ETV Bharat / bharat

ಕಮಲ ಪಾಳಯಕ್ಕೆ ನೂತನ ಸಾರಥಿಗಳ ಘೋಷಣೆ: ರಾಷ್ಟ್ರೀಯ ಯುವ ಮೋರ್ಚಾ ಅಧ್ಯಕ್ಷರಾಗಿ ತೇಜಸ್ವಿ ಸೂರ್ಯ!

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಇದೀಗ ಪಕ್ಷದ ವಿವಿಧ ಜವಾಬ್ದಾರಿ ಹಂಚಿಕೆ ಮಾಡಿದ್ದು, ಹೊಸ ತಂಡ ರಚನೆ ಮಾಡಿದ್ದಾರೆ. ಪ್ರಮುಖವಾಗಿ ಬಿಜೆಪಿ ರಾಷ್ಟ್ರೀಯ ಯುವ ಮೋರ್ಚಾ ಅಧ್ಯಕ್ಷರಾಗಿ ಸಂಸದ ತೇಜಸ್ವಿ ಸೂರ್ಯ ನೇಮಕಗೊಂಡಿದ್ದಾರೆ.

Tejasvi Surya appointed Yuva Morcha President

author img

By

Published : Sep 26, 2020, 5:02 PM IST

ನವದೆಹಲಿ: ಭಾರತೀಯ ಜನತಾ ಪಕ್ಷದ ಅಧ್ಯಕ್ಷರಾಗಿ ಪದಗ್ರಹಣ ಮಾಡಿ ಜೆಪಿ ನಡ್ಡಾ ಎಂಟು ತಿಂಗಳ ಪೂರೈಕೆ ಮಾಡಿದ್ದು, ಇದರ ಬೆನ್ನಲ್ಲೇ ಇದೀಗ ಕಮಲ ಪಾಳಯಕ್ಕೆ ಹೊಸ ಪದಾಧಿಕಾರಿಗಳು ಸೇರಿದಂತೆ ಅನೇಕ ಹುದ್ದೆಗಳಿಗೆ ಬದಲಾವಣೆ ಮಾಡಿ ಮಾಡಿ ಆದೇಶ ಹೊರಡಿಸಿದ್ದಾರೆ.

  • Bharatiya Janata Party announces the names of the party's National Office bearers

    Dr Raman Singh, Mukul Roy, Annapurna Devi, Baijyant Jay Panda among those appointed as national vice presidents of the party. Tejasvi Surya appointed Yuva Morcha President pic.twitter.com/BHek1pXSGm

    — ANI (@ANI) September 26, 2020 " class="align-text-top noRightClick twitterSection" data=" ">

ಕರ್ನಾಟಕದ ಮೂವರು ಬಿಜೆಪಿ ನಾಯಕರಿಗೆ ಸ್ಥಾನ ನೀಡಲಾಗಿದ್ದು, ಪ್ರಮುಖವಾಗಿ ಬಿಜೆಪಿ ರಾಷ್ಟ್ರೀಯ ಯುವ ಮೋರ್ಚಾ ಅಧ್ಯಕ್ಷರಾಗಿ ಸಂಸದ ತೇಜಸ್ವಿ ಸೂರ್ಯ ನೇಮಕಗೊಂಡಿದ್ದಾರೆ. ಉಳಿದಂತೆ ಬಿ.ಎಲ್​​ ಸಂತೋಷ ಸಂಘಟನೆಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಲಿದ್ದು, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ಸಿಟಿ ರವಿ ನೇಮಕಗೊಂಡಿದ್ದು, ರಾಜ್ಯಸಭಾ ಸದಸ್ಯ ರಾಜೀವ್​ ಚಂದ್ರಶೇಖರ್​ ರಾಷ್ಟ್ರೀಯ ವಕ್ತಾರರಾಗಿ ನೇಮಕಗೊಂಡಿದ್ದಾರೆ.

Bharatiya Janata Party
ಸಿಟಿ ರವಿ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ

ಕಳೆದ ಎಂಟು ತಿಂಗಳಿಂದ ಭಾರತೀಯ ಜನತಾ ಪಕ್ಷದಲ್ಲಿ ಯಾವುದೇ ಹುದ್ದೆಗಳ ಬದಲಾವಣೆ ಮಾಡಿರಲಿಲ್ಲ. ಇದೇ ಮೊದಲ ಸಲ ಈ ಹುದ್ದೆಗಳಲ್ಲಿ ಬದಲಾವಣೆ ಮಾಡಿ ಆದೇಶ ಹೊರಡಿಸಲಾಗಿದೆ. ಡಾ. ರಮಣ್​​ ಸಿಂಗ್​, ಮುಕುಲ್​ ರಾವ್​, ಅನ್ನಪೂರ್ಣ ದೇವಿ, ಬೈಜಯಂತ್​ ಜೇ ಪಾಂಡಾ ಪಕ್ಷದ ರಾಷ್ಟ್ರೀಯ ಉಪಾಧ್ಯಕ್ಷರಾಗಿ ನೇಮಕಗೊಂಡಿದ್ದಾರೆ. ಪ್ರಮುಖವಾಗಿ ರಾಜಸಭೆಯ ಶೋಭಾ ಸರೋಜಾ ಪಾಂಡೆ, ರಾಮ ಮಾದವನ್ ಹಾಗೂ ಮುರುಳೀಧರ್​ ರಾವ್​ ಅವರನ್ನ ರಾಷ್ಟ್ರೀಯ ಪಕ್ಷದ ಪ್ರಧಾನ ಕಾರ್ಯದರ್ಶಿ ಸ್ಥಾನದಿಂದ ಬಿಡುಗಡೆಗೊಳಿಸಲಾಗಿದೆ. ಸಿಟಿ ರವಿ ಜತೆ ದುಶಂತ್​ ಕುಮಾರ್​ ಗೌತಮ್​, ದಿಲೀಪ್​, ಸೈಕ್ಯಾ, ತರುಣ್​ ಚೌಗ್​ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಆಯ್ಕೆಯಾಗಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.