ಪ್ರಯಾಗರಾಜ್: ಬಿಜೆಪಿ ಮುಖಂಡೆ ರೀಟಾ ಬಹುಗುಣ ಜೋಶಿ ಅವರ ಎಂಟು ವರ್ಷದ ಮೊಮ್ಮಮಗಳು ಪಟಾಕಿ ಸಿಡಿಸುವಾಗ ಆಕಸ್ಮಿಕವಾಗಿ ಬೆಂಕಿ ತಗುಲಿ ಸಾವನ್ನಪ್ಪಿದ್ದಾಳೆ.
ನಿನ್ನೆ ರಾತ್ರಿ , ತಮ್ಮ ಮನೆಯ ಟೆರೇಸ್ನಲ್ಲಿ ಇತರ ಮಕ್ಕಳೊಂದಿಗೆ ಆಟವಾಡಲು ಹೋಗಿದ್ದಾಗ ಪಟಾಕಿ ಸಿಡಿಸಿದ್ದರಿಂದ ಆಕೆಯ ಧರಿಸಿದ್ದ ಬಟ್ಟೆಗೆ ಬೆಂಕಿ ತಗುಲಿ ಈ ಅನಾಹುತ ಸಂಭವಿಸಿದೆ.
ಪಟಾಕಿ ಶಬ್ದ ಜೋರಾಗಿದ್ದರಿಂದ ಬಾಲಕಿ ಕಿರುಚಿಕೊಂಡರೂ ಯಾರಿಗು ಕೇಳಿಲ್ಲ. ಇದರಿಂದ ಬಾಲಕಿ ದೇಹ ಸಂಪೂರ್ಣವಾಗಿ ಸುಟ್ಟು ಕರಕಲಾಗಿತ್ತು. ಕೆಲ ಸಮಯದ ನಂತರ ಮನೆಯವರು ಸುಟ್ಟ ಸ್ಥಿತಿಯಲ್ಲಿ ದೇಹ ನೋಡಿದ್ದು, ತಕ್ಷಣ ಆಕೆಯನ್ನು ಖಾಸಗಿ ಆಸ್ಪತ್ರೆಗೆ ಸಾಗಿಸಿದರು. ಆ, ಚಿಕಿತ್ಸೆ ಫಲಿಸದೆ ಬಾಲಕಿ ಮೃತಪಟ್ಟಿದ್ದಾಳೆ. ಬೆಳಕಿನ ಹಬ್ಬ ದೀಪಾವಳಿ ಬಹುಗುಣ ಕುಟುಂಬಕ್ಕೆ ಕತ್ತಲೆ ಮೂಡಿಸಿದೆ.