ಪುಣೆ (ಮಹಾರಾಷ್ಟ್ರ): ಲಡಾಖ್‌ನ ಲೇಹ್‌ನಲ್ಲಿ ರಸ್ತೆ ಮತ್ತು ಸೇತುವೆ ನಿರ್ಮಾಣದ ಸಂದರ್ಭದಲ್ಲಿ ಜೂನ್ 24ರಂದು ಪ್ರಾಣ ಕಳೆದುಕೊಂಡ ನಾಯಕ್ ಡಿಎಸ್‌ವಿ ಸಚಿನ್ ಮೋರ್ ಅವರ ಮೃತದೇಹ ಪುಣೆಗೆ ಆಗಮಿಸಿದ್ದು, ಸೇನಾಧಿಕಾರಿಗಳು ಗೌರವ ಸಲ್ಲಿಸಿದರು.
ದಕ್ಷಿಣ ಮಹಾರಾಷ್ಟ್ರ ಮತ್ತು ಗೋವಾ ಉಪ ಪ್ರದೇಶದ ಸಿಬ್ಬಂದಿ ವಿಮಾನ ನಿಲ್ದಾಣದಲ್ಲಿ ಪೂರ್ಣ ಮಿಲಿಟರಿ ಗೌರವದೊಂದಿಗೆ ಮೃತದೇಹವನ್ನು ಪಡೆದರು ಎಂದು ದಕ್ಷಿಣ ಕಮಾಂಡ್ ರಕ್ಷಣಾ ಪ್ರಕಟಣೆ ತಿಳಿಸಿದೆ.
"ಮಹಾರಾಷ್ಟ್ರದ ಧೈರ್ಯಶಾಲಿ ಮಗನಾಗಿದ್ದ ಸಚಿನ್ ಮೋರ್ ಲೇಹ್‌ನಲ್ಲಿ ರಸ್ತೆ ಮತ್ತು ಸೇತುವೆಯ ನಿರ್ಮಾಣದ ಸಮಯದಲ್ಲಿ ಹವಾಮಾನ ವೈಪರೀತ್ಯ ಉಂಟಾಗಿ ರಾಷ್ಟ್ರದ ಸೇವೆಯಲ್ಲಿ ತನ್ನ ಜೀವನದ ಸರ್ವೋಚ್ಚ ತ್ಯಾಗ ಮಾಡಿದ್ದಾರೆ" ಎಂದು ಪ್ರಕಟಣೆ ಹೇಳಿದೆ.