ನವದೆಹಲಿ: ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಪಂದ್ಯದಲ್ಲಿ ಎಂಎಸ್ ಧೋನಿ, ಭಾರತೀಯ ಸೇನೆಯ ಪ್ಯಾರಾ ಸ್ಪೆಷಲ್ ಪೋರ್ಸ್ನ ಲಾಂಛನವಾದ ರೆಜಿಮೆಂಟಲ್ ಡ್ಯಾಗರ್ನ ಚಿತ್ರವಿದ್ದ ವಿಕೆಟ್ ಕೀಪಿಂಗ್ ಗ್ಲೌಸ್ ಧರಿಸಿದ್ದು, ತೀವ್ರ ವಿವಾದ ಸೃಷ್ಟಿಸಿದ ಬಳಿಕ ಪರ ವಿರೋಧದ ಮಾತುಗಳು ಕೇಳಿಬರುತ್ತಿವೆ.
ಈ ನಡುವೆ ಕೇಂದ್ರ ಸಚಿವ ಹಾಗೂ ಜನರಲ್ (ನಿವೃತ್ತ) ವಿ.ಕೆ. ಸಿಂಗ್ ಅವರು ಎಂ.ಎಸ್. ಧೋನಿ ಪರವಾಗಿ ಮಾತನಾಡಿದ್ದಾರೆ. 'ಧೋನಿ ' ಅವರು 'ಬಲಿದಾನ್' ಬ್ಯಾಡ್ಜ್ ಚಿನ್ಹೆ ಇರುವ ವಿಕೆಟ್ ಕೀಪಿಂಗ್ ಗ್ಲೌಸ್ ಧರಿಸಿ ಭಾರತೀಯ ಸೇನೆಯ ಪ್ಯಾರಾ ಸ್ಪೆಷಲ್ ಪೋರ್ಸ್ ಮೇಲಿರುವ ಅವರ ಪ್ರೀತಿ ಹಾಗೂ ಗೌರವ ತೋರಿದ್ದಾರೆ ಎಂದು ಪ್ರಶಂಸಿಸಿದ್ದಾರೆ.
ಬಲಿದಾನ್ ಬ್ಯಾಡ್ಜ್ ಧರಿಸುವುದು ಯಾವುದೇ ರಾಜಕೀಯ/ ಧರ್ಮ/ ವರ್ಣಭೇದ ನೀತಿಯ ಧೋರಣೆಯಲ್ಲ. ಇದು ನಮ್ಮ ರಾಷ್ಟ್ರದ ಪ್ರತಿಷ್ಠೆಯ ಸಂಕೇತ ಎಂಬುದನ್ನು ಐಸಿಸಿ ಅರ್ಥಮಾಡಿಕೊಳ್ಳಬೇಕು ಎಂದು ಹೇಳಿದ್ದಾರೆ.