ETV Bharat / bharat

ಐಪಿಎಲ್​ ರೀತಿ ಕೊರೊನಾ ಮೇಲೂ ಬೆಟ್ಟಿಂಗ್​... ಮಹಾರಾಷ್ಟ್ರದಲ್ಲಿ ಈ ದಂಧೆ ಬಲು ಜೋರು! - ಮಹಾರಾಷ್ಟ್ರ ಕೊರೊನಾ ಬೆಟ್ಟಿಂಗ್​

ಪ್ರತಿ ವರ್ಷ ನಡೆಯುವ ಇಂಡಿಯನ್​ ಪ್ರೀಮಿಯರ್​ ಲೀಗ್​ ಇದೀಗ ನಿಷೇಧಗೊಂಡಿರುವ ಕಾರಣ, ಬುಕ್ಕಿಗಳು ಕೊರೊನಾ ಮೇಲೆ ಬೆಟ್ಟಿಂಗ್​ ನಡೆಸುವ ಕೆಲಸ ಮಾಡುತ್ತಿದ್ದಾರೆ.

maharashtra
maharashtra
author img

By

Published : Jun 29, 2020, 7:50 PM IST

ಜಲಗಾಂವ್​(ಮಹಾರಾಷ್ಟ್ರ): ದೇಶಾದ್ಯಂತ ಕೊರೊನಾ ಅಬ್ಬರ ಜೋರಾಗಿದ್ದು, ಕೆಲವೊಂದು ರಾಜ್ಯಗಳಲ್ಲಿ ಇದರ ಸ್ಥಿತಿ ಹೇಳಲು ಸಾಧ್ಯವಾಗದಂತಹ ರೀತಿಯಲ್ಲಿ ವ್ಯತಿರಿಕ್ತ ಪರಿಣಾಮ ಬೀರಿದೆ.

ಆದರೆ ಇದರ ಪ್ರಯೋಜನ ಪಡೆದುಕೊಳ್ಳುತ್ತಿರುವ ಬುಕ್ಕಿಗಳು ಐಪಿಎಲ್​​ನಲ್ಲಿ ನಡೆಸುತ್ತಿದ್ದ ಬೆಟ್ಟಿಂಗ್​ ರೀತಿಯಲ್ಲಿ ಕೊರೊನಾ ಮೇಲೂ ಬೆಟ್ಟಿಂಗ್​ ದಂಧೆ ನಡೆಸುತ್ತಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ. ಪ್ರತಿ ವರ್ಷ ಮಾರ್ಚ್​ ತಿಂಗಳಿಂದ ಜೂನ್​ವರೆಗೂ ಇಂಡಿಯನ್​​ ಪ್ರೀಮಿಯರ್​ ಲೀಗ್​ ನಡೆಯುವುದರಿಂದ ಬುಕ್ಕಿಗಳು ಇದರಲ್ಲಿ ಫುಲ್​ ಬ್ಯುಸಿ ಆಗಿರುತ್ತಿದ್ದರು. ಆದರೆ ಇದೀಗ ಟೂರ್ನಿ ನಿಷೇಧಗೊಂಡಿರುವ ಕಾರಣ ಅವರಿಗೆ ಬೇರೆ ಹಾದಿ ಕಾಣದಂತಾಗಿದ್ದು, ಸದ್ಯ ಕೊರೊನಾ ಮೂಲಕ ಬೆಟ್ಟಿಂಗ್​ ನಡೆಸುತ್ತಿದ್ದಾರೆ.

ಹೇಗಿರುತ್ತದೆ ಬೆಟ್ಟಿಂಗ್​ ದಂಧೆ!?

ದೇಶದಲ್ಲಿ ಒಂದು ದಿನ ಸಿಗುವ ಒಟ್ಟು ಕೋವಿಡ್​ ಸಂಖ್ಯೆ, ರಾಜ್ಯ, ಜಿಲ್ಲೆ ಹಾಗೂ ನಗರಗಳಲ್ಲಿ ದಾಖಲಾಗುವ ಸೋಂಕಿತ ಪ್ರಕರಣ, ಸಾವು, ಹೊಸ ಕೇಸ್​ಗಳ ಮೇಲೆ ಈ ಬೆಟ್ಟಿಂಗ್​ ನಡೆಸಲಾಗುತ್ತದೆ. ಅದಕ್ಕಾಗಿ ಬುಕ್ಕಿಗಳು ಆರೋಗ್ಯ ಸೇತು ಆ್ಯಪ್​ ಸೇರಿದಂತೆ ಕೆಲವೊಂದು ಮೊಬೈಲ್​ ಅಪ್ಲಿಕೇಶನ್​ ಬಳಕೆ ಮಾಡ್ತಿದ್ದು, ಸರ್ಕಾರದ ಅಂಕಿ-ಅಂಶಗಳ ಮೇಲೆ ನಿಗಾ ಇಡುತ್ತಾರೆ.

ಸದ್ಯ ಮಹಾರಾಷ್ಟ್ರದ ಜಲಗಾಂವ್​ನಲ್ಲಿ ಇಂತಹ ಪ್ರಕರಣ ದಾಖಲಾಗಿದ್ದು, ತಾಲ್ಲೂಕು, ನಗರ ರೋಗಿಗಳ ಮೇಲೆ ಬೆಟ್ಟಿಂಗ್​ ನಡೆಸಲಾಗುತ್ತಿದೆ. ಒಂದು ದಿನಕ್ಕೆ ಇಷ್ಟು ಕೇಸ್​ ಕಂಡು ಬಂದರೆ ಇಷ್ಟು ಹಣ ನೀಡಲಾಗುವುದು ಎಂದು ಹೇಳಿ ಈ ದಂಧೆ ನಡೆಸಲಾಗುತ್ತಿದೆ ಎನ್ನಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.