ಮಿಡ್ನಾಪುರ್(ಪಶ್ಚಿಮ ಬಂಗಾಳ): ದೀದಿ ನಾಡಲ್ಲಿ ದೊಡ್ಡ ಬೋಟ್ ದುರಂತವೊಂದು ಸಂಭವಿಸಿದ್ದು 20ಕ್ಕೂ ಅಧಿಕ ಮಂದಿ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ.
ಪಶ್ಚಿಮ ಬಂಗಾಳದ ಪೂರ್ವ ಮಿಡ್ನಾಪುರ್ ಜಿಲ್ಲೆಯ ರೂಪ್ನಾರಾಯಣ್ ನದಿಯಲ್ಲಿ ಬೋಟ್ ದುರಂತ ಸಂಭವಿಸಿದ್ದು, ಅಧಿಕ ಮಂದಿಯ ಪ್ರಯಾಣವೇ ದುರಂತಕ್ಕೆ ಕಾರಣ ಎಂದು ತಿಳಿದು ಬಂದಿದೆ.
ಬೋಟ್ನಲ್ಲಿ 30 ಮಂದಿ ಪ್ರಯಾಣಿಸುತ್ತಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದು, ಹಲವರು ನೀರಿಗೆ ಹಾರಿ ಪ್ರಾಣ ಉಳಿಸಿಕೊಳ್ಳುವ ಪ್ರಯತ್ನ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಘಟನೆಯಲ್ಲಿ ಆರು ಮಂದಿಯನ್ನು ರಕ್ಷಣೆ ಮಾಡಲಾಗಿದ್ದು, ಅವರೆಲ್ಲರ ಪರಿಸ್ಥಿತಿ ಗಂಭೀರವಾಗಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ. ಸ್ಥಳೀಯರ ಮೂಲಕ ರಕ್ಷಣಾಕಾರ್ಯ ನಡೆಸಲಾಗುತ್ತಿದೆ. ಬೋಟ್ನಲ್ಲಿ ನಾಲ್ಕು ಮಕ್ಕಳು ಪ್ರಯಾಣಿಸುತ್ತಿದ್ದರು ಎನ್ನಲಾಗಿದ್ದು, ಓರ್ವನನ್ನು ರಕ್ಷಿಸಲಾಗಿದೆ.