ಮುಂಬೈ: ಕೋವಿಡ್ 19 ರೋಗಿಗಳೊಂದಿಗೆ ಐಸಿಯುನಲ್ಲಿ ಬಳಸಲು ನಾನ್ ಇನ್ವೇಸಿವ್ ವೆಂಟಿಲೇಷನ್ (ಎನ್ಐವಿ) ವ್ಯವಸ್ಥೆಯನ್ನ ಪ್ರಾರಂಭಿಸುವುದಾಗಿ ಬೆಂಗಳೂರು ಮೂಲದ ಇನ್ಆಕ್ಸಲ್ ಟೆಕ್ನಾಲಜೀಸ್ ಬುಧವಾರ ತಿಳಿಸಿದೆ.
ವೆಂಟಿಲೇಟರ್ ತರಬೇತಿ ಪಡೆದ ಸಿಬ್ಬಂದಿ ತಕ್ಷಣ ಲಭ್ಯವಿಲ್ಲದಿದ್ದಾಗ, ಇದು ಬ್ಯಾಕಪ್ ನಾನ್ ಇನ್ವೇಸಿವ್ ವೆಂಟಿಲೇಷನ್ ವ್ಯವಸ್ಥೆಯಾಗಿ ಕಾರ್ಯನಿರ್ವಹಿಸುತ್ತದೆ. ಇದು ಜಾಗತಿಕವಾಗಿ ಪ್ರಮಾಣೀಕೃತ ವೈದ್ಯಕೀಯ ಸಾಧನಗಳ ವೈವಿಧ್ಯಮಯ ಪೋರ್ಟ್ಪೊಲಿಯೋವನ್ನು ಹೊಂದಿರುವ ಉತ್ಪನ್ನವಾಗಿದೆ. ಕೋವಿಡ್ 19 ರೋಗಿಗಳಿಗೆ ಉಸಿರಾಟದ ನೆರವು ನೀಡುವಂತಹ ವ್ಯವಸ್ಥೆಯನ್ನ ಇದು ಹೊಂದಿದೆ.
ಭಾರತದಲ್ಲಿ COVID-19 ಪ್ರಕರಣಗಳು ಹೆಚ್ಚುತ್ತಲೇ ಇರುವುದರಿಂದ ಈ ಮಾರಕ ವೈರಸ್ ವಿರುದ್ಧದ ದೇಶದ ಹೋರಾಟವನ್ನ ಬೆಂಬಲಿಸಲು ಇನ್ಆಕ್ಸಲ್ ಟೆಕ್ನಾಲಜೀಸ್ ಈ ಸಾಧನವನ್ನ ಕಂಡುಹಿಡಿದೆ. ಯುಎಸ್, ಯುಕೆ, ಇಟಲಿ ಮತ್ತು ಚೀನಾದಂತಹ ದೇಶಗಳಲ್ಲಿ ನಾನ್ ಇನ್ವೇಸಿವ್ ವೆಂಟಿಲೇಷನ್ (ಎನ್ಐವಿ) ವ್ಯವಸ್ಥೆಯನ್ನು ಶಿಫಾರಸು ಮಾಡಲಾಗುತ್ತಿದೆ ಎಂದು ಹೇಳಿದೆ.