ETV Bharat / bharat

ಅನ್ನ, ನೀರಿಲ್ಲದೇ ಕಾರ್ಮಿಕರು ಸಾವಿರಾರು ಕಿ.ಮೀ ನಡೆದರೂ, ನಮೋ ಸಹಾಯ ಮಾಡಲಿಲ್ಲ: ರಾಗಾ ವಾಗ್ದಾಳಿ! - ಬಿಹಾರ ಎಲೆಕ್ಷನ್​ನಲ್ಲಿ ರಾಹುಲ್​ ಪ್ರಚಾರ ಸಭೆ

ಬಿಹಾರದಲ್ಲಿ ಪ್ರಧಾನಿ ನರೇಂದ್ರ ಮೋದಿ, ರಾಹುಲ್​ ಗಾಂಧಿ ಮತಬೇಟೆ ಆರಂಭಗೊಂಡಿದ್ದು, ಭಾಗಲ್ಪುರದಲ್ಲಿ ಪ್ರಚಾರ ಸಭೆ ನಡೆಸಿದ ರಾಗಾ ಕಾರ್ಮಿಕರ ಸಮಸ್ಯೆ ಇಟ್ಟುಕೊಂಡು ನಮೋ ವಿರುದ್ಧ ವಾಗ್ದಾಳಿ ನಡೆಸಿದರು.

rahul Gandhi in Bhagalpur
rahul Gandhi in Bhagalpur
author img

By

Published : Oct 23, 2020, 5:54 PM IST

ಭಾಗಲ್ಪುರ್​​(ಬಿಹಾರ): ಲಾಕ್​ಡೌನ್​ ಸಂದರ್ಭದಲ್ಲಿ ಬಿಹಾರದ ಕಾರ್ಮಿಕರು ವಿವಿಧ ರಾಜ್ಯಗಳಿಂದ ತಮ್ಮ ಸ್ವಂತ ಮನೆಗಳಿಗೆ ತೆರಳಲು ಸಾಕಷ್ಟ ಕಷ್ಟಪಟ್ಟಿದ್ದಾರೆ ಎಂದ ರಾಹುಲ್​ ಗಾಂಧಿ, ಬಿಹಾರದ ಭಾಗಲ್ಪುರ್​ದಲ್ಲಿ ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು.

ಕಾರ್ಮಿಕರು ಸ್ವಂತ ರಾಜ್ಯಕ್ಕೆ ತೆರಳಲು ಆಹಾರ, ಅನ್ನ ಇಲ್ಲದೇ ಸಾವಿರಾರು ಕಿಲೋ ಮೀಟರ್​ ನಡೆದುಕೊಂಡು ಹೋದರು. ಈ ವೇಳೆ, ಪ್ರಧಾನಿ ನಿಮಗೆ ಸಹಾಯ ಮಾಡಿದ್ರಾ? ನಿಮ್ಮ ಬಗ್ಗೆ ಅವರು ಯೋಚನೆ ಕೂಡ ಮಾಡಿಲ್ಲ. ಕಾರ್ಮಿಕರು ಮನೆಗೆ ವಾಪಸ್​ ಆಗಲು ಮೋದಿ ಬಸ್​, ಟ್ರಕ್​ ಹಾಗೂ ರೈಲು ನೀಡಿದ್ರಾ? ಎಂದು ಪ್ರಶ್ನೆ ಮಾಡಿದರು.

ಕೊರೊನಾ ವೇಳೆ, ನಾನು ಕಾರ್ಮಿಕರ ಭೇಟಿಯಾಗಿ ಮಾತುಕತೆ ನಡೆಸಿದೆ. ಈ ವೇಳೆ, ಪ್ರಧಾನಿ ಮೋದಿ ನಮಗೆ ಎರಡು ದಿನ ಅವಕಾಶ ನೀಡಿದ್ದರೆ, ಸುಲಭವಾಗಿ ಮನೆಗೆ ಮರಳುತ್ತಿದ್ದೆವು ಎಂದರು. ಆದರೆ, ಮೋದಿ ಅವರಿಗೆ ಒಂದು ದಿನವೂ ನೀಡಲಿಲ್ಲ ಯಾಕೆ ಎಂಬುದು ಅರ್ಥವಾಗಲಿಲ್ಲ ಎಂದರು.

ನರೇಂದ್ರ ಮೋದಿ ವಿರುದ್ಧ ರಾಹುಲ್​ ವಾಗ್ದಾಳಿ

ಪ್ರಧಾನಿ ಮೋದಿ ಏಕಾಏಕಿ ಲಾಕ್​ಡೌನ್​ ಘೋಷಣೆ ಮಾಡಿದರು. ಈ ವೇಳೆ, ದೇಶದ ಕಾರ್ಮಿಕರಿಗೆ ಹಣ, ಆಹಾರ, ಕುಡಿಯುವ ನೀರು ಹೇಗೆ ಸಿಗುತ್ತದೆ ಎಂದು ನಮೋ ಯೋಚನೆ ಸಹ ಮಾಡಲಿಲ್ಲ. ದೇಶದ ಅಭಿವೃದ್ಧಿಗಾಗಿ ಬಿಹಾರದ ಕಾರ್ಮಿಕರು ವಿವಿಧ ಭಾಗಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಮುಂಬೈ, ದೆಹಲಿ ಹಾಗೂ ಪಂಜಾಬ್​​ಗಳಲ್ಲಿ ಕೆಲಸ ಮಾಡ್ತಿದ್ದಾರೆ. ನಮ್ಮ ಯೋಧರು ಲಡಾಖ್​​ನಲ್ಲಿ ಗಡಿ ರಕ್ಷಣೆಗೆ ನಿಂತಿರುವಂತೆ, ಬಿಹಾರದ ಕಾರ್ಮಿಕರು ಈ ರಾಷ್ಟ್ರಕ್ಕಾಗಿ ತಮ್ಮ ರಕ್ತ ಮತ್ತು ಬೆವರು ಹರಿಸುತ್ತಿದ್ದಾರೆ ಎಂದರು.

22 ದಿನಗಳಲ್ಲಿ ಭಾರತ ಕೊರೊನಾ ಮುಕ್ತವಾಗಲಿದೆ ಎಂದು ನಮೋ ಹೇಳಿದ್ದರು. ಕೋವಿಡ್​ನಿಂದ ಭಾರತದ ಬಡವರು, ಕಾರ್ಮಿಕರು ಮತ್ತು ರೈತರು ಭಾರಿ ನಷ್ಟಕ್ಕೊಳಗಾಗುತ್ತಾರೆ ಎಂದು ನಾನು ಫೆಬ್ರವರಿ ತಿಂಗಳಲ್ಲಿ ಹೇಳಿದ್ದೇನೆ. ಆದರೆ, ಈ ವೇಳೆ ಅಪಹಾಸ್ಯ ಮಾಡಲಾಯಿತು ಎಂದರು. ಕಳೆದ 6-7 ತಿಂಗಳಲ್ಲಿ ಕೊರೊನಾ ದುಪ್ಟಟ್ಟುಗೊಂಡಿದೆ. ಆದರೆ, ಮೋದಿ ಒಂದೂ ಮಾತನ್ನೂ ಮಾತನಾಡಿಲ್ಲ ಎಂದು ರಾಗಾ ವಾಗ್ದಾಳಿ ನಡೆಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.