ETV Bharat / bharat

ಉತ್ತರಾಖಂಡ್​​ದಲ್ಲಿ ಬಿಜೆಪಿ ಕೌನ್ಸಿಲರ್​​ ಗುಂಡಿಕ್ಕಿ ಹತ್ಯೆ - ಬಿಜೆಪಿ ಕೌನ್ಸಿಲರ್​ ಪ್ರಕಾಶ್​ ಸಿಂಗ್​ ಧಾಮಿಯಾ ಹತ್ಯೆ

ಉತ್ತರಾಖಂಡ್​ನಲ್ಲಿ ದುಷ್ಕರ್ಮಿಗಳ ಗುಂಪೊಂದು ಬಿಜೆಪಿ ಕೌನ್ಸಿಲರ್​ ಮೇಲೆ ಗುಂಡಿನ ದಾಳಿ ನಡೆಸಿ ಪರಾರಿಯಾಗಿರುವ ಘಟನೆ ನಡೆದಿದೆ.

BJP councillor shot dead in Uttarakhand
BJP councillor shot dead in Uttarakhand
author img

By

Published : Oct 12, 2020, 4:59 PM IST

ಡೆಹ್ರಾಡೂನ್​​( ಉತ್ತರಾಖಂಡ): ಭಾರತೀಯ ಜನತಾ ಪಕ್ಷದ ಕೌನ್ಸಿಲರ್​ ಒಬ್ಬರಿಗೆ ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ಉತ್ತರಾಖಂಡ್​ದಲ್ಲಿ ನಡೆದಿದ್ದು, ಪೊಲೀಸರಿಂದ ತನಿಖೆ ಮುಂದುವರೆದಿದೆ.

ರುದ್ರಪೂರ್​ ಮುನ್ಸಿಪಾಲ್​ ಕಾರ್ಪೂರೇಷನ್​ನ ಭಾದೈಪುರ ವಾರ್ಡ್​​ನ ಕೌನ್ಸಿಲರ್​ ಆಗಿದ್ದ ಪ್ರಕಾಶ್​ ಸಿಂಗ್​ ಧಾಮಿಯಾ ಮೇಲೆ ಅಪರಿಚಿತ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿ ಹತ್ಯೆ ಮಾಡಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ರುದ್ರಪೂರ್​ ಮುನ್ಸಿಪಾಲ್​ ಕಾರ್ಪೂರೇಷನ್​ನಲ್ಲಿ ಅವರು ಕೌನ್ಸಿಲರ್​​​ ಆಗಿ ಸೇವೆ ಸಲ್ಲಿಸುತ್ತಿದ್ದರು. ಇಂದು ಬೆಳಗ್ಗೆ ಮನೆಯಿಂದ ಹೊರಬಂದ ವೇಳೆ ಅಲ್ಲಿಗೆ ತೆರಳಿರುವ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿ ಪರಾರಿಯಾಗಿದ್ದಾರೆ. ತಕ್ಷಣವೇ ಅವರನ್ನ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಪ್ರಕರಣ ದಾಖಲು ಮಾಡಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದು, ಇದರಲ್ಲಿ ರಾಜಕೀಯ ವ್ಯಕ್ತಿಗಳ ಹುನ್ನಾರ ಇರಬಹುದು ಎಂದು ಹೇಳಲಾಗುತ್ತಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.