ಅಮೃತಸರ: ಈವರೆಗೆ ಪತ್ತೆ ಮಾಡಲಾಗದಷ್ಟು ಅತಿ ದುಬಾರಿ ಮೊತ್ತದ ಡ್ರಗ್ಸ್ ಕಳ್ಳ ಸಾಗಾಣಿಕೆಯನ್ನು ಕಸ್ಟಮ್ಸ್ ಅಧಿಕಾರಿಗಳು ಪತ್ತೆ ಮಾಡಿದ್ದಾರೆ. ವಶಕ್ಕೆ ಪಡೆಯಲಾದ ಡ್ರಗ್ಸ್‌ನ ಮೊತ್ತ ಕೇಳಿದವರು ನಿಜಕ್ಕೂ ಬಾಯಿ ಮೇಲೆ ಬೆರಳಿಟ್ಟುಕೊಳ್ತಿದ್ದಾರೆ.
ಪಾಕಿಸ್ತಾನದಿಂದ ಭಾರತದಕ್ಕೆ ಟ್ರಕ್ನಲ್ಲಿ ಸಾಗಿಸುತ್ತಿದ್ದ 532 ಕೆಜಿ ಡ್ರಗ್ಸ್‌ನ ಅಧಿಕಾರಿಗಳು ಅಟ್ಟಾರಿ ಗಡಿ ಬಳಿ ವಶಕ್ಕೆ ಪಡೆದಿದ್ದಾರೆ. ಇದರ ಮೊತ್ತ ಬರೋಬ್ಬರಿ 2,700 ಕೋಟಿ ರೂಪಾಯಿಗೂ ಅಧಿಕ ಎಂದು ಹೇಳಲಾಗಿದೆ.
-
Dipak Kumar Gupta, Custom Commissioner Amritsar: Customs yesterday seized 532 kg of suspected Heroin & 52 kg of suspected mixed Narcotics having International Market value of approximately Rs 2700 crore at Integrated Check Post (ICP), Amritsar. #Punjab pic.twitter.com/kxHxIXcqbO
— ANI (@ANI) June 30, 2019 " class="align-text-top noRightClick twitterSection" data="
">Dipak Kumar Gupta, Custom Commissioner Amritsar: Customs yesterday seized 532 kg of suspected Heroin & 52 kg of suspected mixed Narcotics having International Market value of approximately Rs 2700 crore at Integrated Check Post (ICP), Amritsar. #Punjab pic.twitter.com/kxHxIXcqbO
— ANI (@ANI) June 30, 2019Dipak Kumar Gupta, Custom Commissioner Amritsar: Customs yesterday seized 532 kg of suspected Heroin & 52 kg of suspected mixed Narcotics having International Market value of approximately Rs 2700 crore at Integrated Check Post (ICP), Amritsar. #Punjab pic.twitter.com/kxHxIXcqbO
— ANI (@ANI) June 30, 2019
ಅಮೃತಸರದಲ್ಲಿ ಡ್ರಗ್ಸ್ಗಳನ್ನು ಅನ್ಲೋಡ್ ಮಾಡಲಾಗ್ತಿತ್ತು. ಈ ಬಗ್ಗೆ ಖಚಿತ ಮಾಹಿತಿ ಪಡೆದ ನಂತರ ಕಸ್ಟಮ್ಸ್ ಅಧಿಕಾರಿಗಳು ದಾಳಿ ನಡೆಸಿ, ಸರಕನ್ನು ವಶಪಡಿಸಿಕೊಂಡಿದ್ದಾರೆ. ಡ್ರಗ್ಸ್ ಸಾಗಾಣಿಕೆಯ ಕಾಶ್ಮೀರಿ ಕಣಿವೆ ಮೂಲದ ಮಾಸ್ಟರ್ಮೈಂಡ್ನ ಬಂಧಿಸಲಾಗಿದ್ದು, ವಿಚಾರಣೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇಂಟಿಗ್ರೇಟೆಡ್ ಚೆಕ್ ಪೋಸ್ಟ್ನಿಂದ ಸಾಗಿಬಂದ ಟ್ರಕ್ನಲ್ಲಿ ನೂರಾರು ಬ್ಯಾಗ್ಗಳಲ್ಲಿ ಮಾಧಕ ವಸ್ತುಗಳಿದ್ದವು. ಇವುಗಳನ್ನು ವಶಕ್ಕೆ ಪಡೆದಿರುವುದು ಅಂತಾರಾಷ್ಟ್ರೀಯ ಡ್ರಗ್ಸ್ ಜಾಲಕ್ಕೆ ದೊಡ್ಡ ಹೊಡೆತ ಎಂದು ಕಸ್ಟಮ್ಸ್ ಕಮೀಷನರ್ ದೀಪಕ್ ಕುಮಾರ್ ಗುಪ್ತಾ ಹೇಳಿದ್ದಾರೆ.