ETV Bharat / bharat

ಮಗಳ ಟ್ವೀಟ್​​, ಪಾಕ್​ ಜತೆ ಕ್ರಿಕೆಟ್​​, ಐಪಿಎಲ್​​​​ ಬಗ್ಗೆ ಸೌರವ್‌ ಗಂಗೂಲಿ ಮಾತು - ಬಿಸಿಸಿಐ ಅಧ್ಯಕ್ಷ ಸೌರವ್​ ಗಂಗೂಲಿ

ಮಗಳು ಸನಾ ಮಾಡಿದ್ದಾರೆ ಎನ್ನಲಾದ ವಿವಾದಿತ ಟ್ವೀಟ್, ಪಾಕಿಸ್ತಾನದ ಜೊತೆ ಕ್ರಿಕೆಟ್‌ ಬಗ್ಗೆ ಮಾತನಾಡಿರುವ ಭಾರತೀಯ ಕ್ರಿಕೆಟ್​ ಮಂಡಳಿ ಅಧ್ಯಕ್ಷ ಸೌರವ್​ ಗಂಗೂಲಿ ಐಪಿಎಲ್‌ನಲ್ಲಿ ಅವಕಾಶ ಪಡೆದ ಯುವ ಹಾಗೂ ಹಿರಿಯ ಆಟಗಾರರಿಗೆ ಕಿವಿಮಾತು ಹೇಳಿದ್ದಾರೆ.

BCCI chief Sourav Ganguly
ಸೌರವ್​ ಗಂಗೂಲಿ
author img

By

Published : Dec 20, 2019, 4:58 PM IST

ಕೋಲ್ಕತ್ತಾ: ಇಂಡಿಯನ್​​ ಪ್ರೀಮಿಯರ್​​​ ಲೀಗ್​​​, ಪೌರತ್ವ (ತಿದ್ದುಪಡಿ) ಕಾಯ್ದೆ ವಿಚಾರದ ಕುರಿತು ಮಗಳ ಟ್ವೀಟ್​ ಹಾಗೂ ಪಾಕಿಸ್ತಾನದ ಜತೆಗಿನ ಕ್ರಿಕೆಟ್ ಪಂದ್ಯಾವಳಿ​ ಸಂಬಂಧಿಸಿದಂತೆ ಬಿಸಿಸಿಐ ಅಧ್ಯಕ್ಷ ಸೌರವ್​ ಗಂಗೂಲಿ ಮಾತನಾಡಿದ್ದಾರೆ.

'ಐಪಿಎಲ್​​ ಅದ್ಭುತ ವೇದಿಕೆ'
ಐಪಿಎಲ್‌​ ಎಲ್ಲ ಆಟಗಾರರಿಗೂ ಅದ್ಭುತ ವೇದಿಕೆ. ಯುವ, ಹಿರಿಯ ಹಾಗೂ ಕಿರಿಯ ಪ್ಲೇಯರ್ಸ್​​​ ಈ ಅತೀ ದೊಡ್ಡ ಟೂರ್ನಿಯಲ್ಲಿ ಪಾಲ್ಗೊಳ್ತಿದ್ದು ರಾಷ್ಟ್ರೀಯ ತಂಡಗಳಲ್ಲಿ ತಮ್ಮ ಸ್ಥಾನ ಗಟ್ಟಿಗೊಳಿಸಲು ಉತ್ತಮ ಪ್ರದರ್ಶನ ನೀಡುವ ಅವಶ್ಯಕತೆ ಇದೆ ಎಂದು ಸಲಹೆ ನೀಡಿದ್ದಾರೆ.

  • BCCI President Sourav Ganguly on IPL 2020: It's a huge platform for everyone. Huge platform for young, senior, junior, national players, it is the biggest league in the world. So I'm not surprised with all the interest and all the attention. pic.twitter.com/pk2gSRZgJT

    — ANI (@ANI) December 20, 2019 " class="align-text-top noRightClick twitterSection" data=" ">

ಪಾಕ್​ ವಿರುದ್ಧದ ಸರಣಿ ಕುರಿತು..

ಕಳೆದ ಅನೇಕ ವರ್ಷಗಳಿಂದ ನಮ್ಮ ತಂಡ ಪಾಕ್​​ನೊಂದಿಗೆ ದ್ವಿಪಕ್ಷೀಯ ಕ್ರಿಕೆಟ್​ ಸರಣಿ ನಡೆಸಿಲ್ಲ. ಪಾಕ್​ ವಿರುದ್ಧ ಆಡುವುದು ,ಬಿಡುವುದು ಕೇಂದ್ರ ಸರ್ಕಾರದ ನಿರ್ಧಾರ ಎಂದರು.

  • BCCI chief Sourav Ganguly, when asked 'It's been a long time since India played a bilateral series with Pakistan': Playing Pakistan is a government decision and it depends on the government. pic.twitter.com/Zcc0IfsP0k

ಮಗಳ ಟ್ವೀಟ್​ ಬಗ್ಗೆ ಮತ್ತೆ ದಾದಾ ಸ್ಪಷ್ಟನೆ:
ಪೌರತ್ವ (ತಿದ್ದುಪಡಿ) ಕಾಯ್ದೆ ವಿಚಾರವಾಗಿ ನನ್ನ ಮಗಳು ಮಾಡಿದ್ದಾಳೆ ಎನ್ನಲಾಗಿರುವ ಟ್ವೀಟ್​ ಬಗ್ಗೆ ಈಗಾಗಲೇ ಟ್ವೀಟ್​​ ಮಾಡುವ ಮೂಲಕ ಸ್ಪಷ್ಟನೆ ನೀಡಿದ್ದೇನೆ. ಅನೇಕ ನಕಲಿ ಟ್ವಿಟರ್​ ಅಕೌಂಟ್​ಗಳು ಹರಿದಾಡುತ್ತಿದ್ದು, ಯಾವುದನ್ನು ನಾವು ಪರಿಗಣನೆಗೆ ತೆಗೆದುಕೊಳ್ಳಬೇಕು ಎಂಬ ಬಗ್ಗೆ ಎಚ್ಚರದಿಂದಿರಬೇಕು ಎಂದಿದ್ದಾರೆ. ನನ್ನ ಮಗಳು ಇನ್ನೂ ಚಿಕ್ಕವಳು. ಇಂತಹ ವಿಷಯಗಳು ಆಕೆಗೆ ಗೊತ್ತಾಗುವುದಿಲ್ಲ ಎಂದರು.

Intro:Body:

ಮಗಳ ಟ್ವೀಟ್​​, ಪಾಕ್​ ಜತೆ ಕ್ರಿಕೆಟ್​​, ಐಪಿಎಲ್​​​​ ಬಗ್ಗೆ ಬಿಸಿಸಿಐ ಅಧ್ಯಕ್ಷ ಗಂಗೂಲಿ ಮಾತು! 

ಕೋಲ್ಕತ್ತಾ: ಇಂಡಿಯನ್​​ ಪ್ರೀಮಿಯರ್​​​ ಲೀಗ್​​​, ಪೌರತ್ವ ತಿದ್ದುಪಡಿ ಕಾಯ್ದೆ ವಿಚಾರದ ಕುರಿತು ಮಗಳ ಟ್ವೀಟ್​ ಹಾಗೂ ಪಾಕಿಸ್ತಾನದ ಜತೆ ದ್ವಿಪಕ್ಷೀಯ ಕ್ರಿಕೆಟ್​ಗೆ ಸಂಬಂಧಿಸಿದಂತೆ ಭಾರತೀಯ ಕ್ರಿಕೆಟ್​ ಮಂಡಳಿ ಅಧ್ಯಕ್ಷ ಸೌರವ್​ ಗಂಗೂಲಿ ಮಾತನಾಡಿದ್ದಾರೆ. 

ಐಪಿಎಲ್​​ ಅದ್ಭುತ ವೇದಿಕೆ

ಇಂಡಿಯನ್​​ ಪ್ರೀಮಿಯರ್​ ಲೀಗ್​ ಎಲ್ಲ ಪ್ಲೇಯರ್ಸ್​​ಗಳಿಗೂ ಅದ್ಭುತ ವೇದಿಕೆ. ಯುವ, ಹಿರಿಯ ಹಾಗೂ ಕಿರಿಯ ಪ್ಲೇಯರ್ಸ್​​​ ಈ ಅತಿದೊಡ್ಡ ಟೂರ್ನಿಯಲ್ಲಿ ಭಾಗಿಯಾಗುತ್ತಿದ್ದು ರಾಷ್ಟ್ರೀಯ ತಂಡಗಳಲ್ಲಿ ತಮ್ಮ ಸ್ಥಾನ ಗಟ್ಟಿಗೊಳಿಸಿಕೊಳ್ಳಲು ಇಲ್ಲಿ ಉತ್ತಮ ಪ್ರದರ್ಶನ ನೀಡುವ ಅವಶ್ಯಕತೆ ಇದೆ ಎಂದಿದ್ದಾರೆ. 

ಪಾಕ್​ ವಿರುದ್ಧದ ಸರಣಿ ಕುರಿತು ಮಾತು

ಕಳೆದ ಅನೇಕ ವರ್ಷಗಳಿಂದ ನಮ್ಮ ತಂಡ ಪಾಕ್​​ನೊಂದಿಗೆ ದ್ವಿಪಕ್ಷೀಯ ಕ್ರಿಕೆಟ್​ ಸರಣಿಯಲ್ಲಿ ಭಾಗಿಯಾಗಿಲ್ಲ. ಪಾಕ್​ ವಿರುದ್ಧ ಆಡುವುದು ಬಿಡುವುದು ಕೇಂದ್ರ ಸರ್ಕಾರದ ನಿರ್ಧಾರ. ಅದಕ್ಕೆ ಸಂಬಂಧಿಸಿದಂತೆ ನಿರ್ಧಾರ ಕೈಗೊಳ್ಳುವ ಸಂಪೂರ್ಣ ಅಧಿಕಾರ ಕೇಂದ್ರದ ಬಳಿ ಇದೆ ಎಂದಿದ್ದಾರೆ. 

ಮಗಳ ಟ್ವೀಟ್​ ಬಗ್ಗೆ ದಾದಾ ಮಾತು

ಪೌರತ್ವ ತಿದ್ದುಪಡಿ ಕಾಯ್ದೆ ವಿಚಾರವಾಗಿ ನನ್ನ ಮಗಳು ಮಾಡಿದ್ದಾಳೆ ಎನ್ನಲಾಗಿರುವ ಟ್ವೀಟ್​ ಬಗ್ಗೆ ನಾನು ಈಗಾಗಲೇ ಟ್ವೀಟ್​​ ಮಾಡುವ ಮೂಲಕ ಸ್ಪಷ್ಟನೆ ನೀಡಿದ್ದೇನೆ. ಅನೇಕ ಸುಳ್ಳು ಟ್ವಿಟರ್​ ಅಕೌಂಟ್​ಗಳು ಹರಿದಾಡುತ್ತಿದ್ದು, ಯಾವುದು ತೆಗೆದುಕೊಳ್ಳಬೇಕು ಎಂಬುದರ ಬಗ್ಗೆ ಎಚ್ಚರದಿಂದ ಇರಬೇಕು ಎಂದಿದ್ದಾರೆ. ಅವಳು ಇನ್ನು ತುಂಬಾ ಚಿಕ್ಕವಳಾಗಿದ್ದು, ಇಂತಹ ವಿಷಯಗಳು ಆಕೆಗೆ ಗೊತ್ತಾಗುವುದಿಲ್ಲ ಎಂದಿದ್ದಾರೆ. 

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.