ETV Bharat / bharat

161 ಅಡಿ ಎತ್ತರದ ರಾಮ ಮಂದಿರ ನಿರ್ಮಾಣ: ವಿನ್ಯಾಸಕ್ಕೆ ಮತ್ತೆರಡು ಮಂಟಪಗಳ ಸೇರ್ಪಡೆ - ವಾಸ್ತುಶಿಲ್ಪಿ ನಿಖಿಲ್ ಸೊಂಪೂರ

ರಾಮ ಮಂದಿರದ ವಿನ್ಯಾಸವನ್ನು 141 ಅಡಿಗಳಿಂದ 161 ಅಡಿಗಳಿಗೆ ಹೆಚ್ಚಿಸಲಾಗಿದೆ. ವಿನ್ಯಾಸಕ್ಕೆ ಎರಡು ಮಂಟಪಗಳನ್ನು ಹೆಚ್ಚಿಗೆ ಸೇರಿಸಲಾಗಿದೆ ಎಂದು ವಾಸ್ತುಶಿಲ್ಪಿ ಮತ್ತು ದೇವಾಲಯದ ಮುಖ್ಯ ವಾಸ್ತುಶಿಲ್ಪಿ ಸಿ.ಸಾಂಪುರ ಅವರ ಪುತ್ರ ನಿಖಿಲ್ ಸೊಂಪೂರ ಹೇಳಿದ್ದಾರೆ.

ram mandir
ram mandir
author img

By

Published : Jul 22, 2020, 11:20 AM IST

ಅಹಮದಾಬಾದ್ (ಗುಜರಾತ್): ಅಯೋಧ್ಯೆಯ ಭವ್ಯ ರಾಮ್ ಮಂದಿರದ ಎತ್ತರವು 161 ಅಡಿ ಇರಲಿದ್ದು, 1988ರಲ್ಲಿ ಸಿದ್ಧಪಡಿಸಿದ ಹಿಂದಿನ ವಿನ್ಯಾಸಕ್ಕಿಂತ 20 ಅಡಿಗಳಷ್ಟು ಹೆಚ್ಚಳವಾಗಿದೆ ಎಂದು ವಾಸ್ತುಶಿಲ್ಪಿ ಮತ್ತು ದೇವಾಲಯದ ಮುಖ್ಯ ವಾಸ್ತುಶಿಲ್ಪಿ ಸಿ.ಸಾಂಪುರ ಅವರ ಪುತ್ರ ನಿಖಿಲ್ ಸೊಂಪೂರ ಹೇಳಿದ್ದಾರೆ.

ಹಿಂದಿನ ವಿನ್ಯಾಸವನ್ನು 1988ರಲ್ಲಿ ತಯಾರಿಸಲಾಗಿತ್ತು. ಇದೀಗ 30 ವರ್ಷಗಳು ಕಳೆದಿದ್ದು, ಜನರು ದೇವಾಲಯಕ್ಕೆ ಭೇಟಿ ನೀಡಲು ಬಹಳ ಉತ್ಸುಕರಾಗಿದ್ದಾರೆ. ಹೀಗಾಗಿ ದೇವಾಲಯದ ಗಾತ್ರ ಹೆಚ್ಚಿಸಬೇಕು ಎಂದು ನಾವು ಭಾವಿಸಿದ್ದೇವೆ. ದೇವಾಲಯದ ವಿನ್ಯಾಸವನ್ನು 141 ಅಡಿಗಳಿಂದ 161 ಅಡಿಗಳಿಗೆ ಹೆಚ್ಚಿಸಲಾಗಿದೆ ಎಂದು ನಿಖಿಲ್ ಸೋಮಪುರ ಸುದ್ದಿಗಾರರಿಗೆ ತಿಳಿಸಿದರು.

ವಿನ್ಯಾಸಕ್ಕೆ ಎರಡು ಮಂಟಪಗಳನ್ನು ಹೆಚ್ಚಿಗೆ ಸೇರಿಸಲಾಗಿದೆ. ಹಿಂದಿನ ವಿನ್ಯಾಸದ ಆಧಾರದ ಮೇಲೆ ಕೆತ್ತಿದ ಎಲ್ಲ ಕಂಬಗಳು ಮತ್ತು ಕಲ್ಲುಗಳನ್ನು ಬಳಸಲಾಗುವುದು. ಅವು ವ್ಯರ್ಥವಾಗುವುದಿಲ್ಲ ಎಂದು ಅವರು ಹೇಳಿದರು.

ದೇವಾಲಯದ ವಿನ್ಯಾಸದ ಗೌರವವನ್ನು ನಮ್ಮ ಕುಟುಂಬಕ್ಕೆ ನೀಡಿರುವುದು ಬಹಳ ಹೆಮ್ಮೆಯ ವಿಷಯವಾಗಿದೆ. 3.5 ವರ್ಷಗಳ ನಂತರ ಈ ದೇವಾಲಯ ಸಿದ್ಧವಾಗಲಿದೆ ಎಂದು ನಿಖಿಲ್ ಹೇಳಿದರು.

ಪ್ರಧಾನಿ ಮೋದಿಯವರ ಉಪಸ್ಥಿತಿಯಲ್ಲಿ ಭೂಮಿ ಪೂಜೆಯ ನಂತರ, ನಿರ್ಮಾಣ ಕಾರ್ಯಗಳು ಪ್ರಾರಂಭವಾಗುತ್ತವೆ. ಎಲ್ ಅಂಡ್ ಟಿ ತಂಡವು ಯಂತ್ರೋಪಕರಣಗಳು ಮತ್ತು ಸಾಮಗ್ರಿಗಳೊಂದಿಗೆ ಸ್ಥಳಕ್ಕೆ ತಲುಪಿದ್ದು, ಅಡಿಪಾಯದ ಕೆಲಸಗಳು ಈಗಿನಿಂದಲೇ ಪ್ರಾರಂಭವಾಗಿದೆ ಎಂದು ಅವರು ಹೇಳಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.