ಹಿಸಾರ್ (ಹರಿಯಾಣ): ಬಿಜೆಪಿ ನಾಯಕಿ ಸೋನಾಲಿ ಫೋಗಾಟ್ ಅವರು ಬಾಲ್ಸಮಂಡ್ ಮಾರುಕಟ್ಟೆ ಸಮಿತಿ ಕಾರ್ಯದರ್ಶಿಯನ್ನ ಚಪ್ಪಲಿಯಿಂದ ಥಳಿಸಿರುವ ವಿಡಿಯೋ ವೈರಲ್ ಆಗಿದೆ.
ಟಿಕ್ಟಾಕ್ ಸ್ಟಾರ್ ಆಗಿದ್ದ ಸೋನಾಲಿ ಫೋಗಾಟ್ ರಾಜಕಾರಣಕ್ಕೆ ಎಂಟ್ರಿ ಕೊಟ್ಟಿದ್ದು, ಮಾರುಕಟ್ಟೆ ಸಮಿತಿ ಕಾರ್ಯದರ್ಶಿ ಸುಲ್ತಾನ್ ಸಿಂಗ್ ಎಂಬುವವರನ್ನು ಚಪ್ಪಲಿಯಿಂದ ಥಳಿಸಿದ್ದಾರೆ.
'ನಿಮ್ಮಂತಹ ಜನರಿಂದ ನಿಂದನೆಗಳನ್ನು ಕೇಳಲು ನಾನು ಕೆಲಸ ಮಾಡುತ್ತಿದ್ದೇನೆ? ಉತ್ತಮ ಜೀವನ ನಡೆಸಲು ನನಗೆ ಹಕ್ಕಿಲ್ಲವೆ. ನಿಮಗೆ ಬದುಕುವ ಹಕ್ಕಿಲ್ಲ' ಎಂದು ಸೋನಾಲಿ ಫೋಗಾಟ್ ಅಧಿಕಾರಿಯನ್ನು ನಿಂದಿಸಿರುವುದು ವಿಡಿಯೋದಲ್ಲಿ ರೆಕಾರ್ಡ್ ಆಗಿದೆ.
ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ನಂತರ ಈ ವಿಷಯ ಸಿಎಂ ನಿವಾಸ ತಲುಪಿದ್ದು, ವರದಿಗಳ ಪ್ರಕಾರ ಸಿಐಡಿ ಅಧಿಕಾರಿಗಳು ಘಟನೆ ಕುರಿತು ತನಿಖೆ ಕೈಗೊಂಡಿದ್ದಾರೆ.
ಟಿಕ್ಟಾಕ್ ಸ್ಟಾರ್ ಆಗಿದ್ದ ಸೋನಾಲಿ ಫೋಗಾಟ್ ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಟಿಕೆಟ್ ಪಡೆದಿದ್ದರು. ಆದಮ್ಪುರದಿಂದ ಕಣಕ್ಕಿಳಿದಿದ್ದ ಫೋಗಾಟ್ ಸೋಲು ಅನುಭವಿಸಿದ್ದರು.