ನವದೆಹಲಿ: ಅಯೋಧ್ಯ ಭೂ ವಿವಾದಕ್ಕೆ ಸಂಬಂಧಿಸಿದಂತೆ ದಶಕಗಳ ಹೋರಾಟಕ್ಕೆ ಸರ್ವೋಚ್ಛ ನ್ಯಾಯಾಲಯ ತೆರೆ ಎಳೆಯಲು ಯತ್ನಿಸುತ್ತಿದ್ದು, ಈ ನಿಟ್ಟಿನಲ್ಲಿ ಮಧ್ಯಸ್ಥಿಕೆದಾರರನ್ನು ಅಂತಿಮಗೊಳಿಸಿ ಆದೇಶ ಹೊರಡಿಸಿದೆ.
ಮಹತ್ವದ ಆದೇಶದಲ್ಲಿ ಜಸ್ಟೀಸ್ ಎಫ್.ಎಂ.ಖಲೀಫುಲ್ಲಾ (ನಿವೃತ್ತ) ರನ್ನು ಸಂಧಾನ ಸಮಿತಿಯ ಮುಖ್ಯಸ್ಥರನ್ನಾಗಿ ನೇಮಕ ಮಾಡಿದೆ. ಶ್ರೀ ಶ್ರೀ ರವಿಶಂಕರ್ ಗುರೂಜಿ ಹಾಗೂ ಅಡ್ವೋಕೇಟ್ ಶ್ರೀರಾಮ್ ಪಂಚು ಉಳಿದ ಸದಸ್ಯರನ್ನಾಗಿ ನೇಮಕ ಮಾಡಿ ಆದೇಶಿಸಿದೆ.
ಸದ್ಯ ಆಯ್ಕೆಯಾಗಿರುವ ಸಂಧಾನ ಸಮಿತಿಯ ಪ್ರಮುಖರ ಬಗ್ಗೆ ಮಾಹಿತಿ ನೀಡುವ ಪ್ರಯತ್ನ ಇಲ್ಲಿದೆ..
Justice(Retd)FM Ibrahim Kalifullah on Ram Janmabhoomi-Babri Masjid land dispute case: I understand SC has appointed a mediation committee headed by me. I'm yet to received order copy.I can say if committee has been constituted we'll take every effort to resolve the issue amicably pic.twitter.com/AgSfBzfuGU
— ANI (@ANI) March 8, 2019 " class="align-text-top noRightClick twitterSection" data="
">Justice(Retd)FM Ibrahim Kalifullah on Ram Janmabhoomi-Babri Masjid land dispute case: I understand SC has appointed a mediation committee headed by me. I'm yet to received order copy.I can say if committee has been constituted we'll take every effort to resolve the issue amicably pic.twitter.com/AgSfBzfuGU
— ANI (@ANI) March 8, 2019Justice(Retd)FM Ibrahim Kalifullah on Ram Janmabhoomi-Babri Masjid land dispute case: I understand SC has appointed a mediation committee headed by me. I'm yet to received order copy.I can say if committee has been constituted we'll take every effort to resolve the issue amicably pic.twitter.com/AgSfBzfuGU
— ANI (@ANI) March 8, 2019
ಜಸ್ಟೀಸ್ ಎಫ್.ಎಂ.ಖಲೀಫುಲ್ಲಾ:
68 ವರ್ಷದ ಜಸ್ಟೀಸ್ ಎಫ್.ಎಂ.ಖಲೀಫುಲ್ಲಾ ದಿ.ಎಂ.ಫಕೀರ್ ಮೊಹಮ್ಮದ್ ಅವರ ಪುತ್ರ. 1975ರಲ್ಲಿ ಆಗಸ್ಟ್ನಲ್ಲಿ ಅಡ್ವೋಕೇಟ್ ಆಗಿ ವೃತ್ತಿ ಪ್ರಾರಂಭ ಮಾಡಿದ್ದರು. 2000 ಇಸವಿಯಲ್ಲಿ ಜಸ್ಟೀಸ್ ಖಲೀಫುಲ್ಲಾ ಮದ್ರಾಸ್ ಹೈಕೋರ್ಟ್ನ ಖಾಯಂ ನ್ಯಾಯಮೂರ್ತಿಯಾಗಿ ನಿಯುಕ್ತಿಗೊಂಡಿದ್ದರು. 2 ಎಪ್ರಿಲ್ 2012ರಲ್ಲಿ ಖಲೀಫುಲ್ಲಾ ಸುಪ್ರೀಂ ಕೋರ್ಟ್ನ ನ್ಯಾಯಮೂರ್ತಿಯಾಗಿ ಆಯ್ಕೆಯಾಗಿದ್ದರು. 22 ಜುಲೈ 2016ರಲ್ಲಿ ಹುದ್ದೆಯಿಂದ ನಿವೃತ್ತಿ ಹೊಂದಿದರು.
ಶ್ರೀ ಶ್ರೀ ರವಿಶಂಕರ್ ಗುರೂಜಿ:
62 ವರ್ಷದ ಶ್ರೀ ಶ್ರೀ ರವಿಶಂಕರ್ ಗುರೂಜಿ ಆಧ್ಯಾತ್ಮ ಲೋಕದ ಪರಿಚಿತ ಹೆಸರು. ದೇಶ-ವಿದೇಶಗಳಲ್ಲಿ ಹಲವಾರು ಆಧ್ಯಾತ್ಮಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದಾರೆ. ಆರ್ಟ್ ಆಫ್ ಲಿವಿಂಗ್ ಮೂಲಕ ಶ್ರೀ ಶ್ರೀ ರವಿಶಂಕರ್ ಗುರೂಜಿ ಜನಪ್ರಿಯತೆ ಗಳಿಸಿದ್ದಾರೆ.
Respecting everyone, turning dreams to reality, ending long-standing conflicts happily and maintaining harmony in society - we must all move together towards these goals.#ayodhyamediation
— Sri Sri Ravi Shankar (@SriSri) March 8, 2019 " class="align-text-top noRightClick twitterSection" data="
">Respecting everyone, turning dreams to reality, ending long-standing conflicts happily and maintaining harmony in society - we must all move together towards these goals.#ayodhyamediation
— Sri Sri Ravi Shankar (@SriSri) March 8, 2019Respecting everyone, turning dreams to reality, ending long-standing conflicts happily and maintaining harmony in society - we must all move together towards these goals.#ayodhyamediation
— Sri Sri Ravi Shankar (@SriSri) March 8, 2019
ಶ್ರೀರಾಮ್ ಪಂಚು:
69 ವರ್ಷದ ಹಿರಿಯ ಅಡ್ವೋಕೇಟ್ ಆಗಿರುವ ಶ್ರೀರಾಮ್ ಪಂಚು 2005ರಲ್ಲಿ ಭಾರತದಲ್ಲಿ ಮೊದಲ ಕೋರ್ಟ್ಗೆ ಒಳಪಟ್ಟ ಮಧ್ಯಸ್ಥಿಕೆ ಚೇಂಬರ್ ಸ್ಥಾಪನೆ ಮಾಡಿದ್ದರು. ಸಂಧಾನದ ಕುರಿತಂತೆ ಪಂಚು ಎರಡು ಪುಸ್ತಕಗಳನ್ನು ಬರೆದಿದ್ದಾರೆ. ಸುಪ್ರೀಂಕೋರ್ಟ್ ಇವರನ್ನು ವಿಶಿಷ್ಟ ಮಧ್ಯಸ್ಥಿಕೆದಾರ ಎಂದು ಹೊಗಳಿತ್ತು. ಭಾರತದ ಅತ್ಯುತ್ತಮ ಮಧ್ಯಸ್ಥಿಕೆದಾರ ಎಂದು ಕರೆಸಿಕೊಳ್ಳುವ ಶ್ರೀರಾಮ್ ಪಂಚು ಸದ್ಯ ದಶಕಗಳ ಹೋರಾಟಕ್ಕೆ ಸುಖಾಂತ್ಯ ಹಾಡುತ್ತಾರಾ ಎನ್ನುವ ಕುತೂಹಲ ಮೂಡಿಸಿದ್ದಾರೆ.