ETV Bharat / bharat

ಮುಂಬೈ, ಮಧ್ಯಪ್ರದೇಶದ ಕೋಳಿ ಅಭಿವೃದ್ಧಿ ಸಂಸ್ಥೆಯಲ್ಲಿ ಹಕ್ಕಿ ಜ್ವರ ಭೀತಿ - Bird flu in Maharastra

ಮಧ್ಯಪ್ರದೇಶದ ಮಾಂಡ್ಸೌರ್ ಜಿಲ್ಲೆಯ ಖೇಡಾ ಮತ್ತು ಮುಂಬೈನ ಕೇಂದ್ರ ಕೋಳಿ ಅಭಿವೃದ್ಧಿ ಸಂಸ್ಥೆಯಲ್ಲಿರುವ ಕೋಳಿ ಮಾಂಸದಲ್ಲಿ ಏವಿಯನ್ ಇನ್ಫ್ಲುಯೆನ್ಸ್​ ವೈರಸ್​ ಕಾಣಿಸಿಕೊಂಡಿದೆ.

mumbai
ಕೋಳಿ ಅಭಿವೃದ್ಧಿ ಸಂಸ್ಥೆಯಲ್ಲಿ ಹಕ್ಕಿ ಜ್ವರ
author img

By

Published : Jan 18, 2021, 7:09 AM IST

ಮುಂಬೈ(ಮಹಾರಾಷ್ಟ್ರ): ಮುಂಬೈ ಮತ್ತು ಮಧ್ಯಪ್ರದೇಶದಲ್ಲಿ ಹಕ್ಕಿ ಜ್ವರ ಪ್ರಕರಣಗಳು ದಿನೇ ದಿನೆ ಏರಿಕೆ ಕಾಣುತ್ತಿದೆ. ಇದೀಗ ಮಧ್ಯಪ್ರದೇಶದ ಮಾಂಡ್ಸೌರ್ ಜಿಲ್ಲೆಯ ಖೇಡಾ ಮತ್ತು ಮುಂಬೈನ ಕೇಂದ್ರ ಕೋಳಿ ಅಭಿವೃದ್ಧಿ ಸಂಸ್ಥೆಯಲ್ಲಿರುವ ಕೋಳಿ ಮಾಂಸದಲ್ಲಿ ಏವಿಯನ್ ಇನ್ಫ್ಲುಯೆನ್ಸ್​ ವೈರಸ್​ ಕಾಣಿಸಿಕೊಂಡಿದೆ ಎಂದು ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವಾಲಯ ತಿಳಿಸಿದೆ.

"ಮಹಾರಾಷ್ಟ್ರದಲ್ಲಿ ಸಿಆರ್​ಡಿಒ, ಮುಂಬೈ ಸೇರಿದಂತೆ ಎಲ್ಲಾ ಪೀಡಿತ ಕೇಂದ್ರಗಳಲ್ಲಿನ ಕೋಳಿಗಳನ್ನು ಕೊಲ್ಲಲಾಗುತ್ತಿದೆ ಎಂದು ಇಲಾಖೆ ಹೇಳಿದೆ. ಇನ್ನು ಹರಿಯಾಣದಲ್ಲಿಯೂ ಸೋಂಕು ತಗುಲಿದ ಪಕ್ಷಿಗಳನ್ನು ಕೊಲ್ಲಲಾಗುತ್ತಿದೆ.

ಇನ್ನು ಠಾಕ್ರೆ ಸರ್ಕಾರವು ಹಕ್ಕಿ ಜ್ವರ ಸಂಬಂಧ ಪರಿಷ್ಕೃತ ಏವಿಯನ್ ಇನ್ಫ್ಲುಯೆನ್ಸ್​ ಕ್ರಿಯಾ ಯೋಜನೆ 2021ಕ್ಕೆ ಅನುಗುಣವಾಗಿ ಅಗತ್ಯ ಮಾಹಿತಿಯನ್ನು ಕಲೆ ಹಾಕಿದೆ. ಮಾಹಿತಿ ಅನುಸಾರ ರೋಗದ ಹರಡುವಿಕೆಯನ್ನು ಪರೀಕ್ಷಿಸಲು 'ಸೋಂಕಿತ ಪ್ರದೇಶ' ಇತ್ಯಾದಿಗಳಿಗೆ ಸಂಬಂಧಿಸಿದ ಅಧಿಸೂಚನೆಗಳನ್ನು ಈಗಾಗಲೇ ರಾಜ್ಯವು ನೀಡಿದೆ ಎಂದು ಸಚಿವಾಲಯ ಹೇಳಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.