ETV Bharat / bharat

ಸಾಲದ ಸುಳಿಗೆ ಸಿಲುಕದಂತೆ ಕ್ರೆಡಿಟ್ ಕಾರ್ಡ್​ ಬಳಸುವುದು ಹೇಗೆ?.. ಇಲ್ಲಿವೆ ಟಿಪ್ಸ್​.. - ವೈಯಕ್ತಿಕ ಸಾಲ

ಕ್ರೆಡಿಟ್ ಕಾರ್ಡ್ ಬಳಸಿ ದೊಡ್ಡ ಮೊತ್ತದ ಖರೀದಿಯೊಂದನ್ನು ಮಾಡಿದಾಗ, ಆ ಸಾಲವನ್ನು ಇಎಂಐ ಮಾಡಿಕೊಳ್ಳಿ ಎಂದು ಬ್ಯಾಂಕಿನಿಂದ ನಿಮಗೆ ಕರೆ ಬರಲಾರಂಭಿಸುತ್ತವೆ. ಇದು ತೀರಾ ಆಕರ್ಷಣೀಯವಾಗಿ ಕಂಡರೂ ಇದರ ಮೋಹಕ್ಕೆ ಬಲಿಯಾಗಬೇಡಿ. ಈ ಆಯ್ಕೆಯಲ್ಲಿ ದೊಡ್ಡ ಮೊತ್ತದ ಪ್ರೊಸೆಸಿಂಗ್ ಫೀ ಹಾಗೂ ಹೆಚ್ಚಿನ ಬಡ್ಡಿದರ ವಿಧಿಸಲಾಗುತ್ತದೆ ಎಂಬುದು ಗೊತ್ತಿರಲಿ.

credit-card-tips
credit-card-tips
author img

By

Published : Jul 1, 2020, 8:09 PM IST

ಹೈದರಾಬಾದ್: ಇತ್ತೀಚಿನ ದಿನಗಳಲ್ಲಿ ಕ್ರೆಡಿಟ್ ಕಾರ್ಡ್​ ಬಳಸಿ ಶಾಪಿಂಗ್ ಮಾಡುವುದು ಸಾಮಾನ್ಯವಾಗಿದೆ. ಆದರೆ ಕೋವಿಡ್​-19 ಬಿಕ್ಕಟ್ಟಿನ ಮಧ್ಯೆ ಕ್ರೆಡಿಟ್ ಕಾರ್ಡ್​ ಬಳಸುವಾಗ ಸಾಕಷ್ಟು ಹುಷಾರಾಗಿರಬೇಕಾಗುತ್ತದೆ. ಆದಾಯದ ಮೂಲಗಳು ಕಡಿಮೆಯಾಗುತ್ತಿರುವ ಈ ಸಮಯದಲ್ಲಿ ವಿವೇಚನೆ ಇಲ್ಲದೆ ಕ್ರೆಡಿಟ್ ಕಾರ್ಡ್ ಬಳಸಿದರೆ ಸಾಲದ ಸುಳಿಗೆ ಸಿಲುಕಿ ಒದ್ದಾಡಬೇಕಾಗುತ್ತದೆ.

ಈ ಬಿಕ್ಕಟ್ಟಿನ ಸಮಯದಲ್ಲಿ ಕ್ರೆಡಿಟ್​ ಕಾರ್ಡ್ ಬಳಸುವಾಗ ಯಾವೆಲ್ಲ ಜಾಣತನದ ಕ್ರಮಗಳನ್ನು ಅನುಸರಿಸಬೇಕೆಂಬುದನ್ನು ಇಲ್ಲಿ ತಿಳಿಸಲಾಗಿದೆ:

ಎಲ್ಲ ಕ್ರೆಡಿಟ್ ಕಾರ್ಡ್​ ಸಾಲಗಳನ್ನು ಕ್ರೋಢೀಕರಿಸಿ

ಇಂದಿನ ಹಣಕಾಸು ಅನಿಶ್ಚಿತತೆಯ ಸಮಯದಲ್ಲಿ ಎಲ್ಲ ಕ್ರೆಡಿಟ್ ಕಾರ್ಡ್ ಸಾಲಗಳನ್ನು ಕ್ರೋಢೀಕರಿಸುವುದು ಸೂಕ್ತವಾಗಿದೆ. ನಿಮ್ಮ ಕ್ರೆಡಿಟ್ ಸ್ಕೋರ್ ಚೆನ್ನಾಗಿದ್ದಲ್ಲಿ ಯಾವುದೇ ಬ್ಯಾಂಕ್ ನಿಮಗೆ ಕಡಿಮೆ ಬಡ್ಡಿ ದರದಲ್ಲಿ ವೈಯಕ್ತಿಕ ಸಾಲ ನೀಡಬಹುದು. ಸಾಲದ ಕಂತು ಮರುಪಾವತಿ ಮುಂದೂಡಿಕೆಯ ಯೋಜನೆಯನ್ನು ನೀವು ಪಡೆದುಕೊಂಡಿರದಿದ್ದಲ್ಲಿ ಹಾಗೂ ಆದಾಯಕ್ಕಿಂತ ಸಾಲದ ಪ್ರಮಾಣ ಕಡಿಮೆ ಇದ್ದಲ್ಲಿ ಸುಲಭವಾಗಿ ವೈಯಕ್ತಿಕ ಸಾಲ ಸಿಗುತ್ತದೆ. ಇನ್ನು ಬೇರೊಂದು ಕ್ರೆಡಿಟ್ ಕಾರ್ಡ್ ಪಡೆದು ಅದಕ್ಕೆ ಇತರ ಎಲ್ಲ ಕಾರ್ಡ್​ಗಳ ಸಾಲವನ್ನು ಸಹ ಸೇರಿಸಬಹುದು.

ಸಾಲವನ್ನು ಇಎಂಐ ಗೆ ಪರಿವರ್ತಿಸುವ ಆಯ್ಕೆ ಬೇಡ

ಕ್ರೆಡಿಟ್ ಕಾರ್ಡ್ ಬಳಸಿ ದೊಡ್ಡ ಮೊತ್ತದ ಖರೀದಿಯೊಂದನ್ನು ಮಾಡಿದಾಗ, ಆ ಸಾಲವನ್ನು ಇಎಂಐ ಮಾಡಿಕೊಳ್ಳಿ ಎಂದು ಬ್ಯಾಂಕಿನಿಂದ ನಿಮಗೆ ಕರೆ ಬರಲಾರಂಭಿಸುತ್ತವೆ. ಇದು ತೀರಾ ಆಕರ್ಷಣೀಯವಾಗಿ ಕಂಡರೂ ಇದರ ಮೋಹಕ್ಕೆ ಬಲಿಯಾಗಬೇಡಿ. ಈ ಆಯ್ಕೆಯಲ್ಲಿ ದೊಡ್ಡ ಮೊತ್ತದ ಪ್ರೊಸೆಸಿಂಗ್ ಫೀ ಹಾಗೂ ಹೆಚ್ಚಿನ ಬಡ್ಡಿದರ ವಿಧಿಸಲಾಗುತ್ತದೆ ಎಂಬುದು ಗೊತ್ತಿರಲಿ. ಇದರ ಜೊತೆಗೆ ಈ ಇಎಂಐ ಗಳು ಮುಗಿಯುವವರೆಗೂ ಕಾರ್ಡ್​ನಲ್ಲಿ ಬಾಕಿ ಉಳಿದ ಲಿಮಿಟ್​ ಬ್ಲಾಕ್​ ಆಗಿರುತ್ತದೆ. ಹೀಗಾಗಿ ಈ ಯೋಜನೆಯಿಂದ ಲಾಭಕ್ಕಿಂತ ನಷ್ಟವೇ ಹೆಚ್ಚು!

ಪ್ರತಿ ತಿಂಗಳೂ ಕ್ರೆಡಿಟ್ ಕಾರ್ಡ್ ಬಿಲ್ ಪರಿಶೀಲಿಸಿ

ಬಿಲ್​ನಲ್ಲಿ ನಿಮಗೆ ತಿಳಿಯದ ಅಥವಾ ತಪ್ಪಾಗಿ ಯಾವುದಾದರೂ ಶುಲ್ಕಗಳನ್ನು ವಿಧಿಸಲಾಗಿದೆಯಾ ಎಂಬುದನ್ನು ಸೂಕ್ಷ್ಮವಾಗಿ ಪರಿಶೀಲಿಸಿ. ಏನಾದರೂ ಹೆಚ್ಚುವರಿ ಶುಲ್ಕಗಳು ಕಂಡುಬಂದಲ್ಲಿ, ನಿಮ್ಮ ಅನುಮತಿ ಇಲ್ಲದೇ ಯಾವುದೇ ಶುಲ್ಕವನ್ನು ಕಾರ್ಡ್​ನಲ್ಲಿ ಕಳೆಯುವುದು ಬೇಡವೆಂದು ಬ್ಯಾಂಕ್​ಗೆ ಕರೆ ಮಾಡಿ ತಿಳಿಸಿ.

ಈಗ ಪಾವತಿಸಬೇಕಿಲ್ಲವಲ್ಲ ಎಂಬ ಮನಸ್ಥಿತಿಯಿಂದ ಹೊರಬನ್ನಿ

ನಿಮ್ಮ ಎಲ್ಲ ಖರೀದಿಗಳಿಗೂ ಕ್ರೆಡಿಟ್ ಕಾರ್ಡ್ ಬಳಸುವುದು ಜಾಣತನವಲ್ಲ. ಹೇಗಿದ್ದರೂ ಈಗಲೇ ಏನನ್ನೂ ಪಾವತಿಸಬೇಕಿಲ್ಲವಲ್ಲ ಎಂದು ಕಂಡದ್ದನ್ನೆಲ್ಲ ಖರೀದಿಸಬೇಡಿ. ಅದರಲ್ಲೂ ಈಗಿನ ಸಮಯದಲ್ಲಿ ಅಗತ್ಯ ವಸ್ತುಗಳಿಗೆ ಮಾತ್ರ ಕ್ರೆಡಿಟ್ ಕಾರ್ಡ್ ಉಪಯೋಗಿಸುವುದು ಉತ್ತಮ. ಮೊಬೈಲ್ ಅಥವಾ ಇತರ ಗ್ಯಾಜೆಟ್​ಗಳನ್ನು ಈ ಬಿಕ್ಕಟ್ಟಿನಲ್ಲಿ ಸಾಲ ಮಾಡಿ ಕೊಂಡುಕೊಳ್ಳುವುದರಲ್ಲಿ ಯಾವುದೇ ಅರ್ಥವಿಲ್ಲ.

ಕ್ರೆಡಿಟ್ ಕಾರ್ಡ್ ಕಳೆದು ಹೋಗದಂತೆ ಜಾಗ್ರತೆ

ಕೋವಿಡ್​-19 ಬಿಕ್ಕಟ್ಟಿನ ಸಮಯದಲ್ಲಿ ಬ್ಯಾಂಕುಗಳು ಅತಿ ಕಡಿಮೆ ಸಿಬ್ಬಂದಿಯೊಂದಿಗೆ ಕೆಲಸ ಮಾಡುತ್ತಿವೆ. ಹೀಗಾಗಿ ಕಳೆದು ಹೋದ ಕಾರ್ಡ್ ಬದಲು ಹೊಸ ಕಾರ್ಡ್​ ಪಡೆಯುವುದು ಮೊದಲಿನಷ್ಟು ಸುಲಭವಲ್ಲ. ಜೊತೆಗೆ ಕಾರ್ಡ್ ಕಳೆದು ಹೋದರೆ ಸುರಕ್ಷತೆಯ ಪ್ರಶ್ನೆಯೂ ಎದುರಾಗುತ್ತದೆ. ಯಾವುದೇ ಕಾರಣಕ್ಕೂ ಕಾರ್ಡ್ ಕಳೆದು ಹೋಗದಂತೆ ಜಾಗರೂಕರಾಗಿರಿ.

(ಲೇಖಕರು: ವಿರಲ್ ಭಟ್, ವೈಯಕ್ತಿಕ ಹಣಕಾಸು ತಜ್ಞರು)

ಡಿಸಕ್ಲೇಮರ್: ಈ ಲೇಖನದಲ್ಲಿ ವ್ಯಕ್ತಪಡಿಸಲಾಗಿರುವ ಅಭಿಪ್ರಾಯಗಳು ಲೇಖಕರವೇ ಆಗಿರುತ್ತವೆ. ಅದಕ್ಕೂ ಈಟಿವಿ ಭಾರತ್ ಅಥವಾ ಈಟಿವಿ ಭಾರತ್ ಆಡಳಿತ ಮಂಡಳಿಗೂ ಯಾವುದೇ ಸಂಬಂಧವಿರುವುದಿಲ್ಲ.

ವೈಯಕ್ತಿಕ ಹಣಕಾಸಿಗೆ ಸಂಬಂಧಿಸಿದಂತೆ ನಿಮಗೆ ಯಾವುದೇ ಪ್ರಶ್ನೆಗಳಿದ್ದಲ್ಲಿ, ಅವನ್ನು businessdesk@etvbharat.com ಗೆ ಕಳುಹಿಸಬಹುದು. ನಮ್ಮ ಹಣಕಾಸು ತಜ್ಞರು ನಿಮ್ಮ ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸುತ್ತಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.