ಕೋಲ್ಕತ್ತಾ: ಇಂಡಿಯನ್ ಪ್ರೀಮಿಯರ್ ಲೀಗ್ ಹರಾಜು ಪ್ರಕ್ರಿಯೆಯಲ್ಲಿ ಆಸ್ಟ್ರೇಲಿಯಾದ ವೇಗದ ಬೌಲರ್ ಪ್ಯಾಟ್ ಕಮ್ಮಿನ್ಸ್ ಬರೋಬ್ಬರಿ 15.5 ಕೋಟಿ ರೂಗೆ ಕೋಲ್ಕತ್ತಾ ನೈಟ್ ರೈಡರ್ಸ್ ತಂಡಕ್ಕೆ ಬಿಕರಿಗೊಂಡಿದ್ದು, ಅತಿ ಹೆಚ್ಚು ಹಣಕ್ಕೆ ಸೇಲ್ ಆಗಿರುವ ವಿದೇಶಿ ಪ್ಲೇಯರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಹರಾಜು ಪ್ರಕ್ರಿಯೆಯಲ್ಲಿ ಅತಿ ಹೆಚ್ಚು ಹಣ ಪಡೆದುಕೊಂಡು ಕಮ್ಮಿನ್ಸ್ ಸೇಲ್ ಆಗುತ್ತಿದ್ದಂತೆ ನ್ಯೂಜಿಲ್ಯಾಂಡ್ನ ಮಾಜಿ ಆಟಗಾರ, ಕೆಕೆಆರ್ ತಂಡದ ಮುಖ್ಯ ಕೋಚ್ ಬ್ರೆಂಡನ್ ಮೆಕಲಂ ಟ್ವೀಟ್ ಮಾಡಿ ವಿನಂತಿ ಮಾಡಿಕೊಂಡಿದ್ದಾರೆ. ನ್ಯೂಜಿಲ್ಯಾಂಡ್ ವಿರುದ್ಧದ ಮುಂದಿನ ಟೆಸ್ಟ್ ಪಂದ್ಯಗಳಿಂದ ವಿಶ್ರಾಂತಿ ಪಡೆದುಕೊಳ್ಳಲು ಯೋಚಿಸಿ. ಐಪಿಎಲ್ ಆರಂಭಗೊಳ್ಳುವ ಹೊತ್ತಿಗೆ ನೀವೂ ಉತ್ತಮವಾಗಿ ಬೌಲಿಂಗ್ ಮಾಡಬಲ್ಲಿರಿ ಎಂದು ಟ್ವೀಟ್ ಮಾಡಿದ್ದಾರೆ. ಸದ್ಯ ನ್ಯೂಜಿಲ್ಯಾಂಡ್ ವಿರುದ್ಧ ನಡೆಯುತ್ತಿರುವ ಟೆಸ್ಟ್ ಕ್ರಿಕೆಟ್ನಲ್ಲಿ ಪ್ಯಾಟ್ ಕಮ್ಮಿನ್ಸ್ ಭಾಗಿಯಾಗಿದ್ದು, ಅತಿ ಹೆಚ್ಚು ವಿಕೆಟ್ ಸಹ ಪಡೆದುಕೊಂಡಿದ್ದಾರೆ.
-
Think you should rest the remainder of the Nz Test series to make sure you will be in peak condition for the @ipl !! 🤔😂😂😂 https://t.co/oKn8kSzpta
— Brendon McCullum (@Bazmccullum) December 19, 2019 " class="align-text-top noRightClick twitterSection" data="
">Think you should rest the remainder of the Nz Test series to make sure you will be in peak condition for the @ipl !! 🤔😂😂😂 https://t.co/oKn8kSzpta
— Brendon McCullum (@Bazmccullum) December 19, 2019Think you should rest the remainder of the Nz Test series to make sure you will be in peak condition for the @ipl !! 🤔😂😂😂 https://t.co/oKn8kSzpta
— Brendon McCullum (@Bazmccullum) December 19, 2019
ಈಗಾಗಲೇ 16 ಐಪಿಎಲ್ ಪಂದ್ಯಗಳನ್ನಾಡಿರುವ ಪ್ಯಾಟ್ ಕಮ್ಮಿನ್ಸ್ 17 ವಿಕೆಟ್ ಪಡೆದುಕೊಂಡಿದ್ದಾರೆ. ಈ ಹಿಂದೆ 2014ರಲ್ಲಿ ಕಮ್ಮಿನ್ಸ್ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಪರ ಕಣಕ್ಕಿಳಿದಿದ್ದರು.
ಇದೇ ವೇಳೆ ಕೋಲ್ಕತ್ತಾ ತಂಡದ ಕ್ಯಾಪ್ಟನ್ ಆಗಿ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ದಿನೇಶ್ ಕಾರ್ತಿಕ್ ಮುಂದುವರಿಯಲಿದ್ದಾರೆ ಎಂದು ತಂಡದ ಕೋಚ್ ಮೆಕಲಂ ತಿಳಿಸಿದ್ದಾರೆ.