ETV Bharat / bharat

ಕೋವಿಡ್​ ಸೋಂಕಿತ ತಾಯಿಗೆ ಹುಟ್ಟಿದ ಮಕ್ಕಳಿಗೆ ಸೋಂಕಿಲ್ಲ! - ಗರ್ಭಿಣಿ

ಕೋವಿಡ್​ ಸೋಂಕಿತರ ಹತ್ತಿರ ಹೋದರೆ, ಅವರನ್ನು ಮುಟ್ಟಿದರೆ ಸೋಂಕು ತಗುಲುತ್ತದೆ ಎಂಬುದು ಗೊತ್ತಿರುವ ವಿಷಯ. ಆದರೆ ಕೋವಿಡ್​ ಸೋಂಕಿರುವ ತಾಯಂದಿರಿಗೆ ಹುಟ್ಟಿದ ಮಕ್ಕಳು ಸೋಂಕು ಮುಕ್ತರಾಗಿ ಹುಟ್ಟಿದ್ದು ಸೋಜಿಗ ಮೂಡಿಸಿದೆ.

Babies born to COVID-19 mothers
Babies born to COVID-19 mothers
author img

By

Published : Apr 9, 2020, 12:47 PM IST

ಲಿಮಾ (ಪೆರು): ಕೋವಿಡ್​-19 ಪಾಸಿಟಿವ್ ಆಗಿದ್ದ ಇಬ್ಬರು ಗರ್ಭಿಣಿಯರಿಗೆ ಹುಟ್ಟಿದ ಮಕ್ಕಳು ಸೋಂಕು ಮುಕ್ತರಾಗಿ ಹುಟ್ಟಿರುವುದು ಅಚ್ಚರಿ ಮೂಡಿಸಿದೆ. ಪೆರು ದೇಶದ ಲಿಮಾದಲ್ಲಿ ಈ ಸೋಜಿಗದ ಪ್ರಕರಣ ನಡೆದಿದೆ.

ಹೆರಿಗೆ ನಡೆದ ಎಡ್ಗಾರ್ಡೊ ರೆಬಾಗ್ಲಿಯಾಟಿ ಮಾರ್ಟಿನ್ಸ್​ ನ್ಯಾಷನಲ್​ ಆಸ್ಪತ್ರೆಯು ಕಟ್ಟುನಿಟ್ಟಾದ ಜೈವಿಕ ಸುರಕ್ಷತೆ ಪ್ರೊಟೊಕಾಲ್​ಗಳನ್ನು ಪಾಲಿಸಿದ್ದರಿಂದಲೇ ಮಕ್ಕಳು ಕೋವಿಡ್​ ಮುಕ್ತರಾಗಿ ಜನಿಸಿವೆ ಎಂದು ವೈದ್ಯರು ಹೇಳಿದ್ದಾರೆ.

ಕಳೆದ ಮಾರ್ಚ್ ತಿಂಗಳ ಅಂತ್ಯದಲ್ಲಿ ಮಕ್ಕಳು ಜನಿಸಿವೆ. ಮಾ.27 ರಂದು 32 ನೇ ವಾರದಲ್ಲಿ ಜನಿಸಿದ ಮಗು 1 ಕೆಜಿ 77 ಗ್ರಾಂ ತೂಕ ಹಾಗೂ ಮಾ.31 ರಂದು 38 ನೇ ವಾರದಲ್ಲಿ ಜನಿಸಿದ ಮಗು 3 ಕೆಜಿ 300 ಗ್ರಾಂ ತೂಕ ಹೊಂದಿವೆ. ಈ ಮಕ್ಕಳ ತಾಯಂದಿರು ಈಗಲೂ ಆಸ್ಪತ್ರೆಯಲ್ಲೇ ದಾಖಲಾಗಿದ್ದು, ಕೋವಿಡ್​ಗಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಈಗ ಎರಡೂ ಶಿಶುಗಳಿಗೆ ಒಂದು ಬಾರಿ ಕೋವಿಡ್​ ಟೆಸ್ಟ್ ಮಾಡಲಾಗಿದ್ದು ನೆಗೆಟಿವ್ ವರದಿ ಬಂದಿದೆ. ಎರಡನೇ ಟೆಸ್ಟ್​ನ ವರದಿಯನ್ನು ಕಾಯಲಾಗುತ್ತಿದೆ ಎಂದು ಆಸ್ಪತ್ರೆ ಅಧಿಕಾರಿಗಳು ತಿಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.