ಪಾಟ್ನಾ: ಬಿಹಾರದ ಒಂಭತ್ತು ಜಿಲ್ಲೆಗಳಲ್ಲಿ ಭಾನುವಾರ ಗುಡುಗು - ಮಿಂಚು ಸಹಿತ ಭಾರಿ ಮಳೆಯಾಗಿದ್ದು, ಸಿಡಿಲು ಬಡಿದು ಬರೋಬ್ಬರಿ 16 ಮಂದಿ ಮೃತಪಟ್ಟಿದ್ದಾರೆ.
ಗಯಾದಲ್ಲಿ ನಾಲ್ಕು, ಪೂರ್ಣಿಯಾದಲ್ಲಿ ಮೂವರು, ಬೆಗುಸರಾಯ್ ಮತ್ತು ಜಮುಯಿಯಲ್ಲಿ ತಲಾ ಇಬ್ಬರು ಮತ್ತು ಪಾಟ್ನಾ, ಸಹರ್ಸಾ, ಪೂರ್ವ ಚಂಪಾರಣ್, ಮಾಧೇಪುರ ಮತ್ತು ದರ್ಬಾಂಗ್ ಜಿಲ್ಲೆಗಳಲ್ಲಿ ತಲಾ ಒಬ್ಬರು ಸಾವನ್ನಪ್ಪಿದ್ದಾರೆ ಎಂದು ರಾಜ್ಯ ವಿಪತ್ತು ನಿರ್ವಹಣಾ ಇಲಾಖೆ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಬಿಹಾರದಲ್ಲಿ ಈ ವರ್ಷ 200ಕ್ಕೂ ಹೆಚ್ಚು ಮಂದಿ ಸಿಡಿಲಿಗೆ ಪ್ರಾಣ ಕಳೆದುಕೊಂಡಿದ್ದಾರೆ. ಕಳೆದ ತಿಂಗಳು ಒಂದೇ ದಿನ 83 ಜನ ಬಲಿಯಾಗಿದ್ದರು. ಈಗ ಮತ್ತೆ 16 ಮಂದಿ ಒಂದೇ ದಿನ ಮೃತಪಟ್ಟಿದ್ದಾರೆ.
ನೈಸರ್ಗಿಕ ವಿಕೋಪಕ್ಕೆ ಬಲಿಯಾದವರಿಗೆ ಸಿಎಂ ನಿತೀಶ್ ಕುಮಾರ್ ಸಂತಾಪ ಸೂಚಿಸಿದ್ದಾರೆ. ಅಲ್ಲದೆ ಮೃತಪಟ್ಟವರ ಕುಟುಂಬಗಳಿಗೆ ತಲಾ 4 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ.