ETV Bharat / bharat

ಅಯೋಧ್ಯೆ: ಮನೆ, ಮಠ ಉಳಿಸಿಕೊಡುವಂತೆ ಶ್ರೀರಾಮನ ಮೊರೆ ಹೋದ ಗ್ರಾಮಸ್ಥರು !

ಅಯೋಧ್ಯೆಯಲ್ಲಿ ಭವ್ಯ ರಾಮ ಮಂದಿರ ನಿರ್ಮಾಣದೊಂದಿಗೆ ಸಂಪೂರ್ಣ ಅಯೋಧ್ಯೆಯ ಸ್ವರೂಪವನ್ನೇ ಬದಲಿಸಲು ಸರ್ಕಾರ ಹಲವಾರು ಮಹತ್ವಾಕಾಂಕ್ಷಿ ಯೋಜನೆಗಳನ್ನು ಘೋಷಿಸಿದೆ. ಇಲ್ಲಿನ ಪರಿಕ್ರಮಾ ಮಾರ್ಗದ ಸೌಂದರ್ಯಕರಣಕ್ಕಾಗಿ 3 ಸಾವಿರ ಕೋಟಿ ರೂಪಾಯಿಗಳನ್ನು ಖರ್ಚು ಮಾಡಲಾಗುತ್ತಿದೆ. ಹಲವಾರು ಸೇತುವೆಗಳನ್ನು ಪರಿಕ್ರಮಾ ಮಾರ್ಗದ ಮಧ್ಯೆ ನಿರ್ಮಾಣ ಮಾಡಲಾಗುತ್ತಿದೆ. ಹಾಗೆಯೇ ಅಯೋಧ್ಯೆಯಿಂದ ಚಿತ್ರಕೂಟದವರೆಗೆ 165 ಕಿಮೀ ಉದ್ದದ ರಸ್ತೆ ನಿರ್ಮಾಣ ಮಾಡುವ ಯೋಜನೆಯನ್ನೂ ಹಾಕಿಕೊಳ್ಳಲಾಗಿದೆ.

Lord Rama
Lord Rama
author img

By

Published : Aug 1, 2020, 5:49 PM IST

ಅಯೋಧ್ಯಾ: ಬರುವ ಆ.5 ರಂದು ಇಲ್ಲಿನ ರಾಮಲಲ್ಲಾ ಜನ್ಮಸ್ಥಾನ ಕೇಂದ್ರದಲ್ಲಿ ಭವ್ಯ ರಾಮಮಂದಿರ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಲಿದೆ. ಈ ಮಧ್ಯೆ ಹತ್ತಿರದ ಸರಯೂ ನದಿ ತಟದ ಮಾಝಾ ಬರೇಠಾ ಗ್ರಾಮಸ್ಥರು ಮಾತ್ರ ಈ ಖುಷಿಯನ್ನು ಅನುಭವಿಸಲಾಗದ ಸ್ಥಿತಿಯಲ್ಲಿದ್ದು, ತಮ್ಮ ಮನೆ-ಮಠಗಳನ್ನು ಕಳೆದುಕೊಂಡು ಸ್ಥಾನ ಪಲ್ಲಟಗೊಳ್ಳುವ ಭೀತಿಯನ್ನು ಎದುರಿಸುತ್ತಿದ್ದಾರೆ.

ಅಯೋಧ್ಯೆಯಲ್ಲಿ ಭವ್ಯ ಶ್ರೀರಾಮ ಮಂದಿರ ನಿರ್ಮಾಣವಾಗುವುದು ಈ ಗ್ರಾಮಸ್ಥರಿಗೆ ಅತ್ಯಂತ ಖುಷಿಯ ವಿಷಯವೇ ಆಗಿದೆ. ಆದರೆ, ರಾಮ ಮಂದಿರ ನಿರ್ಮಾಣವಾಗಲಿರುವ ಸ್ಥಳದಿಂದ 5 ಕಿಮೀ ದೂರದ ಮಾಝಾ ಬರೇಠಾ ಗ್ರಾಮವನ್ನು ಸಂಪೂರ್ಣವಾಗಿ ಸ್ವಾಧೀನ ಪಡಿಸಿಕೊಳ್ಳಲು ಉತ್ತರ ಪ್ರದೇಶ ಸರ್ಕಾರ ಚಿಂತನೆ ನಡೆಸಿದ್ದು, ನದಿ ತಟದ ಈ ಸ್ಥಳದಲ್ಲಿ ಅತಿ ಎತ್ತರದ ಶ್ರೀರಾಮನ ಮೂರ್ತಿಯನ್ನು ಸ್ಥಾಪಿಸಲು ಮುಂದಾಗಿದೆ. ಈ ವಿಷಯವೇ ಈಗ ಮಾಝಾ ಬರೇಠಾ ಗ್ರಾಮಸ್ಥರ ಚಿಂತೆಗೆ ಕಾರಣವಾಗಿದೆ. ತಲೆಮಾರುಗಳಿಂದ ತಾವು ವಾಸಿಸುತ್ತಿದ್ದ ಮನೆ ಹಾಗೂ ಜಮೀನುಗಳನ್ನು ಕಳೆದುಕೊಳ್ಳುವ ಭೀತಿ ಗ್ರಾಮಸ್ಥರಲ್ಲಿ ಮನೆ ಮಾಡಿದೆ.

ಅಯೋಧ್ಯೆಯಲ್ಲಿ ಭವ್ಯ ರಾಮ ಮಂದಿರ ನಿರ್ಮಾಣದೊಂದಿಗೆ ಸಂಪೂರ್ಣ ಅಯೋಧ್ಯೆಯ ಸ್ವರೂಪವನ್ನೇ ಬದಲಿಸಲು ಸರ್ಕಾರ ಹಲವಾರು ಮಹತ್ವಾಕಾಂಕ್ಷಿ ಯೋಜನೆಗಳನ್ನು ಘೋಷಿಸಿದೆ. ಇಲ್ಲಿನ ಪರಿಕ್ರಮಾ ಮಾರ್ಗದ ಸೌಂದರ್ಯಕರಣಕ್ಕಾಗಿ 3 ಸಾವಿರ ಕೋಟಿ ರೂಪಾಯಿಗಳನ್ನು ಖರ್ಚು ಮಾಡಲಾಗುತ್ತಿದೆ. ಹಲವಾರು ಸೇತುವೆಗಳನ್ನು ಪರಿಕ್ರಮಾ ಮಾರ್ಗದ ಮಧ್ಯೆ ನಿರ್ಮಾಣ ಮಾಡಲಾಗುತ್ತಿದೆ. ಹಾಗೆಯೇ ಅಯೋಧ್ಯೆಯಿಂದ ಚಿತ್ರಕೂಟದವರೆಗೆ 165 ಕಿಮೀ ಉದ್ದದ ರಸ್ತೆ ನಿರ್ಮಾಣ ಮಾಡುವ ಯೋಜನೆಯನ್ನೂ ಹಾಕಿಕೊಳ್ಳಲಾಗಿದೆ.

ಪ್ರವಾಸೋದ್ಯಮದ ಬೆಳವಣಿಗೆಯ ದೃಷ್ಟಿಯಿಂದ ಈ ಪ್ರದೇಶದಲ್ಲಿ ಬೃಹತ್​ ಸಾರಿಗೆ ಸಂಪರ್ಕ ವ್ಯವಸ್ಥೆಗಳನ್ನು ನಿರ್ಮಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮುಂದಾಗಿದೆ. ಆಗಸ್ಟ್​ 1 ರಂದು ನಡೆಯಲಿರುವ ರಾಮ ಮಂದಿರ ಶಿಲಾನ್ಯಾಸದೊಂದಿಗೆ 1 ಸಾವಿರ ಕೋಟಿ ರೂ. ಮೊತ್ತದ 51 ಯೋಜನೆಗಳಿಗೂ ಶಂಕು ಸ್ಥಾಪನೆ ನೆರವೇರಲಿದೆ.

ಮಾಝಾ ಬರೇಠಾ ಗ್ರಾಮದಲ್ಲಿ 251 ಮೀಟರ್ ಎತ್ತರದ ಶ್ರೀ ರಾಮಚಂದ್ರನ ಪ್ರತಿಮೆ ನಿರ್ಮಾಣವೂ ಈ ಯೋಜನೆಯ ಭಾಗವಾಗಿದೆ. ಅಯೋಧ್ಯೆಯಲ್ಲಿ ನಿರ್ಮಾಣವಾಗಲಿರುವ ನಿಯೋಜಿತ ಅಂತಾರಾಷ್ಟ್ರೀಯ ಬಸ್​ ನಿಲ್ದಾಣದ ಅತಿ ಸನಿಹದಲ್ಲೇ ಈ ಮಾಝಾ ಬರೇಠಾ ಗ್ರಾಮ ಇರುವುದು ಗಮನಾರ್ಹ.

ಆದರೆ ಯುದ್ಧೋಪಾದಿಯಲ್ಲಿ ಅಯೋಧ್ಯೆಯಲ್ಲಿ ಆರಂಭವಾಗಲಿರುವ ಅಭಿವೃದ್ಧಿ ಕಾಮಗಾರಿಗಳಿಂದ ತಾವು ಸ್ಥಾನಪಲ್ಲಟಗೊಳ್ಳಲಿರುವ ಆತಂಕ ಈಗ ಮಾಝಾ ಬರೇಠಾ ಗ್ರಾಮಸ್ಥರನ್ನು ಕಾಡುತ್ತಿದೆ. ಗ್ರಾಮವನ್ನು ಸ್ವಾಧೀನ ಪಡಿಸಿಕೊಳ್ಳುವ ಬಗ್ಗೆ ಗ್ರಾಮ ಪಂಚಾಯಿತಿಗೇ ಗೊತ್ತಿಲ್ಲ! ಅಲ್ಲದೇ ಇಡೀ ಪ್ರದೇಶವನ್ನು ಅಯೋಧ್ಯಾ ನಗರ ಪಾಲಿಕೆ ಅಡಿಯಲ್ಲಿ ತರಲಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಸದ್ಯ ಮಾಝಾ ಬರೇಠಾ ಗ್ರಾಮದ ಕೆಲ ಭಾಗ ಅಯೋಧ್ಯಾ ನಗರ ಪಾಲಿಕೆ ವ್ಯಾಪ್ತಿಗೊಳಪಟ್ಟಿದೆ. ಈ ಪ್ರದೇಶದಲ್ಲಿನ ವಸತಿ ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳಲು ಸರಕಾರ ಮುಂದಾಗಿದೆ. ಈ ವಿಷಯವೇ ಪ್ರಸ್ತುತ ಗ್ರಾಮಸ್ಥರ ಆತಂಕಕ್ಕೆ ಕಾರಣವಾಗಿದೆ. ಇಷ್ಟಾದರೂ ಭೂ ಸ್ವಾಧೀನ ಕುರಿತಂತೆ ಆಕ್ಷೇಪಣೆ ಸಲ್ಲಿಸಲು ಗ್ರಾಮಸ್ಥರಿಗೆ ಕಾಲಾವಕಾಶ ನೀಡಲಾಗಿದೆ. ಇದೇ ವರ್ಷದ ಜನೇವರಿ 28 ರಂದು ಭೂಸ್ವಾಧೀನ ವಿರೋಧಿಸಿ ಗ್ರಾಮಸ್ಥರು ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು. ಆದರೆ ಇಲ್ಲಿಯೂ ಗ್ರಾಮಸ್ಥರಿಗೆ ಅಂಥ ನಿರಾಳತೆ ಸಿಗಲಿಲ್ಲ. ಭೂಸ್ವಾಧೀನ ಕಾಯ್ದೆ 2013 ರ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಿ ಸರಕಾರ ಭೂಸ್ವಾಧೀನ ಮಾಡಿಕೊಳ್ಳಬಹುದು ಎಂದು ಹೈಕೋರ್ಟ್​ ಹೇಳಿತ್ತು.

ಸದ್ಯ ತಮ್ಮ ಮನೆ, ಮಠಗಳನ್ನು ಉಳಿಸಿಕೊಡುವಂತೆ ಮಾಝಾ ಬರೇಠಾ ಗ್ರಾಮಸ್ಥರು ಆ ಶ್ರೀರಾಮಚಂದ್ರನಿಗೇ ಮೊರೆ ಇಟ್ಟಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.