ETV Bharat / bharat

ಮಹಿಳಾ ಐಪಿಎಲ್​ ಕ್ರಿಕೆಟ್​ ಪಂದ್ಯಾವಳಿ ನಡೆಸಲು ಬದ್ಧ: ಸೌರವ್​ ಗಂಗೂಲಿ - ಬಿಸಿಸಿಐ ಅಧ್ಯಕ್ಷ

ಮಹಿಳಾ ಐಪಿಎಲ್​ ಕ್ರಿಕೆಟ್​ ಪಂದ್ಯಾವಳಿಗಳನ್ನು ನಡೆಸಲು ಬಿಸಿಸಿಐ ಬದ್ಧವಾಗಿದ್ದು, ಈ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಸ್ಪಷ್ಟನೆ ನೀಡಿದ್ದಾರೆ.

sourav ganguly
ಸೌರವ್​ ಗಂಗೂಲಿ
author img

By

Published : Aug 2, 2020, 5:11 PM IST

ನವದೆಹಲಿ: ಮಹಿಳೆಯರ ಐಪಿಎಲ್ ಕ್ರಿಕೆಟ್​​ ಕ್ರೀಡಾಕೂಟ ನಡೆಸಲು ಸಜ್ಜಾಗಿದ್ದೇವೆ ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಸ್ಪಷ್ಟಪಡಿಸಿದ್ದು, ಮಹಿಳಾ ಕ್ರಿಕೆಟರ್​​ಗಳನ್ನು ಕಡೆಗಣಿಸಲಾಗಿದೆ ಎನ್ನುವ ಆರೋಪಗಳಿಗೆ ತೆರೆ ಎಳೆದಿದ್ದಾರೆ.

ಭಾರತದಲ್ಲಿ ಕೊರೊನಾ ಸೋಂಕಿನ ಕಾರಣಕ್ಕೆ ದುಬೈನಲ್ಲಿ ಪುರುಷರ ಐಪಿಎಲ್​ ಪಂದ್ಯಾವಳಿಗಳು ಸೆಪ್ಟೆಂಬರ್​ 19ರಿಂದ ನವೆಂಬರ್ 8ರವರೆಗೆ ನಡೆಯಲಿದ್ದು, ಮಹಿಳೆಯರ ಐಪಿಎಲ್​ ಪಂದ್ಯಗಳಿಗೆ ಬಿಸಿಸಿಐ ಒತ್ತು ನೀಡುತ್ತಿಲ್ಲ ಎಂಬ ಆರೋಪ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಬಿಸಿಸಿಐ ಅಧ್ಯಕ್ಷ ಸೌರವ್​ ಗಂಗೂಲಿ ಈ ಹೇಳಿಕೆ ನೀಡಿದ್ದಾರೆ.

ಕೆಲವು ಮೂಲಗಳ ಪ್ರಕಾರ ಮಹಿಳಾ ಕ್ರಿಕೆಟ್​ ಆಟಗಾರರಿಗೆ ತರಬೇತಿ ಕ್ಯಾಂಪ್​ಗಳನ್ನು ತೆರೆಯಲು ಬಿಸಿಸಿಐ ಚಿಂತನೆ ನಡೆಸಿದ್ದು, ಟಿ-20 ಚಾಲೆಂಜ್ ಸಿರೀಸ್​ ಹೆಸರಿನಲ್ಲಿ ಐಪಿಎಲ್​ ಪಂದ್ಯಗಳು ನಡೆಯುತ್ತವೆ ಎಂದು ಹೇಳಲಾಗುತ್ತಿದೆ.

ಈಗಿನ ಮಾಹಿತಿಯಂತೆ ನವೆಂಬರ್​ ತಿಂಗಳ 1ರಿಂದ 10ನೇ ದಿನಾಂಕದೊಳಗೆ ಮಹಿಳಾ ಟಿ-20 ಚಾಲೆಂಜ್​ ಸಿರೀಸ್ ಅಥವಾ ಐಪಿಎಲ್​ ಪಂದ್ಯಾವಳಿಯನ್ನು ಆರಂಭಿಸಲು ಚಿಂತನೆ ನಡೆಸಲಾಗಿದ್ದು, ಇನ್ನು ಕೆಲವೇ ದಿನಗಳಲ್ಲಿ ಕಾರಣ ಕೆಲವು ದಿನಗಳಲ್ಲಿ ದಿನಾಂಕ ಫಿಕ್ಸ್ ಆಗಲಿದೆ ಎಂದು ಅಂದಾಜಿಸಲಾಗುತ್ತಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.