ETV Bharat / bharat

ಕೋವಿಡ್‌ ಲಸಿಕೆ 'ಇಂಟ್ರಾನಾಸಲ್' ಮೊದಲ ಹಂತದ ಪ್ರಯೋಗ ಮುಂದಿನ ತಿಂಗಳು ಶುರು

author img

By

Published : Dec 9, 2020, 2:46 PM IST

ಇಂಟ್ರಾನಾಸಲ್ ಲಸಿಕೆಯ ಮೊದಲ ಹಂತದ ಪ್ರಯೋಗವೂ ಮುಂದಿನ ತಿಂಗಳು ಆರಂಭವಾಗಲಿದೆ. ಇದು ಸಿಂಗಲ್​-ಡೋಸ್​ ಲಸಿಕೆಯಾಗಿದೆ ಎಂದು ಹೈದರಾಬಾದ್ ಮೂಲದ ಲಸಿಕೆ ತಯಾರಕ ಭಾರತ್ ಬಯೋಟೆಕ್ ಸಂಸ್ಥೆ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಕೃಷ್ಣ ಯಲ್ಲಾ ಹೇಳಿದ್ದಾರೆ.

ಕೃಷ್ಣ ಯಲ್ಲಾ
ಕೃಷ್ಣ ಯಲ್ಲಾ

ಹೈದರಾಬಾದ್: ಭಾರತ್ ಬಯೋಟೆಕ್​ ಅಭಿವೃದ್ಧಿಪಡಿಸುತ್ತಿರುವ ಮತ್ತೊಂದು ಕೋವಿಡ್​-19 ಲಸಿಕೆ ಇಂಟ್ರಾನಾಸಲ್​ನ ಮೊದಲ ಹಂತದ ಪ್ರಯೋಗವೂ ಮುಂದಿನ ತಿಂಗಳು ಆರಂಭವಾಗಲಿದೆ ಎಂದು ಲಸಿಕೆ ತಯಾರಕ ಸಂಸ್ಥೆಯ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಕೃಷ್ಣ ಯಲ್ಲಾ ಹೇಳಿದ್ದಾರೆ.

ಟೈ ಗ್ಲೋಬಲ್ ಶೃಂಗಸಭೆ (ಟಿಜಿಎಸ್) ಅಧಿವೇಶನದಲ್ಲಿ ಮಾತನಾಡಿದ ಅವರು, ಭಾರತ್​ ಬಯೋಟೆಕ್​ ಸಂಸ್ಥೆ ಕೊವಾಕ್ಸಿನ್​ ಜೊತೆಗೆ ಮತ್ತೊಂದು ಲಸಿಕೆ ಅಭಿವೃದ್ಧಿ ಪಡಿಸುತ್ತಿದೆ. ಇದು ಸಿಂಗಲ್​-ಡೋಸ್​ ಲಸಿಕೆಯಾಗಿದ್ದು, ಇದರ ಮೊದಲ ಹಂತದ ಪ್ರಯೋಗವೂ ಮುಂದಿನ ತಿಂಗಳು ಆರಂಭವಾಗಲಿದೆ ಎಂದಿದ್ದಾರೆ.

ಕೋವಿಡ್​-19ಗಾಗಿ ಮುಂಬರಲಿರುವ ಲಸಿಕೆಗಳಿಗೆ ಎರಡು-ಡೋಸ್ ಇಂಟ್ರಾಮಸ್ಕುಲರ್​ ನಂತಹ ಚುಚ್ಚು ಮದ್ದಿನ ಅಗತ್ಯವಿದೆ. ಭಾರತದಂತಹ ದೇಶಕ್ಕೆ ಸುಮಾರು 2.6 ಶತಕೋಟಿ ಸಿರಿಂಜ್ ಮತ್ತು ಸೂಜಿಗಳು ಬೇಕಾಗುತ್ತವೆ. ಅಮೆರಿಕದ ಸೇಂಟ್ ಲೂಯಿಸ್‌ನ ವಾಷಿಂಗ್ಟನ್ ಯೂನಿವರ್ಸಿಟಿ ಸ್ಕೂಲ್ ಆಫ್ ಮೆಡಿಸಿನ್‌ನೊಂದಿಗೆ "ಚಿಂಪ್-ಅಡೆನೊವೈರಸ್" (ಚಿಂಪಾಂಜಿ ಅಡೆನೊವೈರಸ್) ಎಂಬ ಸಿಂಗಲ್​​-ಡೋಸ್ ಇಂಟ್ರಾನಾಸಲ್ ಲಸಿಕೆಗಾಗಿ ಭಾರತ್ ಬಯೋಟೆಕ್ ಒಪ್ಪಂದ ಮಾಡಿಕೊಂಡಿದೆ ಎಂದೂ ಕೂಡ ಹೇಳಿದ್ದಾರೆ.

ಓದಿ: ಪ್ರತಿಪಕ್ಷಗಳು ಸೋತಿವೆ, ಭಾರತ ಗೆದ್ದಿದೆ: ಕೇಂದ್ರ ಸಚಿವೆ ಸ್ಮೃತಿ ಇರಾನಿ

ಮೊದಲ ಹಂತದ ಪ್ರಯೋಗವೂ ಸೇಂಟ್ ಲೂಯಿಸ್ ವಿಶ್ವವಿದ್ಯಾಲಯದ ಲಸಿಕೆ ಮತ್ತು ಚಿಕಿತ್ಸಾ ಮೌಲ್ಯಮಾಪನ ಘಟಕದಲ್ಲಿ ನಡೆಯಲಿದೆ. ಇದರಲ್ಲಿ ಅನುಮೋದನೆ ಪಡೆದ ನಂತರ ಭಾರತ್ ಬಯೋಟೆಕ್ ಭಾರತದಲ್ಲಿ ಕ್ಲಿನಿಕಲ್ ಪ್ರಯೋಗವನ್ನು ಮುಂದಿನ ಹಂತಗಳನ್ನು ಅನುಸರಿಸುತ್ತದೆ ಮತ್ತು ಲಸಿಕೆಯನ್ನು ದೊಡ್ಡ ಪ್ರಮಾಣದಲ್ಲಿ ಉತ್ಪಾದಿಸುತ್ತದೆ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.