ನವದೆಹಲಿ: ಲೋಕಸಭಾ ಚುನಾವಣೆ ಫಲಿತಾಂಶದ ಸದ್ಯದ ಟ್ರೆಂಡ್ ನೋಡೋದಾದ್ರೆ ಎನ್ಡಿಎ ಮೈತ್ರಿ ಕೂಟ ಮ್ಯಾಜಿಕ್ ನಂಬರ್ ದಾಟಿಕೊಂಡು ಮುನ್ನುಗ್ಗುತ್ತಿದೆ.
-
Official EC trends: BJP leading on 295 seats, Congress leading on 51 seats #ElectionResults2019 pic.twitter.com/58gs760qnk
— ANI (@ANI) May 23, 2019 " class="align-text-top noRightClick twitterSection" data="
">Official EC trends: BJP leading on 295 seats, Congress leading on 51 seats #ElectionResults2019 pic.twitter.com/58gs760qnk
— ANI (@ANI) May 23, 2019Official EC trends: BJP leading on 295 seats, Congress leading on 51 seats #ElectionResults2019 pic.twitter.com/58gs760qnk
— ANI (@ANI) May 23, 2019
ಪ್ರಮುಖವಾಗಿ ಕಾಂಗ್ರೆಸ್ ಪಕ್ಷಗಳು ಆಡಳಿತ ನಡೆಸುತ್ತಿರುವ ರಾಜ್ಯಗಳಲ್ಲಿ ಬಿಜೆಪಿ ಭಾರೀ ಮುನ್ನಡೆ ಸಾಧಿಸಿದೆ. ಮಧ್ಯಪ್ರದೇಶದ 29 ಲೋಕಸಭಾ ಕ್ಷೇತ್ರಗಳ ಪೈಕಿ 28 ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದೆ.
ಇತ್ತ ರಾಜಸ್ಥಾನದಲ್ಲೂ ಬಿಜೆಪಿ ಮೇಲುಗೈ ಸಾಧಿಸಿದ್ದು 25 ಕ್ಕೆ 25 ಕ್ಷೇತ್ರಗಳಲ್ಲೂ ಮುನ್ನಡೆ ಸಾಧಿಸಿದೆ. ಛತ್ತಿಸ್ಗಢದ 11 ಕ್ಷೇತ್ರಗಳ ಪೈಕಿ 9 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಜಾರ್ಖಂಡ್ನಲ್ಲೂ ಬಿಜೆಪಿ ಪಾರುಪತ್ಯ ಸಾಧಿಸಿದ್ದು, 14 ಕ್ಷೇತ್ರಗಳ ಪೈಕಿ 11 ರಲ್ಲಿ ಮುನ್ನಡೆ ಕಾಯ್ದುಕೊಂಡಿದೆ.
-
Chhattisgarh: BJP leading on 9 seats, Congress leading on 2 seats; total seats 11
— ANI (@ANI) May 23, 2019 " class="align-text-top noRightClick twitterSection" data="
">Chhattisgarh: BJP leading on 9 seats, Congress leading on 2 seats; total seats 11
— ANI (@ANI) May 23, 2019Chhattisgarh: BJP leading on 9 seats, Congress leading on 2 seats; total seats 11
— ANI (@ANI) May 23, 2019
ಸದ್ಯದ ಲೆಕ್ಕಾಚಾರ ನೋಡೋದಾದ್ರೆ ಕಾಂಗ್ರೆಸ್ ಪಕ್ಷಕ್ಕ ಭಾರೀ ಹಿನ್ನಡೆ ಉಂಟಾಗಿದ್ದು, ಹಲವು ರಾಜ್ಯಗಳಲ್ಲಿ ಕಮಲ ಅರಳುವ ಸಾಧ್ಯತೆ ದಟ್ಟವಾಗಿದೆ.
ಇನ್ನು ಕಾಂಗ್ರೆಸೇತರ ರಾಜ್ಯಗಳನ್ನು ಗಮನಿಸಿದ್ರೆ ಗುಜರಾತ್ನಲ್ಲಿ 26ಕ್ಕೆ 26 ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ ಕಾಯ್ದುಕೊಂಡಿದೆ. ಉತ್ತರಪ್ರದೇಶದಲ್ಲೂ ಹಿಂದಿನ ಸಾಧನೆ ತೋರದಿದ್ದರು 50ಕ್ಕೂ ಹೆಚ್ಚು ಸ್ಥಾನಗಳನ್ನ ಪಡೆದು ಮುನ್ನಡೆ ಕಾಯ್ದುಕೊಂಡಿದೆ. ಈ ಸ್ಥಾನಗಳನ್ನ ಅದು ಪಶ್ಚಿಮಬಂಗಾಳದಲ್ಲಿ ತುಂಬಿಕೊಳ್ಳುವತ್ತ ಸಾಗುತ್ತಿದೆ.
ಆದರೆ ಒಡಿಶಾದಲ್ಲಿ ಬಿಜೆಪಿ ಅಂದುಕೊಂಡಷ್ಟು ಸ್ಥಾನಗಳು ಬಂದಿಲ್ಲ. ಇಲ್ಲಿ ಈ ಭಾರಿಯೂ ಬಿಜೆಡಿ ಮುನ್ನಡೆ ಪಡೆದುಕೊಂಡಿದೆ. ಕೇಸರಿ ಪಕ್ಷ ಕೇವಲ 5 ಮತ್ತೊಂದು ಸ್ಥಾನಗಳಲ್ಲಿ ಮುನ್ನಡೆ ಪಡೆದಿದೆ.
ದೆಹಲಿ ಹಾಗೂ ಉತ್ತರಾಖಂಡದ 7 ಹಾಗೂ 5 ಸ್ಥಾನಗಳಲ್ಲಿ ಮುನ್ನಡೆ ಪಡೆದಿದೆ. ಅಂದರೆ ಇಲ್ಲೂ ಕ್ಲೀನ್ ಸ್ವೀಪ್ ಮಾಡುವತ್ತ ಮುನ್ನುಗ್ಗುತ್ತಿದೆ.
ಪಂಚ ರಾಜ್ಯಗಳ ಚುನಾವಣೆ ವೇಳೆ, ಭಾರಿ ಮುಖಭಂಗ ಅನುಭವಿಸಿತ್ತು. ಆ ಸೋಲಿನ ಸೇಡನ್ನು ಈ ಚುನಾವಣೆಯಲ್ಲಿ ತೀರಿಸಿಕೊಳ್ಳುವ ತವಕದಲ್ಲಿ ಕೇಸರಿ ಪಡೆ ಇದೆ.