ಸುಪಾಲ್ (ಬಿಹಾರ): ಅಪ್ಪನಿಗಾಗಿ ಕಾಯುತ್ತ ನಿಂತಿದ್ದ ಅಪ್ರಾಪ್ತ ವಿದ್ಯಾರ್ಥಿನಿಯನ್ನು ಶಿಕ್ಷಕನೇ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಅತ್ಯಾಚಾರ ಎಸಗಿರುವ ಘಟನೆ ಬಿಹಾರ್ನ ಸುಪಾಲ್ನಲ್ಲಿ ನಡೆದಿದೆ.
ಗುರುವಾರ ರಾತ್ರಿ ಸುಮಾರು 9 ಗಂಟೆಯ ವೇಳೆ ಬಾಲಕಿಯು ತನ್ನ ಮನೆಯ ಬಳಿ ತಂದೆಗಾಗಿ ಕಾಯುತ್ತಿರುವಾಗ, ತನ್ನ ಸ್ನೇಹಿತರೊಂದಿಗೆ ಬೈಕ್‌ನಲ್ಲಿ ಬಂದ ಶಿಕ್ಷಕ ಸಂಬು, ಬಲವಂತವಾಗಿ ಆಕೆಯನ್ನು ಎಳೆದೊಯ್ದಿದ್ದಾರೆ. ಅಲ್ಲಿಂದ ಶಿಕ್ಷಕನು, ಹಳೆಯ ಕಟ್ಟಡವೊಂದಕ್ಕೆ ವಿದ್ಯಾರ್ಥಿನಿಯನ್ನು ಕರೆದೊಯ್ದು ಕೃತ್ಯ ಎಸಗಿದ್ದಾನೆ. ಆಕೆ ತಪ್ಪಿಸಿಕೊಳ್ಳಲು ಪ್ರಯತ್ನಿಸಿದಾಗ ಆಕೆಗೆ ಹೊಡೆದು ಮುಖವನ್ನು ಗಾಯಗೊಳಿಸಿದ್ದಾನೆ. ಅಲ್ಲದೇ ಈ ವಿಚಾರವನ್ನು ಹೊರಗಡೆ ಬಾಯ್ಬಿಟ್ಟರೆ ಆಕೆಯ ಕುಟುಂಬದ ಸದಸ್ಯರನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ಶುಕ್ರವಾರ ನೀಡಿದ ದೂರಿನಲ್ಲಿ ಸಂತ್ರಸ್ತೆ ತಿಳಿಸಿದ್ದಾಳೆ ಎಂದು ಪೊಲೀಸರು ಹೇಳಿದ್ದಾರೆ.
ನಾವು ಸಂತ್ರಸ್ತೆಯ ಹೇಳಿಕೆಯನ್ನು ರೆಕಾರ್ಡ್ ಮಾಡಿಕೊಂಡಿದ್ದು, ತನಿಖೆ ಪ್ರಾರಂಭಿಸಿದ್ದೇವೆ, ಆರೋಪಿಗಳಿಗೆ ಶಿಕ್ಷೆಯಾಗುತ್ತದೆ. ಇನ್ನು ಸಂತ್ರಸ್ತ ಬಾಲಕಿಯನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಎಸ್ಎಸ್ಪಿ ರಮಾನಂದ್ ಕುಮಾರ್ ಕೌಸಲ್ ತಿಳಿಸಿದ್ದಾರೆ.