ರಾಂಚಿ (ಜಾರ್ಖಂಡ್): ರಾಜ್ಯದಲ್ಲಿ ಭಾರೀ ಮಳೆಯಿಂದ ನದಿಗಳು ತುಂಬಿ ಹರಿಯುತ್ತಿದ್ದು, ಹಲವು ಕಡೆಗಳಲ್ಲಿ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ.
ರಾಂಚಿ ನಗರದ ಸದರ್ ಪೊಲೀಸ್ ಠಾಣೆ ವ್ಯಾಪ್ತಿಯ ಕೋಕರ್ ಖೋರ್ಹಾ ಟೋಲಿಯಲ್ಲಿ ಯುವಕನೊಬ್ಬ ಬೈಕ್ನೊಂದಿಗೆ ನೀರಿನಲ್ಲಿ ಕೊಚ್ಚಿ ಹೋಗಿದ್ದಾನೆ. ಎನ್ಡಿಆರ್ಎಫ್ ತಂಡ ಶೋಧ ಕಾರ್ಯ ನಡೆಸುತ್ತಿದ್ದು, ಯುವಕ ನಾಪತ್ತೆಯಾಗಿ 24 ಗಂಟೆಯಾದರೂ ಯಾವುದೇ ಸುಳಿವು ಸಿಕ್ಕಿಲ್ಲ.
ಇದೇ ರೀತಿಯ ಮತ್ತೊಂದು ಘಟನೆ ನಗರದ ಹಿಂದ್ಪಿರಿ ಪೊಲೀಸ್ ಠಾಣೆ ವ್ಯಾಪ್ತಿಯ ಕದ್ರು ಸೇತುವೆ ಬಳಿ ನಡೆದಿದೆ. ರಭಸದಿಂದ ಹರಿಯುತ್ತಿದ್ದ ನೀರಿನ ನಡುವೆ ರಸ್ತೆ ದಾಟಲು ಪ್ರಯತ್ನಿಸಿದ ಇಬ್ಬರು ಯುವಕರು ನೀರಿನ ಸೆಳೆತಕ್ಕೆ ಕೊಚ್ಚಿ ಹೋಗಿದ್ದಾರೆ. ಅದೃಷ್ಟವಶಾತ್ ಸ್ಥಳೀಯರ ಸಹಾಯದಿಂದ ಇಬ್ಬರನ್ನೂ ರಕ್ಷಿಸಲಾಗಿದೆ.