ETV Bharat / bharat

ಕೊರೊನಾ ಆಸ್ಪತ್ರೆಗೆ ಕೋಟ್ಯಂತರ ರೂಪಾಯಿಯ ಕೃಷಿ ಭೂಮಿ ನೀಡಲು ಮುಂದೆ ಬಂದ ರೈತ

ದೇಶ ಕೊರೊನಾ ಮಹಾಮಾರಿಯ ಹೊಡೆತದಿಂದ ಸಂಕಷ್ಟಕ್ಕೆ ಸಿಲುಕಿದೆ. ಈ ವೇಳೆ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಕೊರೊನಾ ವಿರುದ್ಧ ಸಮರ ಸಾರಿದ್ದು ಜನರ ಸಹಕಾರ ಕೋರಿವೆ. ಈ ವೇಳೆ ಪಂಜಾಬ್​ನ ರೈತನೊಬ್ಬ ತನ್ನ ಕೋಟ್ಯಂತರ ರೂಪಾಯಿ ಮೌಲ್ಯದ ಭೂಮಿಯನ್ನು ಆಸ್ಪತ್ರೆ ಅಥವಾ ಸಂಶೋಧನಾ ಕೇಂದ್ರ ನಿರ್ಮಾಣಕ್ಕೆ ಬಿಟ್ಟುಕೊಡಲು ಮುಂದೆ ಬಂದಿದ್ದಾನೆ.

farmer butasingh
ರೈತ ಬೂಟಾ ಸಿಂಗ್​
author img

By

Published : Apr 3, 2020, 8:16 PM IST

ಬಟಿಂಡಾ(ಪಂಜಾಬ್​): ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡುವ ಸಲುವಾಗಿ ಆಸ್ಪತ್ರೆ ನಿರ್ಮಾಣ ಮಾಡಲು ರೈತನೊಬ್ಬ ಕೋಟ್ಯಂತರ ರೂಪಾಯಿ ಬೆಲೆಬಾಳುವ ಒಂದು ಎಕರೆ ಭೂಮಿಯನ್ನು ಸರ್ಕಾರಕ್ಕೆ ಬಿಟ್ಟುಕೊಟ್ಟಿದ್ದಾನೆ. ಬತಿಂಡಾ ನಗರದಿಂದ 8 ಕಿಲೋಮೀಟರ್ ದೂರದಲ್ಲಿರುವ ಬಿಬಿವಾಲಾ ಗ್ರಾಮದಲ್ಲಿರುವ 66 ವರ್ಷದ ರೈತ ಬೂಟಾ ಸಿಂಗ್​ ತನ್ನ ಭೂಮಿಯನ್ನು ಸರ್ಕಾರಕ್ಕೆ ಬಿಟ್ಟುಕೊಡಲು ಮುಂದೆ ಬಂದಿದ್ದಾನೆ.

ಈ ಭೂಮಿಯ ಗೋಧಿ ಮತ್ತು ಭತ್ತ ಬೆಳೆಯುವ ಪ್ರದೇಶವಾಗಿದ್ದು ''ಪ್ರಧಾನಿ ಮೋದಿ ಹಾಗೂ ಪಂಜಾಬ್ ಸಿಎಂ ಅಮರಿಂದರ್ ಸಿಂಗ್​ ಸಾರ್ವಜನಿಕರಲ್ಲಿ ಕೊರೊನಾ ವಿರುದ್ಧ ತಡೆಗೆ ಮನವಿ ಮಾಡಿಕೊಳ್ಳುತ್ತಿರುವಾಗ ಹಾಗೂ ಸಹಕಾರ ಕೇಳುತ್ತಿರುವಾಗ ಈ ಭೂಮಿಯನ್ನು ಬಿಟ್ಟುಕೊಡಲು ನಿರ್ಧರಿಸಿದ್ದೇನೆ'' ಎಂದಿದ್ದಾನೆ.

ಕೊರೊನಾ ವೈರಸ್​ ಬಗ್ಗೆ ಮಾತನಾಡಿರುವ ಬೂಟಾಸಿಂಗ್​ ಪ್ರಪಂಚದಲ್ಲಿ ತುಂಬಾ ವೇಗವಾಗಿ ಕೊರೊನಾ ಹಬ್ಬುತ್ತಿದೆ. ಅಭಿವೃದ್ಧಿಹೊಂದಿದ ರಾಷ್ಟ್ರವಾದ ಅಮೆರಿಕದಲ್ಲೂ ತನ್ನ ಉಪಟಳ ಮುಂದುವರೆಸಿದೆ. ಸರ್ಕಾರವೇನಾದರೂ ಆಸ್ಪತ್ರೆ ಅಥವಾ ಸಂಶೋಧನಾ ಕೇಂದ್ರವನ್ನು ತೆರೆಯಲು ಮುಂದೆ ಬಂದರೆ ನನ್ನ ನಾಲ್ಕು ಎಕರೆ ಭೂಮಿಯಲ್ಲಿ ಒಂದು ಎಕರೆಯನ್ನು ಬಿಟ್ಟುಕೊಡಲು ಸಿದ್ಧನಿದ್ದೇನೆ ಎಂದು ಭರವಸೆ ನೀಡಿದ್ದಾನೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.