ಅಲಿಪುರ್ದಾರ್(ಪಶ್ಚಿಮಬಂಗಾಳ): ಗಾಲ್ವಾನ್ ಕಣಿವೆಯಲ್ಲಿ ಸೋಮವಾರ ನಡೆದ ಭಾರತ ಹಾಗೂ ಚೀನಾ ನಡುವಿನ ಘರ್ಷಣೆಯಲ್ಲಿ ಪಶ್ಚಿಮ ಬಂಗಾಳದ ಓರ್ವ ಯೋಧ ಹುತಾತ್ಮನಾಗಿದ್ದಾರೆ.
ಅಲಿಪುರ್ದಾರ್‌ನ ಬಿಂದಿಪಾರ ಮೂಲದ ವೀರ ಯೋಧ ಬಿಪುಲ್ ರಾಯ್ (35) ಸಂಘರ್ಷದಲ್ಲಿ ಹುತಾತ್ಮರಾಗಿದ್ದಾರೆ. ಯೋಧನ ಸಾವಿಗೆ ಕುಟುಂಬ ಹಾಗೂ ದೇಶ ಕಂಬನಿ ಮಿಡಿದಿದೆ. ಇನ್ನೊಂದೆಡೆ ಮಗನನ್ನು ಕಳೆದುಕೊಂಡರೂ ಯೋಧನ ತಂದೆ, ದೇಶಕ್ಕಾಗಿ ಪ್ರಾಣವನ್ನು ಸಮರ್ಪಿಸಿದ ತಮ್ಮ ಮಗನ ಬಗ್ಗೆ ಹೆಮ್ಮೆಪಟ್ಟಿದ್ದಾರೆ.