆ.

ಗಾರ್ಬೇಜ್‌ ಕೆಫೆಗಾಗಿ ವರ್ಷಕ್ಕೆ 5 ಲಕ್ಷ ಅನುದಾನ ಮೀಸಲು!

'ಗಾರ್ಬೇಜ್ ಕೆಫೆ' ಸ್ಕೀಮ್​ಗಾಗಿ 5 ಲಕ್ಷ ಬಜೆಟ್ ಮೀಸಲಿರಿಸಲಾಗಿದೆ. ಈಗಾಗಲೇ ಅಂಬಿಕಾಪುರ್​ನಲ್ಲಿ ಪ್ಲಾಸ್ಟಿಕ್​ ಕಣಗಳು ಹಾಗೂ ಡಾಂಬರ್‌ ಬಳಸಿ ನಿರ್ಮಿಸಲಾದ ರಸ್ತೆಗಳಿವೆ. 8 ಲಕ್ಷ ಪ್ಲಾಸ್ಟಿಕ್​ ಚೀಲಗಳನ್ನು ಡಾಂಬರಿನೊಂದಿಗೆ ಮಿಶ್ರ ಮಾಡಿ ರಸ್ತೆ ನಿರ್ಮಿಸಲಾಗಿತ್ತು. ಈ ಯೋಜನೆಯಡಿ ಬಡ ನಿರಾಶ್ರಿತರಿಗೆ ಪ್ಲಾಸ್ಟಿಕ್​ ತ್ಯಾಜ್ಯದ ಬದಲಿಗೆ ಉಚಿತ ಆಹಾರ ನೀಡಲಾಗುತ್ತದೆ. ಅಷ್ಟೇ ಅಲ್ಲ, ನಿರಾಶ್ರಿತರಿಗೆ ಆಶ್ರಯ ಒದಗಿಸುವ ಉದ್ದೇಶವೂ ಪಾಲಿಕೆಗಿದೆಯಂತೆ.

ಸ್ವಚ್ಛತಾ ಅಭಿಯಾನದಲ್ಲಿ ಅಂಬಿಕಾನಗರ ಈಗಾಗಲೇ ದೇಶದಲ್ಲೇ 2ನೇ ಸ್ಥಾನದಲ್ಲಿದೆ. ಸ್ವಚ್ಛತಾ ಆಂದೋಲನದ ಅಡಿ ಗಾರ್ಬೇಜ್ ಕೆಫೆ ತೆರೆಯಲಾಗ್ತಿದ್ದು, ನಗರದಲ್ಲಿ ಪ್ಲಾಸ್ಟಿಕ್​ ಚೀಲಗಳ ಬಳಕೆ ಸಂಪೂರ್ಣ ನಿಷೇಧಿಸಲಾಗಿದೆ ಎಂದು ಮೇಯರ್ ಅಜಯ್ ಟಿರ್ಕೆ ಹೇಳಿದ್ದಾರೆ.

Intro:Body:

1ಕೆಜಿ ಪ್ಲಾಸ್ಟಿಕ್ ತ್ಯಾಜ್ಯಕ್ಕೆ ಹೊಟ್ಟೆ ತುಂಬ ಊಟ ಫ್ರೀ.. ಇದು 'ಗಾರ್ಬೇಜ್‌' ಕೆಫೆ!

'ಗಾರ್ಬೇಜ್ ಕೆಫೆ' ಸ್ಕೀಮ್​ಗಾಗಿ 5 ಲಕ್ಷ ಬಜೆಟ್ ಮೀಸಲಿರಿಸಲಾಗಿದೆ. ಈಗಾಗಲೇ ಅಂಬಿಕಾಪುರ್​ನಲ್ಲಿ ಪ್ಲಾಸ್ಟಿಕ್​ ಕಣಗಳು ಹಾಗೂ ಡಾಂಬರ್‌ ಬಳಸಿ ನಿರ್ಮಿಸಲಾದ ರಸ್ತೆಗಳಿವೆ. 8 ಲಕ್ಷ ಪ್ಲಾಸ್ಟಿಕ್​ ಚೀಲಗಳನ್ನು ಡಾಂಬರಿನೊಂದಿಗೆ ಮಿಶ್ರ ಮಾಡಿ ರಸ್ತೆ ನಿರ್ಮಿಸಲಾಗಿತ್ತು. ಈ ಯೋಜನೆಯಡಿ ಬಡ ನಿರಾಶ್ರಿತರಿಗೆ ಪ್ಲಾಸ್ಟಿಕ್​ ತ್ಯಾಜ್ಯದ ಬದಲಿಗೆ ಉಚಿತ ಆಹಾರ ನೀಡಲಾಗುತ್ತದೆ. ಅಷ್ಟೇ ಅಲ್ಲ, ನಿರಾಶ್ರಿತರಿಗೆ ಆಶ್ರಯ ಒದಗಿಸುವ ಉದ್ದೇಶವೂ ಪಾಲಿಕೆಗಿದೆಯಂತೆ. ಸ್ವಚ್ಛತಾ ಅಭಿಯಾನದಲ್ಲಿ ಅಂಬಿಕಾನಗರ ಈಗಾಗಲೇ ದೇಶದಲ್ಲೇ 2ನೇ ಸ್ಥಾನದಲ್ಲಿದೆ. ಸ್ವಚ್ಛತಾ ಆಂದೋಲನದ ಅಡಿ ಗಾರ್ಬೇಜ್ ಕೆಫೆ ತೆರೆಯಲಾಗ್ತಿದ್ದು, ನಗರದಲ್ಲಿ ಪ್ಲಾಸ್ಟಿಕ್​ ಚೀಲಗಳ ಬಳಕೆ ಸಂಪೂರ್ಣ ನಿಷೇಧಿಸಲಾಗಿದೆ ಎಂದು ಮೇಯರ್ ಅಜಯ್ ಟಿರ್ಕೆ ಹೇಳಿದ್ದಾರೆ.

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.