ETV Bharat / bharat

ಕಾಶಿ ವಿಶ್ವನಾಥ ದೇವಾಲಯಕ್ಕೆ ಗಾಯಕ ಸೋನು ನಿಗಮ್ ಭೇಟಿ - ಸೋನು ನಿಗಮ್ ಟೆಂಪಲ್ ರನ್​​

ಉತ್ತರ ಪ್ರದೇಶದಲ್ಲಿ ಕೆಲವು ದಿನಗಳಿಂದ ದೇವಾಲಯಗಳ ಭೇಟಿ ಮಾಡುತ್ತಿರುವ ಗಾಯಕ ಸೋನು ನಿಗಮ್ ಇಂದು ವಾರಣಾಸಿಯ ಕಾಶಿ ವಿಶ್ವನಾಥ ದೇವಾಲಯಕ್ಕೆ ಭೇಟಿ ನೀಡಿದ್ದಾರೆ.

bollywood-singer-sonu-nigam-worship-in-kashi-vishwanath-temple
ಕಾಶಿ ವಿಶ್ವನಾಥ ದೇವಾಲಯಕ್ಕೆ ಗಾಯಕ ಸೋನು ನಿಗಮ್ ಭೇಟಿ
author img

By

Published : Jan 27, 2021, 4:21 PM IST

ವಾರಣಾಸಿ (ಉತ್ತರಪ್ರದೇಶ): ಖ್ಯಾತ ಹಿನ್ನೆಲೆ ಗಾಯಕ ಸೋನು ನಿಗಮ್ ಉತ್ತರ ಪ್ರದೇಶದ ಕಾಶಿ ವಿಶ್ವನಾಥ ಧಾಮಕ್ಕೆ ಭೇಟಿ ನೀಡಿ, ಶಿವಾಲಯದಲ್ಲಿ ಪೂಜೆ ಸಲ್ಲಿಸಿದ್ದಾರೆ.

ದೇವಾಲಯದಲ್ಲಿ ಬೆಳ್ಳಂಬೆಳಗ್ಗೆ ನಡೆಯುವ ಮಂಗಳಾರತಿಯಲ್ಲಿ ಪಾಲ್ಗೊಂಡಿದ್ದ ಸೋನು ನಿಗಮ್​ಗೆ ದೇವಾಲಯದ ಪರವಾಗಿ ದೇವಾಲಯದ ಮುಖ್ಯಸ್ಥ ಶ್ರೀಕಾಂತ್ ಆಚಾರ್ಯ ಅಂಗವಸ್ತ್ರ ಹೊದೆಸಿ, ಗೌರವಿಸಿದ್ದಾರೆ.

ಇದನ್ನೂ ಓದಿ: ಎದೆ ನೋವು: ಮತ್ತೆ ಆಸ್ಪತ್ರೆಗೆ ದಾಖಲಾದ ಬಿಸಿಸಿಐ ಅಧ್ಯಕ್ಷ ಗಂಗೂಲಿ

ಭಾನುವಾರದಿಂದ ಉತ್ತರ ಪ್ರದೇಶದ ದೇವಾಲಯಗಳಿಗೆ ಪ್ರವಾಸ ಕೈಗೊಂಡಿರುವ ಸೋನು ನಿಗಮ್ ಭಾನುವಾರ ಅಯೋಧ್ಯೆಯ ಹನುಮಾನ್​ ಗರ್ಹಿ ದೇವಾಲಯಕ್ಕೆ ಭೇಟಿ ನೀಡಿದ್ದರು.

ಇದಾದ ನಂತರ ಸೋಮವಾರ ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಅವರನ್ನು ಭೇಟಿಯಾಗಿ ರಾಮ ಮಂದಿರ ನಿರ್ಮಾಣಕ್ಕೆ ಇಟ್ಟಿಗೆ ನೀಡುವುದಾಗಿ ಭರವಸೆ ನೀಡಿದ್ದಾರೆ.

ಮಂಗಳವಾರ ವಾರಣಾಸಿಯ ಗಂಗಾ ಘಾಟ್​ಗೆ ಭೇಟಿ ನೀಡಿದ್ದ ಅವರು, ಗಂಗಾ ಆರತಿಯಲ್ಲಿ ಪಾಲ್ಕೊಂಡಿದ್ದರು. ಈ ವೇಳೆ ಹಲವು ಅಭಿಮಾನಿಗಳು ಸೋನು ನಿಗಮ್ ಜೊತೆಗೆ ಸೆಲ್ಫಿಗೆ ಮುಗಿಬಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.