ಜೈಪುರ ( ರಾಜಸ್ಥಾನ): ರಾಜಸ್ಥಾನದ ಅಶೋಕ್ ಗೆಹ್ಲೋಟ್ ಸರ್ಕಾರಕ್ಕೆ ನೀಡಿದ ಬೆಂಬಲವನ್ನು ಬುಧವಾರ ಭಾರತೀಯ ಟ್ರೈಬಲ್ ಪಾರ್ಟಿ (ಬಿಟಿಪಿ) ಹಿಂತೆಗೆದುಕೊಂಡಿದೆ.
ಸುದ್ದಿಗೋಷ್ಠಿ ನಡೆಸಿ ಮಾತನಾಡಿದ, ಬಿಟಿಪಿ ಪಕ್ಷದ ಮುಖ್ಯಸ್ಥ ಚೋಟುಭಾಯ್ ವಾಸವ ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ. ಪಂಚಾಯತ್ ರಾಜ್ ಚುನಾವಣೆಯಲ್ಲಿ ಸೋಲು ಅನುಭವಿಸಿದ ನಂತರ ಬಿಟಿಪಿ ಕಾಂಗ್ರೆಸ್ ಜೊತೆಗಿನ ಮೈತ್ರಿ ಕೊನೆಗೊಳಿಸಿದೆ. ಸ್ಥಳೀಯ ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್ ಬೆಂಬಲ ನೀಡುತ್ತಿಲ್ಲ ಎಂದು ಇಬ್ಬರು ಬಿಟಿಪಿ ಶಾಸಕರು ಆರೋಪಿಸಿದ್ದರು.
ಓದಿ:'ಸಂಸ್ಕೃತಿಯ ಸೇತುವೆಯಾದ ಹಿಂದಿ ಭಾಷೆ ಉಳಿಸಿ': ನಮೋಗೆ ಕೊರಿಯಾ ವಿದ್ಯಾರ್ಥಿಗಳ ಮನವಿ
ಮಾಜಿ ಡಿಸಿಎಂ ಸಚಿನ್ ಪೈಲಟ್, ಸಿಎಂ ಅಶೋಕ್ ಗೆಹ್ಲೋಟ್ ವಿರುದ್ಧ ದಂಗೆ ಎದ್ದಾಗ ಬಿಟಿಪಿಯ ಇಬ್ಬರು ಶಾಸಕರು ಕಾಂಗ್ರೆಸ್ ಸರ್ಕಾರಕ್ಕೆ ಬೆಂಬಲ ನೀಡಿದ್ದರು ಮತ್ತು ರಾಜ್ಯವು ರಾಜಕೀಯ ಬಿಕ್ಕಟ್ಟಿಗೆ ಸಾಕ್ಷಿಯಾಯಿತು. ಬಿಟಿಪಿ 2018 ರಿಂದ ಅಶೋಕ್-ಗೆಹ್ಲೋಟ್ ಸರ್ಕಾರವನ್ನು ಬೆಂಬಲಿಸುತ್ತಿದೆ.