ETV Bharat / bharat

ಬಿಜೆಪಿ ನಾಯಕನಿಗೆ ಗುಂಡಿಟ್ಟು ಹತ್ಯೆ: ಅಟ್ಟಹಾಸ ಮೆರೆದ ಉಗ್ರರು

ಕಣಿವೆ ರಾಜ್ಯದಲ್ಲಿ ಬಿಜೆಪಿ ನಾಯಕನ ಹತ್ಯೆಗೈದ ಉಗ್ರರು. ಎದೆಗೆ ಗುಂಡಿಟ್ಟು ಕೊಲೆ. ದಕ್ಷಿಣ ಕಾಶ್ಮೀರದ ಅನಂತ್ನಾಗ್ ಜಿಲ್ಲೆಯಲ್ಲಿ ಘಟನೆ.

ಬಿಜೆಪಿ ನಾಯಕನಿಗೆ ಗುಂಡಿಟ್ಟು ಹತ್ಯೆ
author img

By

Published : May 5, 2019, 2:14 AM IST

ಶ್ರೀನಗರ: ಕಣಿವೆ ರಾಜ್ಯ ಜಮ್ಮು ಕಾಶ್ಮೀರದಲ್ಲಿ ಉಗ್ರರು ಮತ್ತೆ ಅಟ್ಟಹಾಸ ಮೆರೆದಿದ್ದಾರೆ. ಬಿಜೆಪಿ ನಾಯಕ ಗುಲ್ ಮೊಹಮ್ಮದ್ ಮಿರ್ (60) ಎಂಬುವವರಿಗೆ ಗುಂಡಿಟ್ಟು ಹತ್ಯೆಗೈದ ಘಟನೆ ಅನಂತ್​ನಾಗ್ ಜಿಲ್ಲೆಯ ನೌಗಮ್ ಗ್ರಾಮದಲ್ಲಿ ಶನಿವಾರ ಸಂಜೆ ನಡೆದಿದೆ.

ಗುಂಡು ಎದೆಗೆ ತಾಗಿದ ಪರಿಣಾಮ ತೀವ್ರವಾಗಿ ಗಾಯಗೊಂಡಿದ್ದ ಮಿರ್ ಅವರನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಿಜೆಪಿ ನಾಯಕನಿಗೆ ಗುಂಡಿಟ್ಟು ಹತ್ಯೆ

ಮಾಜಿ ಸಿಎಂ ಓಮರ್ ಅಬ್ದುಲ್ಲಾ ಅವರು ಘಟನೆಯನ್ನು ತೀವ್ರವಾಗಿ ಖಂಡಿಸಿದ್ದಾರೆ. ಮಿರ್ ಅವರು ದಕ್ಷಿಣ ಕಾಶ್ಮೀರದ ಬಿಜೆಪಿ ನಾಯಕ ಹಾಗೂ ಅನಂತ್​ನಾಗ್ ಜಿಲ್ಲೆಯ ಬಿಜೆಪಿ ಉಪಾಧ್ಯಕ್ಷ ಎನ್ನಲಾಗಿದೆ. ಮಿರ್ ಅವರು 2008 ಮತ್ತು 2014ರಲ್ಲಿ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿ ಸೋತಿದ್ದರು ಎಂದು ತಿಳಿದುಬಂದಿದೆ.

Intro:Body:

ಬಿಜೆಪಿ ನಾಯಕನಿಗೆ ಗುಂಡಿಟ್ಟು ಹತ್ಯೆ: ಅಟ್ಟಹಾಸ ಮೆರೆದ ಉಗ್ರರು  

ಶ್ರೀನಗರ: ಕಣಿವೆ ರಾಜ್ಯ ಜಮ್ಮು ಕಾಶ್ಮೀರದಲ್ಲಿ ಉಗ್ರರು ಮತ್ತೆ ಅಟ್ಟಹಾಸ ಮೆರೆದಿದ್ದಾರೆ. ಬಿಜೆಪಿ ನಾಯಕ ಗುಲ್ ಮೊಹಮ್ಮದ್ ಮಿರ್ (60) ಎಂಬುವವರಿಗೆ ಗುಂಡಿಟ್ಟು ಹತ್ಯೆಗೈದ ಘಟನೆ ಅನಂತ್​ನಾಗ್ ಜಿಲ್ಲೆಯ ನೌಗಮ್ ಗ್ರಾಮದಲ್ಲಿ ಶನಿವಾರ ಸಂಜೆ ನಡೆದಿದೆ. 

ಗುಂಡು ಎದೆಗೆ ತಾಗಿದ ಪರಿಣಾಮ ತೀವ್ರವಾಗಿ ಗಾಯಗೊಂಡಿದ್ದ ಮಿರ್ ಅವರನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. 

ಮಾಜಿ ಸಿಎಂ ಓಮರ್ ಅಬ್ದುಲ್ಲಾ ಅವರು ಘಟನೆಯನ್ನು ತೀವ್ರವಾಗಿ ಖಂಡಿಸಿದ್ದಾರೆ. ಮಿರ್ ಅವರು ದಕ್ಷಿಣ ಕಾಶ್ಮೀರದ ಬಿಜೆಪಿ ನಾಯಕ ಎನ್ನಲಾಗಿದೆ. 

ಮಿರ್ ಅವರು 2008 ಮತ್ತು 2014ರಲ್ಲಿ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿ ಸೋತಿದ್ದರು ಎಂದು ತಿಳಿದುಬಂದಿದೆ. 

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.